ತುಂಗಾ ನದಿ ರೈಲ್ವೆ ಬ್ರಿಡ್ಜ್‌ ಕೆಳಗೆ ಶವ ಪತ್ತೆ ಪ್ರಕರಣ ಸಂಬಂಧ ಕೋಟೆ ಪೊಲೀಸ್‌ ಸ್ಟೇಷನ್‌ನಿಂದ ಹೊರಬಿತ್ತು ಈ ಪ್ರಕಟಣೆ

announcement came from the kote police station in connection with the recovery of a body under the Tunga river railway bridge

ತುಂಗಾ ನದಿ ರೈಲ್ವೆ ಬ್ರಿಡ್ಜ್‌ ಕೆಳಗೆ ಶವ ಪತ್ತೆ ಪ್ರಕರಣ ಸಂಬಂಧ ಕೋಟೆ ಪೊಲೀಸ್‌ ಸ್ಟೇಷನ್‌ನಿಂದ ಹೊರಬಿತ್ತು ಈ ಪ್ರಕಟಣೆ
Tunga river railway bridge

Shivamogga  Apr 16, 2024   Tunga river railway bridge   ಶಿವಮೊಗ್ಗದ ಹೊಳೆ ಬಸ್‌ ಸ್ಟಾಪ್‌ ಬಳಿಯಲ್ಲಿ ತುಂಗಾ ರೈಲ್ವೆ ಬ್ರಿಡ್ಜ್‌ ಕೆಳಕ್ಕೆ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು. ಅಲ್ಲದೆ ಈತ ಚಲಿಸುವ ರೈಲಿನಿಂದ ಬಿದ್ದು ಸಾವನ್ನಪ್ಪಿರಬಹುದು ಎಂದು ಸ್ಥಳೀಯರು ಶಂಕಿಸಿದ್ದರು. ಇದೀಗ ಈತನ ವಿಚಾರವಾಗಿ ಕೋಟೆ ಪೊಲೀಸ್‌ ಸ್ಟೇಷನ್‌ ಪೊಲೀಸರು ಪ್ರಕಟಣೆಯೊಂದನ್ನ ಹೊರಡಿಸಿದ್ದಾರೆ. 

ಅನಾಮದೇಯ ವ್ಯಕ್ತಿಯ ಶವ ಪತ್ತೆ; ವಾರಸ್ಸುದಾರರ ಪತ್ತೆಗೆ ಮನವಿ

ಏಪ್ರಿಲ್‌ 13 ರಂದು ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಹೊಳೆ ಬಸ್ ಸ್ಟ್ಯಾಪ್ ರೈಲ್ವೇ ಬ್ರಿಡ್ಜ್ ಕೆಳಗೆ ತುಂಗಾ ನದಿಯಲ್ಲಿ ಸುಮಾರು 35 ರಿಂದ 40 ವರ್ಷದ ಅನಾಮದೇಯ ವ್ಯಕ್ತಿಯು ಮೃತಪಟ್ಟಿದ್ದು, ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. 

ಈತನ ಚಹರೆ ಸುಮಾರು 05.02 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ ಹೊಂದಿದ್ದು, ತಲೆಯಲ್ಲಿ 2 ಇಂಚು ಉದ್ದದ ಕಪ್ಪು ಕೂದಲು ಹಾಗೂ ಕುರುಚಲು ಗಡ್ಡ ಇರುತ್ತದೆ. ಮೃತನ ಮೈಮೇಲೆ ತಿಳಿಹಸಿರು ತಿಳಿಕೇಸರಿ  ಮಿಶ್ರಿತ ಬಣ್ಣದ ತುಂಬುತೋಳಿನ ಶರ್ಟ್ ಹಾಗೂ ನೀಲಿ ಬಣ್ಣದ ನೈಟ್ ಪ್ಯಾಂಟ್  ಧರಿಸಿರುತ್ತಾನೆ.

ಈ ಮೃತನ ವಾರಸ್ಸುದಾರರು ಅಥವಾ ವಿಳಾಸ ಪತ್ತೆಯಾಗಿರುವುದಿಲ್ಲ.  ಈ ವ್ಯಕ್ತಿಯ ವಾರಸ್ಸುದಾರರು ಪತ್ತೆಯಾದಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.