12 ಜಿಲ್ಲೆಗಳಲ್ಲಿ 5 ದಿನ ಬಿಸಿಗಾಳಿ | ಉಷ್ಣಾಂಶ 2-3 ಡಿಗ್ರಿ ಹೆಚ್ಚಳ | ಹವಾಮಾನ ಇಲಾಖೆ ಎಚ್ಚರಿಕೆ |

5 day heatwave in 12 districts | Temperature increase by 2-3 degrees India Meteorological Department Warning | Rain forecast for Bagalkote, Vijayapura, Kalaburagi, Yadgiri, Raichur, Koppala, Bellary, Tumkur, Mandya, Gadag, Davangere and Chitradurga.

12  ಜಿಲ್ಲೆಗಳಲ್ಲಿ 5 ದಿನ ಬಿಸಿಗಾಳಿ | ಉಷ್ಣಾಂಶ 2-3 ಡಿಗ್ರಿ ಹೆಚ್ಚಳ | ಹವಾಮಾನ ಇಲಾಖೆ ಎಚ್ಚರಿಕೆ |

SHIVAMOGGA | MALENADUTODAY NEWS | Apr 26, 2024     

ರಾಜ್ಯದ ವಿವಿಧೆಡೆ ನಾಲ್ಕು ದಿನಗಳ ಕಾಲ ಬಿಸಿ ಗಾಳಿ ತೀವ್ರವಾಗು ಸಾಧ್ಯತೆ ಇದೆ ಎಂದು  ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಸಂಬಂಧ 12 ಜಿಲ್ಲೆಗಳಿಗೆ ಹೀಟ್‌ ವೇವ್‌ನ ಮುನ್ಸೂಚನೆ ನೀಡಿದೆ. 

ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ತುಮಕೂರು, ಮಂಡ್ಯ, ಗದಗ, ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಬಿಸಿ ಗಾಳಿಯ ಅಲೆ ಹೆಚ್ಚಾಗುವ ಸಂಭವವಿದೆ. ಇದೇ 29ರವರೆಗೂ ರಾಜ್ಯದ ಬಹುತೇಕ ಕಡೆ ಒಣಹವೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ ಇದೇ ವೇಳೆ ಏಪ್ರಿಲ್‌ 30ರಿಂದ ರಾಜ್ಯದ ವಿವಿಧೆಡೆ ಮಳೆಯಾಗಬಹುದು ಎಂದು ಇಲಾಖೆ ತಿಳಿಸಿದೆ. 

ಮುಂದಿನ 5 ದಿನಗಳು ರಾಜ್ಯದಲ್ಲಿ ಗರಿಷ್ಠ ತಾಪಮಾನ 2ರಿಂದ 3 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗುವ ಸಂಭವವಿದೆಯಂತೆ ಇದೇ 29ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ವಾತಾವರಣ ವಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.