ನಿಮ್ಮನ್ನ ಅರೆಸ್ಟ್‌ ಮಾಡಬೇಕು ಅಂತಾ ಫೋನ್‌ ಬರುತ್ತೆ ಹುಷಾರ್!‌ ಹುಡುಗಿ ವಿಚಾರಕ್ಕೇನೆ ಕೊಡ್ತಾರೆ ಶಾಕ್|‌ ಬೆಂಗಳೂರು-ಶಿವಮೊಗ್ಗ ಕೇಸ್‌

CEN police station in shivamogga  Karnataka, has apprehended a team involved in fraudulent activities using prank calls.

ನಿಮ್ಮನ್ನ ಅರೆಸ್ಟ್‌ ಮಾಡಬೇಕು  ಅಂತಾ ಫೋನ್‌ ಬರುತ್ತೆ ಹುಷಾರ್!‌ ಹುಡುಗಿ ವಿಚಾರಕ್ಕೇನೆ ಕೊಡ್ತಾರೆ ಶಾಕ್|‌  ಬೆಂಗಳೂರು-ಶಿವಮೊಗ್ಗ ಕೇಸ್‌
CEN police station in shivamogga

SHIVAMOGGA | MALENADUTODAY NEWS | Jun 27, 2024  ಮಲೆನಾಡು ಟುಡೆ 

ಹಲೋ,, ನಾವು ಚಿಕ್ಕಮಗಳೂರು ಪೊಲೀಸರು ಮಾತನಾಡ್ತಿರೋದು, ನಿಮ್ಮ ವಿರುದ್ಧ ಕಂಪ್ಲೆಂಟ್‌ ಬಂದಿದೆ. ಲೇಡಿಯೊಬ್ಬರು ದೂರು ಕೊಟ್ಟಿದ್ದು, ಆಕೆಗೆ ನೀವು ಅಶ್ಲೀಲವಾಗಿ ಮೆಸೇಜ್‌ ಮಾಡಿದ್ದೀರಿ. ಅದಕ್ಕೆ ಸಾಕ್ಷಿ ಇದೆ. ನಿಮ್ಮನ್ನ ಅರೆಸ್ಟ್‌ ಮಾಡಬೇಕಾಗುತ್ತದೆ ಎಂದು ಯಾರೋ ಕರೆ ಮಾಡಿ ಹೇಳಿದರೇ ಎಂತಹವರಿಗಾದರೂ ಕ್ಷಣಕಾಲ ದಿಗಿಲು ಹುಟ್ಟುತ್ತದೆ. ಭಂಡ ಬಿದ್ದವರಾದರೆ, ಆಯ್ತು ಗುರು ಬಂದು ಕರ್ಕೊಂಡು ಹೋಗು ಅಂದುಬಿಡ್ತಾರೆ. ಏಕೆಂದರೆ ಅದರು ಪ್ರಾಂಕ್‌ ಕಾಲ್‌ ಎಂಬುದು ಅವರಿಗೆ ಗೊತ್ತಿರುತ್ತದೆ

ಆದರೆ ಅಮಾಯಕರು ಇಂತಹ ಪ್ರಾಂಕ್‌ ಕಾಲ್‌ಗಳನ್ನ ನಿಜವೆ ಇರಬೇಕು ಎಂದು ನಂಬುತ್ತಾರೆ. ಯಾವುದೋ ಹುಡುಗಿ ತನ್ನ ವಿರುದ್ಧ ಬೇಕಂತಲೇ ಕಂಪ್ಲೆಂಟ್‌ ಮಾಡಿರಬೇಕು ಎಂದು ಭಯ ಬೀಳುತ್ತಾರೆ. ಆ ತಕ್ಷಣವೇ ಫೋನ್‌ ಕಾಲ್‌ ಮಾಡಿದವರು ದುಡ್ಡುಕೊಡಿ ಅಂತಾ ಅಕೌಂಟ್‌ಗೆ ದುಡ್ಡುಹಾಕಿಸಿಕೊಂಡು ಮೋಸ ಮಾಡುತ್ತಾರೆ. ಸದ್ಯ ಇಂತಹದ್ದೊಂದು ಟೀಂನ್ನ ಸಿಇಎನ್‌ ಪೊಲೀಸ್‌ ಠಾಣೆ ಪೊಲೀಸರು ಹಿಡಿದಿದ್ದಾರೆ. 

