ಡಾ.ಧನಂಜಯ ಸರ್ಜಿ ಪರವಾಗಿ ಘಟ ನಾಯಕರ ಸಭೆ | ವಿಡಿಯೋ ರಿಲೀಸ್‌ ಮಾಡಿದ ಬಿಎಸ್‌ವೈ | ಏನಿದು ?

The BJP is making efforts to ensure the victory of their candidate, Dr. Dhananjay Sarji, in the Southwest Graduate constituency. BS Yediyurappa has personally entered the fray, releasing an video message in support of Sarji. BJP State President BV Vijayendra, who has taken the election as a prestige issue, has been campaigning tirelessly in Shivamogga, Chikkamagaluru, and coastal regions, holding meetings to secure the victory of the candidates.

ಡಾ.ಧನಂಜಯ ಸರ್ಜಿ ಪರವಾಗಿ ಘಟ ನಾಯಕರ ಸಭೆ | ವಿಡಿಯೋ ರಿಲೀಸ್‌ ಮಾಡಿದ ಬಿಎಸ್‌ವೈ  |  ಏನಿದು ?
Southwest Graduate constituency

SHIVAMOGGA | MALENADUTODAY NEWS | May 28, 2024  ಮಲೆನಾಡು ಟುಡೆ 

ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ತಮ್ಮ ಅಭ್ಯರ್ಥಿ ಡಾ.ಧನಂಜಯ್‌ ಸರ್ಜಿಯವರನ್ನ ಗೆಲ್ಲಿಸಿಕೊಳ್ಳಲು ನಾನಾ ಕಸರತ್ತನ್ನು ನಡೆಸ್ತಿದ್ದಾರೆ. ಇದಕ್ಕಾಗಿ ಸ್ವತಃ ಬಿಎಸ್‌ ಯಡಿಯೂರಪ್ಪ ಅಖಾಡಕ್ಕೆ ಇಳಿದಿದ್ದು, ಸರ್ಜಿ ಪರವಾಗಿ ವಿಡಿಯೋ ಸಂದೇಶವನ್ನ ರವಾನೆ ಮಾಡಿದ್ದಾರೆ. ಇನ್ನೊಂದೆಡೆ ಕ್ಷೇತ್ರವನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡಿರುವ ಬಿಜೆಪಿ ರಾಜ್ಯಾ‍ಧ್ಯಕ್ಷ ಬಿವೈ ವಿಜಯೇಂದ್ರ ಶಿವಮೊಗ್ಗ, ಚಿಕ್ಕಮಗಳೂರು ಬಳಿಕ ಕರಾವಳಿಯಲ್ಲಿ ನಿರಂತರ ಸಭೆಗಳನ್ನ ನಡೆಸಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸ್ತಿದ್ದಾರೆ. 

 

ಸ್ವಾಮೀಜಿಗಳಿಗೆ ಸರ್ಜಿ ಶರಣು..ಶರಣು.

ಇತ್ತ ಮತದಾರರನ್ನು ಅರಸಿಕೊಂಡು ಹೋಗುತ್ತಿರುವ ಡಾ.ಧನಂಜಯ್‌ ಸರ್ಜಿ ತಮ್ಮ ಗೆಲುವಿವಾಗಿ ಶ್ರೀಗಳ ಆಶೀರ್ವಾದ ಕೋರುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಉಡುಪಿ ಜಿಲ್ಲೆಯ ಆನೆಗೊಂದಿ ಮಹಾ ಸಂಸ್ಥಾನ ಸರಸ್ವತೀ ಪೀಠದ ಶ್ರೀ ಮದ್ ಜಗದ್ಗುರು ಅನಂತ ಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರನ್ನು ಭೇಟಿಯಾದ ಡಾ.ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಅವರುಗಳು ಆಶೀರ್ವಾದ ಪಡೆದರು.

 

ಪತಿಯ ಪರವಾಗಿ ಪತ್ನಿಯ ಲೇಟೆಸ್ಟ್‌ ಪ್ರಚಾರ 

ಇತ್ತ ಶಿವಮೊಗ್ಗದಲ್ಲಿ  ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ್‌ ಸರ್ಜಿಯವರ ಪರವಾಗಿ ಅವರ ಪತ್ನಿ ನಮಿತಾ ಸರ್ಜಿ ಪ್ರಚಾರ ಮುಂದುವರಿಸಿದ್ದಾರೆ. ಸರ್ಜಿ ಸಮೂಹದ ವೈದ್ಯರು ಜೊತೆಗೆ ಅವರು,   ಶಿವಮೊಗ್ಗ ನಗರದ ಪ್ರತಿಷ್ಠಿತ ಕುವೆಂಪು ಶತಮಾನೋತ್ಸವ ಬಿ ಎಡ್ ಕಾಲೇಜು, ಪೊದಾರ್ ಇಂಟರ್ನ್ಯಾಷನಲ್ ಸ್ಕೂಲ್, ಸನ್  ಸಿಟಿ  ಸ್ಕೂಲ್ , ಗಿರಿದೀಪಂ ಶಾಲೆ , ಪ್ರಿಯದರ್ಶಿನಿ  ಶಾಲೆ, ಕೇಂಬ್ರಿಡ್ಜ್ ಸ್ಕೂಲ್, ಎಜುರೈಟ್  ಸ್ಕೂಲ್ ಸೇರಿದಂತೆ  ವಿವಿಧ ಶಿಕ್ಷಣ ಸಂಸ್ಥೆಗಳಿಗೆ  ಭೇಟಿ ನೀಡಿ ನೈಡಾ. ಧನಂಜಯ ಸರ್ಜಿ ಅವರ ಪರವಾಗಿ ಮತಯಾಚಿಸಿದ್ರು. ಈ ವೇಳೆ  ನಮಿತಾ ಸರ್ಜಿಯವರಿಗೆ , ಡಾ ರಜತ್, ನಾಗವೇಣಿ ಸರ್ಜಿ, ರಮೇಶ್ ರವರು ಸಾಥ್‌ ನೀಡಿದರು

 

ಉಡುಪಿ ಘಟನಾಯಕರ ಸಭೆ

ಇನ್ನೊಂದೆಡೆ ಅತ್ತ ಉಡುಪಿಯಲ್ಲಿ ವಿಧಾನ ಪರಿಷತ್  ನೈರುತ್ಯ ಪದವೀಧರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ  ಚುನಾವಣೆಯ ಹಿನ್ನೆಲೆಯಲ್ಲಿ ಘಟನಾಯಕರ ಸಭೆ ನಡೆದಿದೆ. ಕಿದಿಯೂರು ಹೋಟೆಲ್ ನ ಮಾಧವ ಕೃಷ್ಣ ಸಭಾಭವನದಲ್ಲಿ ಚುನಾವಣಾ ಪೂರ್ವ ತಯಾರಿಯ ಕುರಿತು ಘಟನಾಯಕರ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ  ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್  ಸುವರ್ಣ , ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ  ಗುರುರಾಜ್  ಗಂಟಿಹೊಳೆ ,  ವಿಧಾನ ಪರಿಷತ್  ವಿರೋಧ ಪಕ್ಷದ ನಾಯಕರಾದ ಕೋಟ  ಶ್ರೀನಿವಾಸ್ ಪೂಜಾರಿ , ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾದ ಡಾ. ಧನಂಜಯ ಸರ್ಜಿ, ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾದ ಎಸ್.ಎಲ್ ಭೋಜಗೌಡ,  ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕಿಶೋರ್ ಕುಮಾರ್ ,  ಮಾಜಿ ಸಚಿವರು ಹಾಗೂ ಬಿಜೆಪಿ ರಾಜ್ಯ ಪ್ರಧಾನ  ಕಾರ್ಯದರ್ಶಿಗಳಾದ ವಿ.ಸುನಿಲ್ ಕುಮಾರ್ , ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ , ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ,  ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್,  ಸ್ಥಳೀಯ ಬಿಜೆಪಿ ಮುಖಂಡರು , ಮಹಾಶಕ್ತಿ ಕೇಂದ್ರದ ಪ್ರಮುಖರು , ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಪರಿಷತ್‌ ಚುನಾವಣೆಯ ಸಂಬಂಧ ಹಲವು ಚರ್ಚೆಗಳು ಸಭೆಯಲ್ಲಿ ನಡೆಯಿತು.    

ಸರ್ಜಿ ಪರ ಬಿವೈ ವಿಜಯೇಂದ್ರ 

ಇನ್ನೂ  ಡಾ. ಧನಂಜಯ್‌ ಸರ್ಜಿಯವರ ಪರವಾಗಿ ಮಂಗಳೂರು  ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀನಿವಾಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಗೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ. ವಿಜಯೇಂದ್ರ ಸಂವಾದ ನಡೆಸಿದರು, ವಿಧಾನ ಪರಿಷತ್ ಚುನಾವಣೆಯಲ್ಲಿ   ಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸಿ ಅತ್ಯಧಿಕ ಮತಗಳಿಂದ ವಿಜಯಶಾಲಿಯನ್ನಾಗಿ ಮಾಡಬೇಕೆಂದು  ಮತಯಾಚಿಸಿದರು 

ಬಿಜೆಪಿ ಕಾರ್ಯಕರ್ತರ ಸಭೆ  

ವಿವಿಧ ಶಿಕ್ಷಣ ಸಂಸ್ಥೆಗಳ ಭೇಟಿ ನಡುವೆ ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯನ್ನ ಆಯೋಜಿಸಿ ಮಾತನಾಡಿದ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಡಾ.ಸರ್ಜಿ ಅವರು  ಹೊಟ್ಟೆಪಾಡಿಗಾಗಿ ರಾಜಕಾರಣಕ್ಕೆ ಬಂದವರಲ್ಲ, ಅವರ ಸೇವಾಮನೋಭಾವ ಮತ್ತು ಸಂಘಟನಾ ಶಕ್ತಿಯನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಿದೆ, ಪದವೀಧರರ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವ ಶಕ್ತಿ ಅವರಿಗಿದೆ, ಅಲ್ಲದೇ ಪಕ್ಷ ಸಂಘಟನೆಯೂ ಬಲಗೊಳಿಸಲು ಅವರು ಶ್ರಮಿಸಲಿದ್ದಾರೆ, ಹಾಗೆಯೇ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ್ರು ಒಬ್ಬ ನುರಿತ ಹಿರಿಯ ರಾಜಕಾರಣಿ, ಅವರು ತಮ್ಮದೇ ಆದ ಹಿಡಿತವನ್ನು ಇಟ್ಟುಕೊಂಡಿದ್ದಾರೆ, ಶಿಕ್ಷಕರ ಸಮಸ್ಯೆಗಳಿಗೆ ಎಲ್ಲ ರೀತಿಯಲ್ಲೂ ಸ್ಪಂದಿಸಲಿದ್ದಾರೆ, ಪರಿಷತ್ ನಲ್ಲಿ ಗಟ್ಟಿ ಧ್ವನಿಯಾಗಲಿದ್ದಾರೆ ಎಂದರು. 

 

ಕ್ಯಾಪ್ಟನ್‌ ಕಾರ್ಣಿಕ್‌ ಮತ ಬೇಟೆ

ಅತ್ತ  . ಧನಂಜಯ್‌ ಸರ್ಜಿಯವರ  ಪರವಾಗಿ ಮಂಗಳೂರಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಶಕ್ತಿ ಎಜುಕೇಷನಲ್ ಟ್ರಸ್ಟ್ ಗೆ ಅಭ್ಯರ್ಥಿಗಳು ಹಾಗೂ ಬಿಜೆಪಿ ನಾಯಕರ ಜೊತೆಗೆ ಭೇಟಿಕೊಟ್ಟ  ವಿಧಾನ ಪರಿಷತ್ ನ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕೂಡ  ಅಲ್ಲದ್ದವರ ಜೊತೆ ಚರ್ಚಿಸಿ ಅಭ್ಯರ್ಥಿಗಳ ಪರ ಮತಯಾಚಿಸಿದರು. 

ಸರ್ಜಿ ಪರ ಬಿಎಸ್‌ವೈ ವಿಡಿಯೋ ಸಂದೇಶ

ಇವೆಲ್ಲದರ ನಡುವೆ ಡಾ.ಧನಂಜಯ್‌ ಸರ್ಜಿಯವರ ಪರವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿಡಿಯೋ ಸಂದೇಶವನ್ನು ರವಾನೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ಡಾ.ಧನಂಜಯ್‌ ಸರ್ಜಿಯವರ ಪರವಾಗಿ ಮತಯಾಚನೆ ಮಾಡಿದ್ದಾರೆ. ಅತಿಹೆಚ್ಚಿನ ಮತಗಳನ್ನು ನೀಡುವಂತೆ ಮತದಾರರನ್ನು ವಿನಂತಿಸಿದ್ದಾರೆ. ಒಟ್ಟಾರೆ, ಬಿಜೆಪಿ ತನ್ನ ಅಭ್ಯರ್ಥಿಗಳ ಪರವಾಗಿ ಎಲ್ಲಾ ರೀತಿಯ ಕಸರತ್ತನ್ನ ನಡೆಸ್ತಿದ್ದು ಮತದಾರರ ಪಟ್ಟಿ ಹಿಡಿದು ಅವರ ಮನವೊಲಿಕೆ ಭಿನ್ನ ವಿಭಿನ್ನ ತಂತ್ರಗಾರಿಕೆಯನ್ನು ನಡೆಸ್ತಿದೆ. ಇದರ ಫಲಿತಾಂಶ ಏನಾಗಬಹುದು ಎಂಬುದು ಚುನಾವಣೆ ಬಳಿಕವಷ್ಟೆ ಗೊತ್ತಾಗಲಿದೆ.