ವಿದ್ಯಾನಗರ ರೌಂಡ್ ಓವರ್ ಬ್ರಿಡ್ಜ್​​ ಮೇಲೆ ಅಪಘಾತ! ಡಿವೈಡರ್​ಗೆ ಡಿಕ್ಕಿ ಹೊಡೆದ ಲೋಡ್ ಗಾಡಿ

ಹಂಚಿಕೊಳ್ಳಿ
WhatsApp Facebook X Telegram

Shivamogga Mar 5, 2024   Vidyanagar round overbridge! ಶಿವಮೊಗ್ಗ ನಗರದ ವಿದ್ಯಾನಗರದ ಬಳಿಯಲ್ಲಿ ಹೊಳೆಹೊನ್ನೂರು ಕಡೆಗೆ ಹೋಗಲು ವೃತ್ತಾಕಾರಾದ ಮೇಲ್ಸುತುವೆ ನಿರ್ಮಾಣ ಮಾಡಲಾಗಿದೆ. ಈ ಸೇತುವೆ ಮೇಲೆ ಮೊದಲ ಅಪಘಾತ ಸಂಭವಿಸಿದೆ. 

ಸೇತುವೆ ಸಾರ್ವಜನಿಕ ಸಂಚಾರಕ್ಕೆ ತೆರೆದುಕೊಂಡು ಇನ್ನೂ ಸಹ ಹತ್ತು ದಿನಗಳಷ್ಟೆ ಕಳೆದಿದೆ. ಅಷ್ಟರಲ್ಲಿಯೇ ಈ ಅಪಘಾತ ಸಂಭವಿಸಿದೆ.  ಚಾಲಕನ ನಿಯಂತ್ರಣ ತಪ್ಪಿದ ಹೆವಿ ವೆಹಿಕಲ್​ವೊಂದು ಸೇತುವೆ ಮೇಲೆ ಅಪ್​ಸೆಟ್ ಆಗಿದೆ. 

ಲೋಡ್ ಗಾಡಿ ಲಾರಿಯೊಂದು ಮೇಲ್ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದು ಲಾರಿ ಜಖಂಗೊಂಡಿದೆ. ಹೊಳೆಹೊನ್ನೂರು ಕಡೆಯಿಂದ ಬರುತ್ತಿದ್ದ ಲಾರಿ  ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಸ್ಥಳೀಯರು ಅತಿವೇಗ ಘಟನೆಗೆ ಕಾರಣ ಎನ್ನುತ್ತಿದ್ದಾರೆ. ಇನ್ನು ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor