ಶಿವಮೊಗ್ಗದಲ್ಲಿ ಒಂದೇ ದಿನ 99 ವಾಹನಗಳು ಸೀಜ್! 99 ಕೇಸ್ ದಾಖಲು! ಕಾರಣವೇನು ಗೊತ್ತಾ?
99 vehicles seized in a single day in Shimoga 99 cases have been registered. Do you know the reason?

KARNATAKA NEWS/ ONLINE / Malenadu today/ Jun 15, 2023 SHIVAMOGGA NEWS
ಶಿವಮೊಗ್ಗ ಸಂಚಾರಿ ವೃತ್ತಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ ವಾಪಸ್ ಆಗುತ್ತಿದ್ದಂತೆ ಸಾಲು ಸಾಲು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ಧಾರೆ. ಇದಕ್ಕೆ ಪೂರಕವಾಗಿ ನಿನ್ನೆ ಶಿವಮೊಗ್ಗ ನಗರದಲ್ಲಿ ಕರ್ಕಶ ಶಬ್ದವನ್ನುಂಟು ಮಾಡುವ ಹಾರ್ನ್ (Shrill Horns) ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ Shrill Horns ಗಳನ್ನು ಅಳವಡಿಸಿದ್ದ ಒಟ್ಟು 39 ವಾಹನಗಳನ್ನು ವಶಕ್ಕೆ ಪಡೆದು, ವಾಹನ ಚಾಲಕರು / ಮಾಲೀಕರ ವಿರುದ್ಧ ಐಎಂವಿ ಕಾಯ್ದೆಯಡಿಯಲ್ಲಿ 39 ಪ್ರಕರಣಗಳನ್ನು ದಾಖಲಿಸಲಾಗಿದೆ.
ಸೊರಬದಲ್ಲಿಯು ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ
ಇನ್ನೂ ಅತ್ತ ಸೊರಬ ತಾಲ್ಲೂಕಿನಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ರಾಜಶೇಖರ್ ನೇತೃತ್ವದಲ್ಲಿ ಆನವಟ್ಟಿಯ ಜೂನಿಯರ್ ಕಾಲೇಜು ಮತ್ತು ಬಸ್ ನಿಲ್ದಾಣದ ಬಳಿ ಕರ್ಕಶ ಶಬ್ದವನ್ನುಂಟು ಮಾಡುವ ಹಾರ್ನ್ (Shrill Horns) ಗಳನ್ನು ಅಳವಡಿಸಿದ್ದ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ.
ಅಲ್ಲದೆ ಚಾಲನಾ ಪರವಾನಿಗೆ ಇಲ್ಲದೇ, ಹೆಲ್ಮೆಟ್ ಧರಿಸದೇ ಮತ್ತು ಅತಿವೇಗ ಹಾಗೂ ಅಪಾಯಕಾರಿಯಾಗಿ ವಾಹನಗಳನ್ನು ಚಲಾಯಿಸುತ್ತಿದ್ದ ವಾಹನ ಸವಾರರ ವಿರುದ್ಧ ಕೇಸ್ ದಾಖಲಿಸಲಾಯ್ತು.
ಈ ಕಾರ್ಯಾಚರಣೆಯಲ್ಲಿ ಒಟ್ಟು 60 ವಾಹನಗಳನ್ನು ವಶಕ್ಕೆ ಪಡೆದು, ವಾಹನ ಚಾಲಕರು / ಮಾಲೀಕರ ವಿರುದ್ಧ ಐಎಂವಿ ಕಾಯ್ದೆಯಡಿಯಲ್ಲಿ ಒಟ್ಟು 60 ಪ್ರಕರಣಗಳನ್ನು ದಾಖಲಿಸಲಾಗಿದೆ.
ಎಫ್ಸಿಐ ಗೋಡೌನ್ನಲ್ಲಿಯೇ ವಾಹನಗಳನ್ನ ನಿಲ್ಲಿಸಬೇಕು
ಇನ್ನೂ ನಿನ್ನೆ ಶಿವಮೊಗ್ಗ ಸಂಚಾರ ವೃತ್ತ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ , ಎಫ್.ಸಿ.ಐ ಡಿವಿಷನಲ್ ಕಛೇರಿ ಶಿವಮೊಗ್ಗದಲ್ಲಿ ಎಫ್.ಸಿ.ಐ ನ ಅಧಿಕಾರಿ ಮತ್ತು ಸಿಬ್ಬಂಧಿಗಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಕುರಿತಂತೆ ಜಾಗೃತಿ ಮೂಡಿಸಲಾಗಿದೆ.
