Bhadravati | ಸಣ್ಣ ಚಾನಲ್‌ನಲ್ಲಿ ಬೈಕ್‌ ಜೊತೆಗೆ ವ್ಯಕ್ತಿಯ ಶವ ಪತ್ತೆ | ಅನುಮಾನಕ್ಕೆ ಕಾರಣವಾದ ಘಟನೆ

Bhadravati | Body of man found with bike in small channel | Suspicious event

Bhadravati  | ಸಣ್ಣ ಚಾನಲ್‌ನಲ್ಲಿ  ಬೈಕ್‌ ಜೊತೆಗೆ ವ್ಯಕ್ತಿಯ ಶವ ಪತ್ತೆ | ಅನುಮಾನಕ್ಕೆ ಕಾರಣವಾದ ಘಟನೆ
Bhadravati

SHIVAMOGGA | MALENADUTODAY NEWS | May 19, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಭದ್ರಾ ಕಾಲೊನಿ ಲಕ್ಷ್ಮೀಪುರದ 7 ನೇ ಬ್ರಾಂಚ್ ಸಣ್ಣಚಾನಲ್‌ನಲ್ಲಿ ಶನಿವಾರ ಬೆಳಗ್ಗೆ ಮೃತದೇಹವೊಂದು ಪತ್ತೆಯಾಗಿದೆ. 

ಸ್ಥಳೀಯರು ಹೇಳುವ ಪ್ರಕಾರ, ಮೃತದೇಹ  ಕೇಶವಪುರ ಬಡಾವಣೆಯ ವಾಸಿ, ಯುಪಿಎಸ್‌ ದುರಸ್ತಿಗಾರ ಲೋಕೇಶ (37) ಅವರದ್ದುಿ ಎನ್ನಲಾಗಿದೆ. ನಿನ್ನೆ ಬೆಳಗ್ಗೆ ಗ್ರಾಮಸ್ಥರು ವಾಯುವಿಹಾರಕ್ಕೆ ಹೋಗುವಾಗ ಚಾನಲ್ ಬಳಿ ಬಿದ್ದಿರುವ ದ್ವಿಚಕ್ರ ವಾಹನ ಮತ್ತು ಚಾನಲ್‌ನಲ್ಲಿ ಶವ ಬಿದ್ದಿರುವುದು ಕಂಡು ಬಂದಿದೆ.

ತಕ್ಷಣವೇ ಪೊಲೀಸರಿಗೆ ಸ್ಥಳೀಯರು ವಿಷಯ ತಿಳಿಸಿದ್ದಾರೆ. ಭದ್ರಾವತಿ  ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಸಾಗಿಸಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.