ಆಗುಂಬೆಯಲ್ಲಿ KSRTC ಬಸ್‌ ಅಡ್ಡಗಟ್ಟಿ ಡ್ರೈವರ್‌, ಕಂಡೆಕ್ಟರ್‌ ಮೇಲೆ ಕೇರಳಿಗರ ಹಲ್ಲೆ | ಏನಿದು ಘಟನೆ

Keralites attacked KSRTC bus driver, conductor in Agumbe What is the event?

ಆಗುಂಬೆಯಲ್ಲಿ KSRTC  ಬಸ್‌ ಅಡ್ಡಗಟ್ಟಿ  ಡ್ರೈವರ್‌, ಕಂಡೆಕ್ಟರ್‌ ಮೇಲೆ ಕೇರಳಿಗರ ಹಲ್ಲೆ | ಏನಿದು ಘಟನೆ
KSRTC bus driver, conductor, Agumbe

SHIVAMOGGA | MALENADUTODAY NEWS | May 19, 2024  ಮಲೆನಾಡು ಟುಡೆ 

ಆಗುಂಬೆಯ ಘಾಟಿಯಲ್ಲಿ ನೆರೆಯು ಕೇರಳದ ರಾಜ್ಯ ಹುಡುಗುರು ಪುಂಡಾಟ ನಡೆಸಿದ ವಿಡಿಯೋ ವೈರಲ್‌ ಆಗಿದ್ದು ಈ ಸಂಬಂದ ಪೊಲೀಸ್‌ ಕೇಸ್‌ ದಾಖಲಾಗಿದೆ. 

ಆಗುಂಬೆ ಆರನೇ ಹೇರ್‌ ಪಿನ್‌ ಕಟ್‌ನಲ್ಲಿ ಸರ್ಕಾರಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ಲಿಸಿದ ಯುವಕರು ಅಲ್ಲಿನ ಡ್ರೈವರ್‌ ಹಾಗು ಕಂಡೆಕ್ಟರ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಸುಮಾರು 19 ಮಂದಿ ಇದ್ದ ಯುವಕರು ಕಾರಿನಲ್ಲಿ ಆಗುಂಬೆ ಘಾಟಿ ಇಳಿಯುತ್ತಿದ್ದರು. ಸರ್ಕಾರಿ ಬಸ್‌ ಡ್ರೈವರ್‌ ಸೈಡ್‌ ಕೊಡಲು ಹಾರ್ನ್‌ ಮಾಡಿದಾಗಲೂ ಅವಕಾಶ ನೀಡದ ಯುವಕರ ಗುಂಪು ಪುಂಡಾಟಿಕೆ ಮೆರೆದಿದೆ. ಇದನ್ನ ಪ್ರಶ್ನಿಸಿದ್ದಕ್ಕೆ ಡ್ರೈವರ್‌ ಹಾಗೂ ಕಂಡಕ್ಟರ್‌ ಮೇಲೆ ಹಲ್ಲೆ ಮಾಡಿದೆ. 

ಶಿವಮೊಗ್ಗದಿಂದ ಉಡುಪಿಗೆ ಹೋಗುತ್ತಿದ್ದ ಬಸ್‌ನಲ್ಲಿದ್ದ ಪ್ರಯಾಣಿಕರು ಡ್ರೈವರ್‌ ಹಾಗೂ ಕಂಡಕ್ಟರ್‌ನ್ನ ಸೇವ್‌ ಮಾಡಿ ಜಗಳ ಬಿಡಿಸಿದ್ದಾರೆ. ಈ ಸಂಬಂಧ ಕರ್ತವ್ಯಕ್ಕೆ ಅಡ್ಡಿ ಮಾಡಿರುವ ಆರೋಪದ ಮೇಲೆ ಹೆಬ್ರಿ ಪೊಲೀಸ್‌ ಸ್ಟೇಷನ್‌ ನಲ್ಲಿ ಎಫ್‌ಐಆರ್‌ ಸಹ ದಾಖಲಾಗಿದೆ.