ಇದೇ ವೆಳೇ, ಎಫ್.ಸಿ.ಐ ನ ಲಾರಿ ಮತ್ತು ಗೂಡ್ಸ್ ವಾಹನಗಳನ್ನು ರಸ್ತೆಯ ಮೇಲೆ ನಿಲ್ಲಿಸದೇ ಎಫ್.ಸಿ.ಐ ಗೋಡೌನ್ ನ ಆವರಣದ ಒಳಗೆ ಸಂಚಾರಕ್ಕೆ ಅಡ್ಡಿಯಾಗದ ರೀತಿ ನಿಲುಗಡೆ ಮಾಡುಬೇಕು ಎಂದು ಸೂಚಿಸಲಾಯ್ತು.
ಶಿವಮೊಗ್ಗಕ್ಕೆ ಮತ್ತೊಂದು ಮೆಗಾ ಪ್ರಾಜೆಕ್ಟ್!ಸಂಸದರ ಮನವಿಗೆ ಅಸ್ತು ಎಂದ ನಿತಿನ್ ಗಡ್ಕರಿ! ಏನದು?|
ಸಂಸದ ಬಿ.ವೈ.ರಾಘವೇಂದ್ರ (B.Y.Raghavendra) ಸದ್ಯ ಬಿಡುವಿಲ್ಲದ ಕೆಲಸದಲ್ಲಿ ತೊಡಗಿದ್ದಾರೆ. ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯನ್ನು ಮುಚ್ಚದಂತೆ ಕಾರ್ಮಿಕರ ನಿಯೋಗವನ್ನು ದೆಹಲಿಗೆ ಕೊಂಡೊಯ್ದ ಅವರು, ಅದೇ ಸಂದರ್ಭದಲ್ಲಿ ಶಿವಮೊಗ್ಗ ನಗರದ ಉತ್ತರ ಭಾಗದ ಬೈಪಾಸ್ ರಸ್ತೆಗೆ ಕೇಂದ್ರದ ಅನುದಾನ ಮಂಜೂರಾತಿಗಾಗಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯನ್ನು ಭೇಟಿಯಾದರು.
ಸಂಸದರ ಮನವಿ ಮೇರೆಗೆ, ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಶಿವಮೊಗ್ಗ ನಗರ ಉತ್ತರ ಭಾಗದ ಬೈಪಾಸ್ ರಸ್ತೆ ನಿರ್ಮಾಣ ಮಂಜೂರಾತಿಗೆ ಇರುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ ಮಂಜೂರು ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿವಮೊಗ್ಗ-ಮರಿಯಮ್ಮನ ಹಳ್ಳಿ ರಾಷ್ಟ್ರೀಯ ಹೆದ್ಧಾರಿಗೆ ಬೇಡಿಕೆ
ಇನ್ನೂ ಶಿವಮೊಗ್ಗ ನಗರದಿಂದ ಹೊನ್ನಾಳಿ, ಹರಿಹರದ ಮೂಲಕ ಮರಿಯಮ್ಮನಹಳ್ಳಿ(ಹೊಸಪೇಟೆ) ಮತ್ತು ವರೆಗಿನ ರಾಜ್ಯ ಹೆದ್ದಾರಿ 25ರಲ್ಲಿ ವಾಹನಗಳ ಸಂಚಾರದ ಒತ್ತಡವಿದೆ. ಹೀಗಾಗಿ ಅದನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿ 4 ಪಥದ ರಸ್ತೆ ನಿರ್ಮಿಸಬೇಕೆಂಬ ಬೇಡಿಕೆಯನ್ನು ಸಂಸದ ರಾಘವೇಂದ್ರರವರು ಸಲ್ಲಿಸಿದ್ರು.
ಸಂಸದರ ಮನವಿಗೆ ಸ್ಪಂದಿಸಿದ ನಿತಿನ್ ಗಡ್ಕರಿ ಆದ್ಯತೆ ಮೇರೆಗೆ ಮೇಲ್ದರ್ಜೆಗೇರಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೇಂದ್ರ ಸಚಿವರ ಭೇಟಿ
ಇಷ್ಟೆ ಅಲ್ಲದೆ, ರಾಜ್ಯದ ಪ್ರತಿಷ್ಠಿತ ಯೋಜನೆಯಾದ ಸಿಗಂದೂರು ಸೇತುವೆ, ವಿದ್ಯಾನಗರದ ರೈಲ್ವೆ ಮೇಲು ಸೇತುವೆ, ರಾಷ್ಟ್ರೀಯ ಹೆದ್ದಾರಿ 266ಸಿ ಮಾವಿನಕೊಪ್ಪ ವೃತ್ತದಿಂದ ಆಡುಗೋಡಿವರೆಗಿನ 13.80 ಕಿ.ಮೀ. ಉದ್ದದ ರಸ್ತೆ, ಬೆಕ್ಕೋಡಿ ಮತ್ತು ಹೊಸನಗರ ಸೇತುವೆಗಳ ಕಾಮಗಾರಿ ವೀಕ್ಷಣೆಗೆ ಬರಲು ಸಮಯ ನೀಡುವುದಾಗಿ ಭರವಸೆ ನೀಡಿದರು.
