ಅಣ್ಣ ರಾಘವೇಂದ್ರ ಸೆಂಟ್ರಲ್ ಮಿನಿಸ್ಟರ್, ತಮ್ಮ ವಿಜಯೇಂದ್ರ ಮುಖ್ಯಮಂತ್ರಿ!

elder brother Raghavendra is the Central Minister and his brother Vijayendra is the Chief Minister.

ಅಣ್ಣ ರಾಘವೇಂದ್ರ ಸೆಂಟ್ರಲ್ ಮಿನಿಸ್ಟರ್, ತಮ್ಮ ವಿಜಯೇಂದ್ರ ಮುಖ್ಯಮಂತ್ರಿ!
elder brother Raghavendra , Central Minister,Vijayendra , Chief Minister.

Shivamogga Mar 5, 2024 | elder brother Raghavendra , Central Minister,Vijayendra , Chief Minister.  |  

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಗಣಪತಿ ಕೆರೆಯ ಸಮೀಪ ಈಡಿಗ ಸಮಾಜದ ವತಿಯಿಂದ ಶಕ್ತಿ ಸಾಗರ ಸಂಗಮ ಹಾಗೂ ಯಡಿಯೂರಪ್ಪ ನವರಿಗೆ ಸನ್ಮಾನ ಕಾರ್ಯಕ್ರಮ ನಡೆಯುತ್ತಿದೆ. ಈ ಸಮಾರಂಭದಲ್ಲಿ ಅವದೂತ ವಿನಯ್ ಗುರೂಜಿ  ಸಂಸದ ಬಿ.ವೈ.ರಾಘವೇಂದ್ರ ಮಾಡಿರುವ ಕೆಲಸದಿಂದ ಅವರು ಪ್ರಮಾಣ ವಚನ ಸ್ವೀಕಾರ ಮಾಡ್ತಾರೆ, ಪ್ರಮಾಣವಾಗಿ ಹೇಳ್ತೇನೆ ಭಗವಂತ ಪ್ರಮಾಣ ವಚನ ಸ್ವೀಕಾರ ಮಾಡುವ ಅನುಗ್ರಹವನ್ನು ಅವರಿಗೆ ಮಾಡುತ್ತಾರೆ.ಪ್ರಮಾಣ ವಚನ ಸ್ವೀಕರಿಸುವ ಶಕ್ತಿ ರಾಘವೇಂದ್ರ ನೀಡಲಿ ಎನ್ನುವ ಮೂಲಕ ರಾಘವೇಂದ್ರ ಕೇಂದ್ರ ಸಚಿವರಾಗ್ತಾರೆ ಎಂಬ ಭವಿಷ್ಯ‌ ನುಡಿದಿದ್ದಾರೆ. 

ಇನ್ನೊಂದೆಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಣಾವಾನಂದ ಸ್ವಾಮೀಜಿ ರಾಜ್ಯದ ಭವಿಷ್ಯದ ಮುಖ್ಯಮಂತ್ರಿ ವಿಜಯೇಂದ್ರ ಆಗಬೇಕು ಎಂಬುದು ನಮ್ಮ ಬಯಕೆ ಎಂದಿದ್ದಾರೆ. ಅದು ಯಡಿಯೂರಪ್ಪರವರ ಆಸೆ ಕೂಡ ಹೌದು ಎಂದ ಅವರು ಯಡಿಯೂರಪ್ಪರವರ ಋಣ ಸಮಾಜ ತೀರಿಸಬೇಕು. ದೇಶ ಕಂಡ ಅಪ್ರತಿಮ ರಾಜಕಾರಣಿ ಯಡಿಯೂರಪ್ಪ. ಮಾಜಿ ಮುಖ್ಯಮಂತ್ರಿ ಮಕ್ಕಳು ಹೇಗೆ ಇರಬೇಕೆಂಬುದು ರಾಘವೇಂದ್ರ ವಿಜಯೇಂದ್ರ ನೋಡಿ ಕಲಿಯಬೇಕು ಎಂದಿದ್ದಾರೆ.