ನಮ್ಮ ಅಪ್ಪನ ಆಸ್ತಿ ಇಲ್ಲ : ಸಿಟ್ಟಾದ ಸಂಸದ ಬಿ.ವೈ. ರಾಘವೇಂದ್ರ ! ಏನಾಯ್ತು? ಏನು ಹೇಳಿದ್ರು ಓದಿ

don't own my father's property: Angry MP B.Y. Raghavendra criticized Ayanur Manjunath

ನಮ್ಮ ಅಪ್ಪನ ಆಸ್ತಿ ಇಲ್ಲ  :  ಸಿಟ್ಟಾದ ಸಂಸದ ಬಿ.ವೈ. ರಾಘವೇಂದ್ರ ! ಏನಾಯ್ತು? ಏನು ಹೇಳಿದ್ರು ಓದಿ
MP B.Y. Raghavendra

Shivamogga Feb 15, 2024 |   MP B.Y. Raghavendra ಸಂಸದ ಬಿ.ವೈ.ರಾಘವೇಂದ್ರ ರವರ ಸಿಟ್ಟು ಹೊರಬಿದ್ದಿದೆ. ತಮ್ಮ ವಿರುದ್ಧದ ಟೀಕೆಗೆ ನೇರ ಪದ ಬಳಸಿ ಮಾತನಾಡಿದ್ದಾರೆ. ನಿನ್ನೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಅಭಿವೃದ್ಧಿಗಳು ಬಿಎಸ್​ವೈ ಕುಟುಂಬದ ಆಸ್ತಿಗಳು ಇರುವ ಸ್ಥಳಗಳಲ್ಲಿ ವೇಗವಾಗಿ ನಡೆಯುತ್ತಿವೆ ಎಂಬ ಆರೋಪಕ್ಕೆ ಸ್ಪಷ್ಟವಾದ ತಿರುಗೇಟು ನೀಡಿದ್ದಾರೆ. ಸವಳಂಗ ರೋಡ್ ನಲ್ಲಿ ನಮ್ಮ ಅಪ್ಪನ ಆಸ್ತಿ ಇಲ್ಲ ಆದರೆ ಸಾಗರ ರಸ್ತೆಯಲ್ಲಿ ಆಯನೂರು ಮಂಜುನಾಥ್ ಫಾರ್ಮರ್ ಹೌಸ್ ಇದೆಯಲ್ಲ ಎಂದು ಕಿಡಿಕಾರಿದರು.

ಸಂಸದ ಬಿ.ವೈ.ರಾಘವೇಂದ್ರ ರವರ ಹೇಳಿಕೆ

ವಿಐಎಸ್ಎಲ್ ಉಳಿಸಲು ಹೋರಾಟ ನಿರಂತರವಾಗಿದೆ ಆಯನೂರು ಮಂಜುನಾಥ್ ನಮ್ಮ ಪಕ್ಷದ ಕಡೆ ಬೆರಳು ಮಾಡಿ ತೋರಿಸುವುದು ಬಿಡಬೇಕು. ಯಾವ ಸಂದರ್ಭದಲ್ಲಿ ಉತ್ತರ ಕೊಡಬೇಕು ಉತ್ತರ ಕೊಡುತ್ತೇವೆ 

ಮಧು ಬಂಗಾರಪ್ಪ ಸಹ ಬಿಚ್ಚಿಡುತ್ತೇನೆ ಅನ್ನುತ್ತಾರೆ ಸಮಯ ಬಂದಾಗ ನಾವು ಬಿಚ್ಚಿಡುತ್ತೇವೆ ಅವರು ಸಹ ಬಿಚ್ಚಿಡಲಿ. 