ಕಣ್ಣಮುಂದೆಯೇ ಕುಸಿದು ಬಿತ್ತು ಸೂರು! ತೀರ್ಥಹಳ್ಳಿಯಲ್ಲಿ ಎರಡು ದಲಿತ ಕುಟುಂಬಗಳ ಮನೆ ತೆರವು ! ಕಾರಣವೇನು?
ತೀರ್ಥಹಳ್ಳಿ/ ತಾಲ್ಲೂಕಿನ ಮೇಗರವಳ್ಳಿಯಲ್ಲಿ ನಿನ್ನೆ ಬುಧವಾರ ಎರಡು ದಲಿತ ಕುಟುಂಬಗಳ ಮನೆಗಳನ್ನ ಒಡೆದುಹಾಕಲಾಗಿದೆ. ಪರಿಣಾಮ, ಮನೆ ಕಳೆದುಕೊಂಡ 2 ಕುಟುಂಬಗಳ ಬದುಕಿನಲ್ಲಿಗ ಕತ್ತಲೆ ಆವರಿಸಿದೆ.
ಖಾಸಗಿ ಒಡೆತನಕ್ಕೆ ಸೇರಿದ ಜಾಗದ ಸಂಬಂಧ ಉದ್ಭವವಾಗಿದ್ದ ವಿವಾಧ ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ನಲ್ಲಿ ಸ್ವತ್ತು ತೆರವಿಗೆ ಆದೇಶ ಹೊರಬಿದ್ದಿದೆ.
ಆದೇಶದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆದಿದೆ. ಮೇಗರವಳ್ಳಿ ಗ್ರಾಮದ ಸ.ನಂ. 1ರ 10 ಗುಂಟೆ ಜಾಗದಲ್ಲಿ ಈ ತೆರವು ಕಾರ್ಯಾಚರಣೆ ನಡೆಸಲಾಗಿದೆ. ರಾಧ, ಲಕ್ಷ್ಮೀ ಎಂಬ ಹೆಸರಿನ ದಲಿತ ಕುಟುಂಬಕ್ಕೆ ಸೇರಿದ ಮನೆಗಳು ಇದಾಗಿದ್ದು, ಮಹಿಳೆಯರ ಬದಕು ಬೀದಿಪಾಲಾಗಿದೆ.
ಇನ್ನೂ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜೆಸಿಬಿ ಮೂಲಕ ಮನೆ ತೆರವುಗೊಳಿಸಲಾಗಿದ್ದರೂ, ನಡೆದ ಘಟನೆ ಬಗ್ಗೆ ಸಾರ್ವಜನಿಕರ ಆಕ್ಷೇಪಣೆ ವ್ಯಕ್ತವಾಗಿದೆ. ಕನಿಷ್ಟ ಪಕ್ಷ ಜನಪ್ರತಿನಿಧಿಗಳು ದಲಿತ ಕುಟುಂಬಗಳನ್ನು ಉಳಿಸಬಹುದಿತ್ತು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಯುವಕನ ಕೊಲೆ!
ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನನ್ನ ಹತ್ಯೆ ಮಾಡಲಾಗಿದೆ. ನಗರದ ಗೋಪಾಳದಲ್ಲಿ ಈ ಘಟನೆ ಕೆಲವು ಹೊತ್ತಿಗೂ ಮೊದಲು ನಡೆದಿದ್ದು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.
ಆಸೀಫ್ ಎಂಬಾ 25 ವರ್ಷದ ಯುವಕನನ್ನ ಜಬಿ ಎಂಬಾತ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದ್ದು, ಈ ಸಂಬಂದ ಎಸ್ಪಿ ಮಿಥುನ್ ಕುಮಾರ್ ಕೂಡ ವಾಟ್ಸ್ಯಾಪ್ ಮೆಸೇಜ್ನಲ್ಲಿ ಮಾಹಿತಿ ನೀಡಿದ್ದು, ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಕೃತ್ಯ ಎಸೆಗಲಾಗಿದೆ ಎಂದಿದ್ಧಾರೆ. ಅಲ್ಲದೆ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದ್ಧಾರೆ.