ಶಿವಮೊಗ್ಗ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ನಸುಕಿನಲ್ಲಿ ಪೊಲೀಸರ ರೇಡ್‌!

Police raids in most parts of Shivamogga district in the wee hours

ಶಿವಮೊಗ್ಗ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ನಸುಕಿನಲ್ಲಿ ಪೊಲೀಸರ ರೇಡ್‌!
Police raid

Shivamogga  Apr 13, 2024    ಶಿವಮೊಗ್ಗ ನಗರ ಸೇರಿದಂತೆ ಹಲೆವೆಡೆ ಇವತ್ತು ಬೆಳಗ್ಗೆ ಪೊಲೀಸ್‌ ರೇಡ್‌ ನಡೆದಿದೆ. ರೌಡಿಶೀಟರ್‌ಗಳ ಮನೆಗಳಿಗೆ ತೆರಳಿ ದಾಳಿ ನಡೆಸಿದ ಪೊಲೀಸ್‌ ಸಿಬ್ಬಂದಿ, ಪರಿಶೀಲನೆ ನಡೆಸಿದ್ದಾರೆ. ಈ ಮೂಲಕ ರೌಡಿಶೀಟರ್‌ಗಳಿಗೆ ಶಾಕ್‌ ಕೊಟ್ಟಿದ್ದಾರೆ. 

police raid

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಿತದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ  ಈ ದಿನ ದಿನಾಂಕಃ 13-04-2024  ರಂದು  ಬೆಳಗಿನ ಜಾವ ಮಿಥುನ್ ಕುಮಾರ್ ಜಿ.ಕೆ  ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಈ ರೇಡ್‌ ನಡೆಸಲಾಗಿದೆ.  

police raid

ಏಕಕಾಲದಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ರೌಡಿ ಆಸಾಮಿಗಳ ಮನೆಗಳ ಮೇಲೆ ದಾಳಿ ಮಾಡಿದ ವಿವಿಧ ಪೊಲೀಸ್‌ ಅಧಿಕಾರಿಗಳ ತಂಡ ರೌಡಿ ಆಸಾಮಿಗಳ  ಮನೆಗಳನ್ನು ತಪಾಸಣೆ ನಡೆಸಿದೆ. ಅಲ್ಲದೆ ರೌಡಿ ಆಸಾಮಿಗಳ ಹಾಜರಾತಿ, ಹಾಲಿ ಮಾಡುತ್ತಿರುವ ಕೆಲಸ, ಮನೆಯಲ್ಲಿ ಮಾದಕ ವಸ್ತು ಹಾಗೂ ಮಾರಕಾಸ್ತ್ರಗಳನ್ನು ಇಟ್ಟುಕೊಂಡಿರುವ ಬಗ್ಗೆ ಪರಿಶೀಲನೆ ನಡೆಸಿದೆ. 

police raid

ಜೊತೆಯಲ್ಲಿ  ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಮತ್ತು ಶಾಂತಿಗೆ ಭಂಗವನ್ನುಂಟು ಮಾಡುವಂತಹ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದೆ