KAS Exam ನಡುವೆ ಹೀಗೊಂದು ಘಟನೆ! ಪರೀಕ್ಷೆಗೆ ಹೋಗುವ ಆತುರದಲ್ಲಿ ರೈಲಿನಿಂದ ಹಾರಿದ ಹುಡುಗಿ!

ಹಂಚಿಕೊಳ್ಳಿ
WhatsApp Facebook X Telegram
Shivamogga Town Railway Station
Shivamogga Town Railway Station

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / KAS Exam ಬರೆಯಲು ಶಿವಮೊಗ್ಗಕ್ಕೆ ಬಂದಿದ್ದ ವಿದ್ಯಾರ್ಥಿನಿಯೊಬ್ಬರಿಗೆ ರೈಲು ಪ್ರಯಾಣದ ವೇಳೆ ಎದುರಾದ ಅನಿರೀಕ್ಷಿತ ಪರಿಸ್ಥಿತಿ ಆಕೆಯನ್ನ ಆತಂಕಕ್ಕೆ ದೂಡಿದ ಘಟನಗೆ ನಿನ್ನೆ ದಿನ ಸಾಕ್ಷಿಯಾಗಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿ ನಿದ್ರೆಗೆ ಜಾರಿದ್ದರಿಂದ ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗಿಲ್ಲ. ಆ ಬಳಿಕ ನಿದ್ದೆಯಿಂದ ಎಚ್ಚರಗೊಂಡಾಗ ರೈಲು ನಿಲ್ದಾಣ ದಾಟಿ ಮುಂದೆ ಸಾಗುತ್ತಿರುವುದನ್ನು ಕಂಡು ಗಾಬರಿಯಾಗಿ ರೈಲಿನಿಂದಲೇ ಕೆಳಕ್ಕೆ ಹಾರಿದ್ದಾರೆ. ಬಳಿಕ ಆಕೆಯನ್ನ ಅಕ್ಕಪಡೆ ಬಂದು ರಕ್ಷಣೆ ಮಾಡಿದೆ.

ನಿನ್ನೆ ದಿನ ಭಾನುವಾರ ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿನಿ ಶಿವಮೊಗ್ಗಕ್ಕೆ ಬರುತ್ತಿದ್ದಳು. ಆದರೆ ಸ್ಟೇಷನ್ ಬರುವ ಮುಂಚೆ ನಿದ್ರೆಗೆ ಜಾರಿದ್ದಳು. ಹಾಗಾಗಿ ಶಿವಮೊಗ್ಗ ಸ್ಟೇಷನ್ ಬಂದಿದ್ದು ವಿದ್ಯಾರ್ಥಿನಿಗೆ ಗೊತ್ತಾಗಲಿಲ್ಲ. ಟ್ರೈನ್ ಮುಂದಕ್ಕೆ ಪಾಸಾಗಿತ್ತು. ಎಚ್ಚರವಾದಾಗ ನೋಡಿದ ವಿದ್ಯಾರ್ಥಿನಿ ಸ್ಟೇಷನ್​ನಿಂದ ಮುಂದಕ್ಕೆ ರೈಲು ಸಾಗುತ್ತಿರುವುದನ್ನ ನೋಡಿ ಗಾಬರಿಯಾಗಿದ್ದಾಳೆ ಏನು ಮಾಡಬೇಕು ಅಂತಾ ಗೊತ್ತಾಗದೇ ಸೀದಾ ಕೆಳಕ್ಕೆ ಹಾರಿದ್ದಾಳೆ. ಈ ತರಾತುರಿಯಲ್ಲಿ ತನ್ನ ಫೋನನ್ನ ರೈಲಿನಲ್ಲಿ ಬಿಟ್ಟಿದ್ದು ಅವಳ ಗಮನಕ್ಕೆ ಬರಲಿಲ್ಲ.

ಹೀಗಾಗಿ, ಇನ್ನಷ್ಟು ಗೊಂದಲಕ್ಕೀಡಾದ ವಿದ್ಯಾರ್ಥಿನಿ ನೆರವಿಗೆ ಅಕ್ಕಪಡೆ ಆಗಮಿಸಿದೆ. ರೈಲು ನಿಲ್ದಾಣದಲ್ಲಿ ಗಸ್ತು ತಿರುಗುತ್ತಿದ್ದ ಅಕ್ಕ ಪಡೆ ಹಾಗೂ ರೈಲ್ವೆ ಪೊಲೀಸ್ ಸಿಬ್ಬಂದಿ ವಿದ್ಯಾರ್ಥಿನಿಯ ನೆರವಿಗೆ ಧಾವಿಸಿದ್ದಾರೆ. ವಿದ್ಯಾರ್ಥಿನಿಯಿಂದ ಅಗತ್ಯ ಮಾಹಿತಿ ಪಡೆದುಕೊಂಡು ಆಕೆಯ ಸಂಬಂಧಿಕರನ್ನು ಸಂಪರ್ಕಿಸಿದ್ದಾರೆ. ಬಳಿಕ ಸಂಬಂಧಿಕರನ್ನು ರೈಲು ನಿಲ್ದಾಣಕ್ಕೆ ಕರೆಸಿಕೊಂಡಿದ್ದಾರೆ. ಸಂಬಂಧಿಕರು ನಿಲ್ದಾಣಕ್ಕೆ ಆಗಮಿಸಿದ ಬಳಿಕ ವಿದ್ಯಾರ್ಥಿನಿಯನ್ನು ಅವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor