ಸಂಸದ ಬಿವೈ ರಾಘವೇಂದ್ರ ಕೇಂದ್ರ ಸಚಿವರಾಗುತ್ತಾರೆ ಎಂದು ಭವಿಷ್ಯ ನುಡಿದ ಅವದೂತ ವಿನಯ್​ ಗುರೂಜಿ

Shivamogga Mar 5, 2024 | Vinay Guruji predicts , MP BY Raghavendr, , union minister| ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಗಣಪತಿ ಕೆರೆಯ ಸಮೀಪ ಈಡಿಗ ಸಮಾಜದ ವತಿಯಿಂದ ಶಕ್ತಿ ಸಾಗರ ಸಂಗಮ ಹಾಗೂ ಯಡಿಯೂರಪ್ಪ ನವರಿಗೆ ಸನ್ಮಾನ ಕಾರ್ಯಕ್ರಮ ನಡೆಯುತ್ತಿದೆ. ಈ ಸಮಾರಂಭದಲ್ಲಿ ಅವದೂತ ವಿನಯ್ ಗುರೂಜಿ ಮಹತ್ವದ ಭವಿಷ್ಯವೊಂದನ್ನ ನುಡಿದಿದ್ದಾರೆ. 

ಸಾಗರದ ಶಕ್ತಿ ಸಾಗರ ಸಮಾವೇಶದಲ್ಲಿ ಮಾತನಾಡಿದ  ವಿನಯ್ ಗುರೂಜಿ  ಸಂಸದ ಬಿ.ವೈ.ರಾಘವೇಂದ್ರ ಮಾಡಿರುವ ಕೆಲಸದಿಂದ ಅವರು ಪ್ರಮಾಣ ವಚನ ಸ್ವೀಕಾರ ಮಾಡ್ತಾರೆ, ಪ್ರಮಾಣವಾಗಿ ಹೇಳ್ತೇನೆ ಭಗವಂತ ಪ್ರಮಾಣ ವಚನ ಸ್ವೀಕಾರ ಮಾಡುವ ಅನುಗ್ರಹವನ್ನು ಅವರಿಗೆ ಮಾಡುತ್ತಾರೆ.ಪ್ರಮಾಣ ವಚನ ಸ್ವೀಕರಿಸುವ ಶಕ್ತಿ ರಾಘವೇಂದ್ರ ನೀಡಲಿ ಎನ್ನುವ ಮೂಲಕ ರಾಘವೇಂದ್ರ ಕೇಂದ್ರ ಸಚಿವರಾಗ್ತಾರೆ ಎಂಬ ಭವಿಷ್ಯ‌ ನುಡಿದಿದ್ದಾರೆ. 

ಇನ್ನೂ ಈ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಿಎಂ  ಬಿಎಸ್​ ಯಡಿಯೂರಪ್ಪ ಬಹಳ ಆತ್ಮೀಯತೆ ಪ್ರೀತಿ ವಿಶ್ವಾಸದಿಂದ ಸನ್ಮಾನ ಮಾಡಿದ್ದೀರಾ. ನನ್ನ ಜೀವನದ ಕೊನೆಯ ಉಸಿರು ಇರುವವರೆಗೆ ಈ ನಾಡಿನ ಕಲ್ಯಾಣಕ್ಕಾಗಿ ಶ್ರಮಿಸುತ್ತೇನೆ. ಕನ್ನಡದ ಆದರ್ಶ ಡಾ.ರಾಜಕುಮಾರ್ ಅವರು. ಜಾತಿ ಪದ್ದತಿ ಹೋರಾಟಕ್ಕೆ ಹೊಸ ದಾರಿ ತೋರಿಸಿದವರು‌ ನಾರಾಯಣಗುರು. ಸಮಾಜಸೇವೆಗೆ ಈಡಿಗ ಬಿಲ್ಲವ ಜಾತಿ ಹೆಸರುವಾಸಿಯಾಗಿದೆ ಎಂದರು. 

Leave a Comment