ರಾತ್ರಿಯಲ್ಲಿ ಕಾಣದ ಡಿವೈಡರ್‌ಗೆ ಮಾರುತಿ ಸ್ವಿಫ್ಟ್‌ ಕಾರು ಡಿಕ್ಕಿ

A Maruti Swift car collided with a divider in Ripponpet, Hosanagar taluk, Shivamogga district last night. The accident happened in front of a bar and restaurant on Thirthahalli Road.

ರಾತ್ರಿಯಲ್ಲಿ ಕಾಣದ ಡಿವೈಡರ್‌ಗೆ ಮಾರುತಿ ಸ್ವಿಫ್ಟ್‌ ಕಾರು ಡಿಕ್ಕಿ
Ripponpete, Hosanagar taluk, Shivamogga

SHIVAMOGGA | MALENADUTODAY NEWS | May 29, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್‌ ಪೇಟೆಯಲ್ಲಿ ನಿನ್ನೆ ರಾತ್ರಿ ಡಿವೈಡರ್‌ಗೆ ಮಾರುತಿ ಸ್ವಿಫ್ಟ್‌ ಕಾರೊಂದು ಡಿಕ್ಕಿ ಹೊಡೆದ ಘಟನೆ ಬಗ್ಗೆ ವರದಿಯಾಗಿದೆ. ಇಲ್ಲಿನ ತೀರ್ಥಹಳ್ಳಿ ರಸ್ತೆಯ ಬಾರ್ ಅಂಡ್ ರೆಸ್ಟೋರೆಂಟ್ ಒಂದರ ಮುಂಭಾಗದಲ್ಲಿ  ಘಟನೆ ಸಂಭವಿಸಿದೆ.  

ಸಮರ್ಪಕವಾದ ಸೂಚನಾ ಫಲಕವಿಲ್ಲದ ಕಾರಣ ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.  ಕಾರಿನಲ್ಲಿ ಸಣ್ಣ ಮಗು ಸೇರಿದಂತೆ ಕೊಪ್ಪ ಮೂಲದ ಐವರು ಪ್ರಯಾಣಿಸುತಿದ್ದರು. ಕಾರಿನಲ್ಲಿದ್ದ ವಯೋವೃದ್ದೆಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

A Maruti Swift car collided with a divider in Ripponpet, Hosanagar taluk, Shivamogga district last night. The accident happened in front of a bar and restaurant on Thirthahalli Road. The car was completely damaged due to the lack of proper signage.