ಅಯ್ಯೋ ವಿಧಿಯೆ | ಕೃಷಿ ಹೊಂಡಕ್ಕೆ ಬಿದ್ದು 14 ವರ್ಷದ ಬಾಲಕ ಸಾವು | ಪೋಷಕರೇ ಜಾಗೃತೆ ವಹಿಸಿ

14-year-old boy named Satvik drowned in an agricultural pond in Soraba. He was herding cattle when he accidentally slipped and fell into the pond.  

ಅಯ್ಯೋ ವಿಧಿಯೆ |  ಕೃಷಿ ಹೊಂಡಕ್ಕೆ ಬಿದ್ದು 14 ವರ್ಷದ ಬಾಲಕ ಸಾವು | ಪೋಷಕರೇ ಜಾಗೃತೆ ವಹಿಸಿ
boy drowned in an agricultural pond

SHIVAMOGGA | MALENADUTODAY NEWS | May 28, 2024  ಮಲೆನಾಡು ಟುಡೆ 

ಶಿವಮೊಗ್ಗದಲ್ಲಿ ಕೃಷಿ ಹೊಂಡ ದಲ್ಲಿ ಬಿದ್ದು ಸಾವನ್ನಪ್ಪುವನಂತಹ ದುರಂತ ಎರಡನೇ ಸಲ ಸಂಭವಿಸಿದೆ. ಇತ್ತೀಚಿಗೆ ಇಬ್ಬರು ಕೃಷಿಹೊಂಡದಲ್ಲಿ ಕಾಲು ತೊಳೆದುಕೊಳ್ಳಲು ಹೋಗಿ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೆ ಸೊರಬದಲ್ಲಿಯು ಬಾಲಕನೊಬ್ಬ ಕೃಷಿಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. 

ಘಟನೆಯ ವಿವರ ನೋಡುವುದಾದರೆ, ಬಾಲಕನೊಬ್ಬ ದನಕರ ಮೇಯಿಸಲು ಹೋಗಿದ್ದು, ಈ ವೇಳ ಆಕಸ್ಮಿಕವಾಗಿ ಕೃಷಿಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಶಾಲೆಗಳು ರಜೆ ಇರುವ ಕಾರಣಕ್ಕೆ ಮಕ್ಕಳನ್ನ ಹಳ್ಳಿಕಡೆಗಳಲ್ಲಿ ಸಣ್ಣಪುಟ್ಟ ಕೆಲಸದ ಜವಾಬ್ದಾರಿಗೆ ಹಾಕುತ್ತಾರೆ. ಅದರಂತೆ ಇಲ್ಲಿನ ಕ್ಯಾಸನೂರು ತಲಕಾಲಕೊಪ್ಪ ಗ್ರಾಮದ ಸಾತ್ವಿಕ್‌ ಎಂಬ 14 ವರ್ಷದ ಬಾಲಕನಿಗೆ ದನಕರ ಮೇಯಿಸಿಕೊಂಡು ಬರುವ ಕೆಲಸ ವಹಿಸಲಾಗಿತ್ತು.

ಆತನು ಸಹ ಜಾನುವಾರು ಮೇಯಿಸಲು ತೆರಳಿದ್ದ, ಈ ವೇಳೆ ಫಾತೀಮಾ ಎಂಬವರಿಗೆ ಸೇರಿದ್ದ ಕೃಷಿ ಹೊಂಡಕ್ಕೆ ಈತ ಬಿದ್ದಿದ್ದಾನೆ. ಆಕಸ್ಮಿಕವಾಗಿ ಕೃಷಿಹೊಂಡಕ್ಕೆ ಕಾಲುಜಾರಿ ಬಿದ್ದಿರಬಹುದು ಎಂದು ಹೇಳಲಾಗುತ್ತಿದೆ. ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಬಂದ ಸೊರಬ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 



A 14-year-old boy named Satvik drowned in an agricultural pond in Soraba. He was herding cattle when he accidentally slipped and fell into the pond.