ಬೈಕ್‌ ಓಡಿಸುವಾಗ ಹುಷಾರ್‌ | ಪುರಲೆ ಕೆರೆ ಬಳಿ ತಲೆ ಮೇಲೆ ಹರಿಯಿತು ಗೂಡ್ಸ್‌ ಆಟೋ |

Be careful while riding a bike Goods auto overturned near Purale lake Shimoga Local Report, Beeranhalli, Purale Kere, Holehonur, Bike Collision,

ಬೈಕ್‌ ಓಡಿಸುವಾಗ ಹುಷಾರ್‌ | ಪುರಲೆ ಕೆರೆ ಬಳಿ ತಲೆ ಮೇಲೆ ಹರಿಯಿತು ಗೂಡ್ಸ್‌ ಆಟೋ |
Purale lake ,Shimoga Local Report, Beeranhalli, Purale Kere, Holehonur, Bike Collision,

SHIVAMOGGA | MALENADUTODAY NEWS | May 8, 2024  

ಗೂಡ್ಸ್‌ ಆಟೋವೊಂದು ಡಿಕ್ಕಿಯಾದ ಪರಿಣಾಮ 34 ವರ್ಷದ ಯುವಕನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆಯೊಂದು ನಿನ್ನೆ ಸಂಭವಿಸಿದೆ. ಶಿವಮೊಗ್ಗದ ಪುರಲೆ ಕೆರೆ ಬಳಿ ಈ ಘಟನೆ ಸಂಭವಿಸಿದ್ದು ಮೃತರನ್ನ  ಬೀರನಹಳ್ಳಿ ಗ್ರಾಮದ ಕೃಷ್ಣ ಎಂದು ಗುರುತಿಸಲಾಗಿದೆ. 



 ಶಿವಮೊಗ್ಗ |ಮತದಾನ ಮುಗಿದ ಬೆನ್ನಲ್ಲೆ ಮಳೆಯ ಮನ್ಸೂಚನೆ ಕೊಟ್ಟ ಹವಾಮಾನ ಇಲಾಖೆ |

ನಡೆದಿದ್ದೇನು?

407 ಗೂಡ್ಸ್‌ ಆಟೋವೊಂದು ಹೊಳೆಹೊನ್ನೂರು ಕಡೆಯಿಂದ ಶಿವಮೊಗ್ಗದ ಕಡೆಗೆ ಬರುತ್ತಿತ್ತು, ಅದೇ ವೇಳೆ ಶಿವಮೊಗ್ಗದಿಂದ ಹೊಳೆಹೊನ್ನೂರು ಕಡೆಗೆ ಕೃಷ್ಣರವರು ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಬೈಕ್‌-ಹಾಗೂ ಗೂಡ್ಸ್‌ ಆಟೋ ಡಿಕ್ಕಿಯಾಗಿದೆ. ಅದರ ಬೆನ್ನಲ್ಲೆ ಕೆಳಕ್ಕೆ ಬಿದ್ದ ಕೃಷ್ಣರವರ ಮೇಲೆ ಗೂಡ್ಸ್‌ ಆಟೋದ ಚಕ್ರ ಹರಿದಿದೆ. ಕೃಷ್ಣ ಹೆಲ್ಮೆಟ್‌ ಹಾಕಿರಲಿಲ್ಲ. ಪರಿಣಾಮ ತಲೆ ಮೇಲೆ ಚಕ್ರ ಹರಿದ ಪರಿಣಾಮ ಸ್ಥಳದಲ್ಲಿಯೇ ಕೃಷ್ಣರವರು ಸಾವನ್ನಪ್ಪಿದ್ದಾರೆ. ಪುರಲೆ ಕೆರೆ ಬಳಿ ಸಂಭವಿಸಿದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.