ಪ್ರಕರಣದ ವಿವರ ಹೀಗಿದೆ.  ದಿನಾಂಕ: 23-06-2024 ರಂದು ಕೋಟೆ ಗಂಗೂರು ನಿವಾಸಿಯೊಬ್ಬರ ಮೊಬೈಲ್‌ ಅಪರಿಚಿತ ವ್ಯಕ್ತಿಗಳು ಕರೆ ಮಾಡಿದ್ದಾರೆ. ನಾವು ಚಿಕ್ಕಮಗಳೂರು ಪೊಲೀಸರು ನೀವು ಮಹಿಳೆಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದು, ಅವರು ದೂರು ನೀಡಿದ್ದಾರೆ ನೀವು ಠಾಣೆಗೆ ಬರುವಂತೆ ಹೇಳಿ ಹೆದರಿಸಿದ್ದಾರೆ. 

ಇದರಿಂದ ಗಾಬರಿಗೊಂಡ ಸಂತ್ರಸ್ತರಿಂದ ಆರೋಪಿಗಳು ಪೋನ್ ಪೇ ಮುಖಾಂತರ ಒಟ್ಟು 23,000/-ರೂ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದರು. ಈ ಸಂಬಂಧ  ಕಲಂ 384, 419 ಮತ್ತು 420 ಐಪಿಸಿ ಕೇಸ್‌ ದಾಖಲಿಸಿದ ಸಿದ್ದೇಗೌಡ ಹೆಚ್.ಎಂ ಪಿ ಐ  ಜಯನಗರ ಪೊಲೀಸ್ ಠಾಣೆ [ಪ್ರಭಾರ] ಸಿ.ಇ.ಎನ್. ಕ್ರೈಂ ಪೊಲೀಸ್ ಠಾಣೆ ತನಿಖೆ ಆರಂಭಿಸಿದ್ದರು. 

ಬಸವರಾಜ ಬಿರಾದಾರ ಪಿಎಸ್ಐ ಸಿಇಎನ್ ಪೊಲೀಸ್ ಠಾಣೆ  ರವರ ನೇತೃತ್ವದ, ವಿರೂಪಕ್ಷಪ್ಪ ವೈ. ಎಸ್, ಎಎಸ್ಐ, ಹೆಚ್.ಸಿ - ಅವಿನಾಶ್ ಜಿ.ಜಿ, ಧರ್ಮಾನಾಯ್ಕ ಬಿ, ಸಿಪಿಸಿ – ಸಚಿನ್ ಎಸ್.ಆರ್ ರವರನ್ನು ಒಳಗೊಂಡ ತನಿಖಾ ತಂಡ ಸದ್ಯ ಪ್ರಾಂಕ್ ಕಾಲ್‌ ಆರೋಪಿಗಳನ್ನ ಬಂಧಿಸಿದ್ದಾರೆ. 

ಬಂಧಿತರು

1) ಇಬ್ರಾಹಿಂ ಬಾದಷಾ @ ರಿಷಿಕ್ ಸ್ಯಾಮ್ @ ರಿಷಿಕ್, 26 ವರ್ಷ  ಬನಶಂಕರಿ ಬೆಂಗಳೂರು, 

 2) ಜನಾರ್ದನ, 21 ವರ್ಷ, ಕುಮಾರ ಸ್ವಾಮಿ ಲೇ ಔಟ್.ಬೆಂಗಳೂರು. 

3). ಹನುಮಂತ, 38 ವರ್ಷ, ಕುಮಾರ ಸ್ವಾಮಿ ಲೇ ಔಟ್ ಬೆಂಗಳೂರು

ಇವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ರೂ 1500/- ನಗದು ಹಣ ಹಾಗೂ ಮೊಬೈಲ್ ಪೊನ್ ನ್ನು  ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಇಲಾಖೆ ಪ್ರಕಟಣೆ ನೀಡಿದೆ. 

CEN police station in shivamogga  Karnataka, has apprehended a team involved in fraudulent activities using prank calls. The scammers would call unsuspecting individuals, posing as police officers, and accuse them of sending obscene messages to women. Threatening arrest, the scammers would then coerce their victims into transferring money to avoid legal consequences.