BREAKING | ಹೊಳೆ ಬಸ್‌ ಸ್ಟಾಪ್‌ ಬಳಿ ತುಂಗಾ ಸೇತುವೆಯಿಂದ ಬಿದ್ದು ವ್ಯಕ್ತಿ ಸಾವು! ರೈಲಿನಲ್ಲಿ ಹೋಗ್ತಿದ್ದಾಗ ಘಟನೆ

BREAKING | Man dies after falling off Tunga bridge near Hole bus stop The incident took place while on the train

BREAKING |  ಹೊಳೆ ಬಸ್‌ ಸ್ಟಾಪ್‌ ಬಳಿ ತುಂಗಾ ಸೇತುವೆಯಿಂದ ಬಿದ್ದು ವ್ಯಕ್ತಿ ಸಾವು! ರೈಲಿನಲ್ಲಿ ಹೋಗ್ತಿದ್ದಾಗ ಘಟನೆ
Tunga bridge ,Hole bus stop

Shivamogga  Apr 13, 2024   ಶಿವಮೊಗ್ಗ ನಗರದ ಹೊಳೆ ಬಸ್‌ ನಿಲ್ದಾಣದ ಬಳಿ ಸಿಗುವ ತುಂಗಾ ಸೇತುವೆಯಿಂದ ವ್ಯಕ್ತಿಯೊಬ್ಬರು ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಸಾವಿಗೆ ಕಾರಣ ತಿಳಿದುಬಂದಿಲ್ಲ. ಚಲಿಸುತ್ತಿದ್ದ ಟ್ರೈನ್‌ನಿಂದ ಕೆಳಕ್ಕೆ ಬಿದ್ದು ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸ್ತಿದ್ದಾರೆ. 

ಚಲಿಸುವ ರೈಲಿನಿಂದ 30-40 ವರ್ಷದೊಳಗೆ ಇರಬಹುದಾದ ವ್ಯಕ್ತಿಯು ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಅವರು ಹೇಗೆ ಬಿದ್ದರು ಎಂಬುದು ಗೊತ್ತಾಗಿಲ್ಲ. ಕೆಳಕ್ಕೆ ಬಿದ್ದ ಬೆನ್ನಲ್ಲೆ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಇನ್ನೂ ಈ ವಿಚಾರ ಗೊತ್ತಾಗುತ್ತಲೇ ತುಂಗಾ ಸೇತುವೆ ಮೇಲೆ ಜನ ಜಾತ್ರೆ ಜಮಾಯಿಸಿತ್ತು. ಎನಾಯ್ತು ಎಂದು ನೋಡಲು ವಾಹನ ಸವಾರರು ಸಹ ಮುಗಿಬಿದ್ದರು. ಹೀಗಾಗಿ ಕೆಲವೊತ್ತು ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. 

ಇನ್ನೂ ಸ್ಥಳಕ್ಕೆ ಕೋಟೆ ಸ್ಟೇಷನ್‌ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸದ್ಯದ ಮಟ್ಟಿಗೆ ಮೃತರು ಯಾರು ಎಂಬ ಗುರುತು ಪತ್ತೆಯಾಗಿಲ್ಲ.