ಶಾರದಾಂಭೆಯ ಮೊರೆಹೋದ ಬಿಜೆಪಿ ಅಭ್ಯರ್ಥಿ | ಸರ್ಜಿ ಪರ ಶಾಸಕರ ಪ್ರಚಾರ ಭರಪೂರ |

BJP candidate Dr. Dhananjay Sarji visited the Sringeri Sharada Peetham and sought the blessings of Goddess Sharadamba and Jagadguru Sri Sri Vidhushekhara Bharati Sannidhanam.

ಶಾರದಾಂಭೆಯ ಮೊರೆಹೋದ ಬಿಜೆಪಿ ಅಭ್ಯರ್ಥಿ | ಸರ್ಜಿ ಪರ ಶಾಸಕರ ಪ್ರಚಾರ ಭರಪೂರ |
BJP candidate Dr. Dhananjay Sarji, Sringeri Sharada Peetham, Jagadguru Sri Sri Vidhushekhara Bharati Sannidhanam

SHIVAMOGGA | MALENADUTODAY NEWS | Jun 1, 2024  ಮಲೆನಾಡು ಟುಡೆ

ನೈರುತ್ಯ ಪದವೀಧರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಮತಪ್ರಚಾರ ಅಂತಿಮ ಘಟ್ಟಕ್ಕೆ ಬಂದು ತಲುಪಿತ್ತಿದೆ. ಈ ನಡುವೆ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ್‌ ಸರ್ಜಿಯವರು ದೇವರ ಮೊರೆಹೋಗಿದ್ದಾರೆ. ಶನಿವಾರ ನೈರುತ್ಯ ಪದವೀಧರರ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ಡಾ ಧನಂಜಯ ಸರ್ಜಿ ಅವರು ಶೃಂಗೇರಿ  ಶಾರದಾ ಪೀಠಕ್ಕೆ ಭೇಟಿ ನೀಡಿ ಜ್ಞಾನ ದೇವತೆ ಶೃಂಗೇರಿ ಶ್ರೀ ಶಾರದಾಂಬೆಯ ದರ್ಶನ ಪಡೆದು ಮತ್ತು ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ದರ್ಶನ ಮಾಡಿ ಆಶೀರ್ವಾದ ಪಡೆದರು  

 

ಇನ್ನೊಂದೆಡೆ ಡಾ. ಧನಂಜಯ ಸರ್ಜಿ,  ಭೋಜೇಗೌಡ ಪರವಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ ಸುನಿಲ್ ಕುಮಾರ್, ಅವರು  ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ತಾಲೂಕಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಾದ ಅಮೃತ ಭಾರತಿ ವಿದ್ಯಾಲಯ, ಮತ್ತು ಎಸ್ ಆರ್ ಎಸ್ ವಿದ್ಯಾಸಂಸ್ಥೆಗೆ ತೆರಳಿ ಪ್ರಾಂಶುಪಾಲರು  ಹಾಗೂ ಸಿಬ್ಬಂದಿಗಳಲ್ಲಿ ನಮ್ಮ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮತಯಾಚಿಸಿದ್ದಾರೆ.  

ಇತ್ತ ಬಿಜೆಪಿ ಮುಖಂಡ ಮಂಗೋಟೆ ರುದ್ರೇಶ್  ಭದ್ರಾವತಿಯ ವಿವಿಧ ಶಿಕ್ಷಣ ಸಂಸ್ಥೆಗಳು , ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಮೈತ್ರಿ ಕೂಟದ ಅಭ್ಯರ್ಥಿಗಳನ್ನು ಬೆಂಬಲಿಸಿ ಅಧಿಕ ಮತಗಳ ಅಂತರದಿಂದ ಗೆಲ್ಲಿಸುವಂತೆ ಮತಯಾಚಿಸಿದ್ರು.

 

ಕಾಪುವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟರು ಕಾಪು ತಾಲೂಕಿನ  ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಾದ ಜ್ಞಾನ ಗಂಗಾ ಕಾಲೇಜು ನೆಲ್ಲಿಕಟ್ಟೆ, ಸೈಂಟ್ ಲಾವರೆನ್ಸ್ ಮೂಡುಬೆಳ್ಳೆ, ನಾರಾಯಣಗುರು ವಿದ್ಯಾಸಂಸ್ಥೆ ಪಡುಬೆಳ್ಳೆ, ಇನ್ನಂಜೆ ಎಸ್ ವಿ ಎಚ್ ಸಮೂಹ ಶಿಕ್ಷಣ ಸಂಸ್ಥೆ, ಕಟಪಾಡಿ ತ್ರಿಶಾ ಕಾಲೇಜು, ಎಸ್ ವಿ ಎಸ್ ಕಾಲೇಜು ವಿದ್ಯಾಸಂಸ್ಥೆಗೆ ತೆರಳಿ ಪ್ರಾಂಶುಪಾಲರು  ಹಾಗೂ ಸಿಬ್ಬಂದಿಗಳಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸಿ ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ಮತಯಾಚಿಸಿದರು 

ಜೂನ್ 3 ನೇ ತಾರೀಕಿನಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ  ಪರವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿಪೂರ್ವ ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜು ಮತ್ತು ಶ್ರೀ ದೇವಿ ಇಂಜಿನಿಯರಿಂಗ್ ಕಾಲೇಜು, ಕೆಂಜಾರುವಿನಲ್ಲಿ ಮೂಡಬಿದರೆ ಶಾಸಕರಾದ ಉಮಾನಾಥ್ ಕೋಟ್ಯಾನ್ ಅವರನ್ನು ಮತಯಾಚಿಸಿದರು 

ವಿಧಾನ ಪರಿಷತ್ ನೈರುತ್ಯ ಪದವೀಧರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನಲೆ ಶುಕ್ರವಾರ ಸುರತ್ಕಲ್ ನ ಗೋವಿಂದದಾಸ ಕಾಲೇಜಿನಲ್ಲಿ  ಶಿಕ್ಷಕರ ಹಾಗೂ ಪದವೀಧರ ಕುರಿತು ಮಾತನಾಡಿದ ಮಂಗಳೂರು ಉತ್ತರ ಶಾಸಕ ಡಾ ಭರತ್ ಶೆಟ್ಟಿ  ರಾಜ್ಯದ ಮೇಲ್ಮನೆಯಲ್ಲಿ ಅಸಂಬದ್ಧ ಕಾನೂನು ತರುವುದನ್ನು ತಡೆಯಲು ಬಿಜೆಪಿಗೆ  ಬೆಂಬಲದ ಅಗತ್ಯವಿದೆ. ಶಿಕ್ಷಕರ ಪದವೀಧರ ಸಮಸ್ಯೆಗಳನ್ನ ಸಂಪೂರ್ಣ ಬಗೆಹರಿಸಲು ಒಂದೇ ಬಾರಿಗೆ ಸಾಧ್ಯವಿಲ್ಲವಾದರೂ,ಹಂತ ಹಂತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು  ನಡೆಸಲಾಗುವುದು ಎಂದು ಭರವಸೆಯನ್ನು ನೀಡಿದರು