ಶಿವಮೊಗ್ಗ-ಶಿಕಾರಿಪುರ ರಸ್ತೆಯಲ್ಲಿ ಎರಡು ಟೋಲ್ ಆಗುತ್ತಿದೆ, ಕಾಂಗ್ರೆಸ್ ಟೋಲ್ ಹಾಕಿ ಹಣ ವಸೂಲಿ ಮಾಡಲು ಹೊರಟಿದೆ. ಟೋಲ್ ಆಗುತ್ತಿರೋದನ್ನು ನಾವು ವಿರೋಧಿಸುತ್ತೇವೆ. 

ಡಿ.ಕೆ ಸುರೇಶ್ ಹೇಳಿಕೆಯನ್ನು ಆಯನೂರು ಮಂಜುನಾಥ್  ಸರ್ಮರ್ಥಿಸಿಕೊಂಡಿದ್ದಾರೆ. ಹಾಗಾಗಿ  ಕಪಟ ದೇಶಭಕ್ತರು ಯಾರು ಎಂಬುದನ್ನು ಅವರು ಹೇಳಬೇಕು.ದೇಶವನ್ನು ವಿಭಜನೆ ಮಾಡಿದ್ದು ಇದೇ ಕಾಂಗ್ರೆಸ್ . ಇವರಿಂದ ರಾಷ್ಟ್ರಭಕ್ತಿ ಕಲಿಯುವ ಅಗತ್ಯ ನಮಗಿಲ್ಲ

ಬಿಜೆಪಿಯಿಂದ ನಾಲ್ಕು ಸದನ ಆಯ್ಕೆ ಆಗಿದ್ದವರು ಇವರು ,ಈಗ ಕಾಂಗ್ರೆಸ್ ನಲ್ಲಿ ಯಾವುದೋ‌ ಹುದ್ದೆ ಕೊಟ್ಟಿದ್ದಾರೆ ಅಂತ ಏನೇನೋ ಮಾತಾಡೋದಲ್ಲ

ಡಿ.ಕೆ.ಸುರೇಶ್ ಹೇಳಿಕೆ ಬಗ್ಗೆ ಈಶ್ವರಪ್ಪನವರು ಹೇಳಿದ್ದರಲ್ಲಿ ತಪ್ಪಿಲ್ಲ. ದೇಶ ವಿಭಜನೆ ಹೇಳಿಕೆ ನೀಡುವವರಿಗೆ ಸರಿಯಾದ ಕಾನೂನು ತನ್ನಿ ಎಂದಿದ್ದಾರೆ. ಅಷ್ಟೇ ಅವರೆಲ್ಲೂ ಕಡಿ ಬಡಿ ಎಂದಿಲ್ಲ.

ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ಟವರ್‌ಗಳ ಬಗ್ಗೆ ಬಿಡಿ ಇದೆಲ್ಲ ಜನರಿಗೆ ಗೊತ್ತು. ಇದೀಗ ಇವರು ನಂಬಿ ಕೊಂಡ ಭಾಗ್ಯ ಕೈ ಕೊಡುತ್ತಿದೆ. ಹಾಗಾಗಿ ದೆಹಲಿಯಲ್ಲಿ ಪ್ರತಿಭಟನೆ ಮಾಡಲು ಹೋಗಿದ್ದಾರೆ. ಆಯನೂರು ಮಂಜುನಾಥ್ ಅವರಿಗೆ ಅಭಿವೃದ್ಧಿ ಬಗ್ಗೆ ಕೇಳುವ ನೈತಿಕತೆಯೇ ಇಲ್ಲ 

ಶರಾವತಿ ಸಮಸ್ಯೆ ಬಗೆಹರಿಸಲು ನಾವು ಸಹ ಹೋರಾಟ ಮಾಡುತ್ತಿದ್ದೇವೆ, ಸವಳಂಗ ರೋಡ್ ನಲ್ಲಿ ನಮ್ಮ ಅಪ್ಪನ ಆಸ್ತಿ ಇಲ್ಲ ಆದರೆ ಸಾಗರ ರಸ್ತೆಯಲ್ಲಿ ಆಯನೂರು ಮಂಜುನಾಥ್ ಫಾರ್ಮರ್ ಹೌಸ್ ಇದೆಯಲ್ಲ