SHIVAMOGGA NEWS TODAY

ಅಪರಿಚಿತನಿಂದ ಬಂದ ವಿಡಿಯೋ ಕಾಲ್​ ರಿಸೀವ್​ ಮಾಡಿದ ಮಹಿಳೆ ಹೋಗಿದ್ದು ಸ್ಟೇಷನ್​ಗೆ, ಏನಿದು ಪ್ರಕರಣ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ : ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ ವ್ಯಾಟ್ಸ್​​ಪ್​ ಕಾಲ್​ ಮಾಡಿ ಖಾಸಗಿ ಅಂಗವನ್ನು ಪ್ರದರ್ಶಿಸಿದ್ದಾನೆ ಎಂದು ಆರೋಪಿಸಿ ಮಹಿಳೆ ಶಿವಮೊಗ್ಗದ ಸಿಇಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

ಘಟನೆ ವಿವರ

ಶಿವಮೊಗ್ಗದ (ಊರು ಹಾಗೂ ಮಹಿಳೆಯ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ.) ಮಹಿಳೆಯೊಬ್ಬರು ಹೀಗೆ ಮೊಬೈಲ್​ ನೋಡುತ್ತಿದ್ದಾಗ  ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸ್‌ಆ್ಯಪ್ ಸಂದೇಶವೊಂದು ಬಂದಿತ್ತು. ನಾನು ನಿಮಗೆ ಪರಿಚಯವಿರುವ ವ್ಯಕ್ತಿ, ವಿಡಿಯೋ ಕಾಲ್ ಮಾಡುತ್ತೇನೆ ರಿಸೀವ್ ಮಾಡಿ, ನಾನು ಯಾರು ಎಂದು ತಿಳಿಯುತ್ತದೆ ಎಂದು ಆ ವ್ಯಕ್ತಿ ನಂಬಿಸಿದ್ದ. ಇದನ್ನು ನಂಬಿದ ಮಹಿಳೆ ಕಾಲ್ ರಿಸೀವ್ ಮಾಡಿದಾಗ, ಆ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದಾನೆ.

ಮೊದಲ ಎರಡು ಬಾರಿ ಕರೆ ಬಂದಾಗ ಮಹಿಳೆ ತನ್ನ ಮುಖ ಕಾಣದಂತೆ ಕ್ಯಾಮೆರಾ ತಿರುಗಿಸಿ ಕಾಲ್ ರಿಸೀವ್ ಮಾಡಿದ್ದರು. ಆದರೆ ವ್ಯಕ್ತಿ ತನ್ನ ಮುಖ ತೋರಿಸಿರಲಿಲ್ಲ. ಕೂಡಲೇ ಎಚ್ಚೆತ್ತ ಮಹಿಳೆ, ರಾತ್ರಿ ಮೊಬೈಲ್‌ನಲ್ಲಿ ಸ್ಕ್ರೀನ್ ರೆಕಾರ್ಡಿಂಗ್ (Screen Record) ಆನ್ ಮಾಡಿಕೊಂಡು ಆ ನಂಬರ್‌ಗೆ ವಿಡಿಯೋ ಕಾಲ್ ಮಾಡಿದ್ದಾರೆ. ಆಗ ಆ ವ್ಯಕ್ತಿ ತನ್ನ ಖಾಸಗಿ ಅಂಗಗಳನ್ನು ಪ್ರದರ್ಶಿಸಿದ್ದು, ಇದನ್ನು ಮಹಿಳೆ ಸಾಕ್ಷ್ಯವಾಗಿ ರೆಕಾರ್ಡ್ ಮಾಡಿಕೊಂಡಿದ್ದಾರೆ. 

ಈ ಹಿನ್ನೆಲೆ ಕಿರುಕುಳ ನೀಡುತ್ತಿರುವ ವ್ಯಕ್ತಿಯನ್ನು ಬಂಧಿಸುವಂತೆ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕ್ರಣ ದಾಖಲಿಸಿದ್ದಾರೆ.

Shimoga CEN Police Man Shows Private Parts Shimoga Investment Scamacebook Shimoga Businessman
Shimoga CEN Police Man Shows Private Parts Shimoga
shivamogga car decor sun control house
shivamogga car decor sun control house

Shimoga CEN Police Man Shows Private Parts

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.