#jaisriram ಶಿವಮೊಗ್ಗದಲ್ಲಿ ಬಾಲರಾಮನ ದರ್ಶನ! ಹೇಗಿತ್ತು ಸಂಭ್ರಮ ಸಡಗರ ರಾಮೋತ್ಸವ! ನೋಡಿ ಫೋಟೋ ಸ್ಟೋರಿ
#jaisriram shivamogga ramostava ram mandir celebration in shimoga

SHIVAMOGGA | Jan 23, 2024 | ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಯಾದ ಹಿನ್ನೆಲೆ ಶಿವಮೊಗ್ಗದಲ್ಲಿ ನಿನ್ನೆ ದೀಪಾವಳಿಯ ಸಂಭ್ರಮ ಮನೆ ಮಾಡಿತ್ತು. ಬೆಳಗ್ಗೆಯಿಂದಲೂ ಹಳೆ ಶಿವಮೊಗ್ಗವೂ ಸೇರಿದಂತೆ ವಿವಿದೆಡೆ ಭಜನೆ ಕಾರ್ಯಕ್ರಮಗಳು ಆರಂಭಗೊಂಡಿದ್ದವು.
ಶ್ರೀರಾಮೋತ್ಸವ
ಏರಿಯಾಗಳ ಪ್ರಮುಖ ಸರ್ಕಲ್ಗಳಲ್ಲಿ ಪೆಂಡಾಲ್ಗಳನ್ನ ಹಾಕಿ ಜನರು ಶ್ರೀರಾಮನ ಪ್ರಾಣ ಪ್ರತಿಷ್ಟಾಪನೆಯನ್ನು ವೀಕ್ಷಿಸಿದ್ರು. ಅಲ್ಲದೆ ರಾಮನ ಮೂರ್ತಿಯನ್ನು ಅಲ್ಲಲ್ಲಿ ಇರಿಸಿ ವಿಶೇಷ ಪೂಜೆಗಳನ್ನು ಕೈಗೊಳ್ಳಲಾಯ್ತು. ಜೈ ಶ್ರೀರಾಮ್ ಘೋಷಣೆಗಳು ಮುಗಿಲು ಮುಟ್ಟಿದ್ದವು. ಕಲ್ಯಾಣ ಮಂಟಪ, ರಂಗಮಂದಿರ ಸೇರಿದಂತೆ ಹಲವು ರಸ್ತೆಗಳಲ್ಲಿ ವಿಶೇಷವಾಗಿ ರಾಮಪ್ರಸಾದ ವಿತರಣೆ ಮಾಡಲಾಗಿತ್ತು.
ಎಲ್ಲೆಲ್ಲೂ ಜೈಶ್ರೀರಾಮ್
ಇನ್ನೂ ಸಂಜೆಯಾಗುತ್ತಿದ್ದಂತೆ, ರಾಮಭಕ್ತರು ತಮ್ಮ ತಮ್ಮ ಮನೆಗಳ ಮುಂದೆ ದೀಪಗಳನ್ನು ಬೆಳಗಿ ಶ್ರೀರಾಮೋತ್ಸವವನ್ನು ಆಚರಿಸಿದರು. ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದ ಜನರು ಜೈಶ್ರೀರಾಮ್ ಎಂದು ಘೋಷಣೆ ಕೂಗಿದರು. ದೇವಾಲಯಗಳಿಗೆ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು.
ಮನೆ ಮನೆಯಲ್ಲಿಯು ದೀಪಾವಳಿ
ಮನೆ,ದೇವಾಲಯಗಳಲ್ಲಿ ದೀಪ ಹಚ್ಚಿ ಸಂಭ್ರಮಿಸಿದ ಜನರ ನಡುವೆ ಶಿವಮೊಗ್ಗ ನಗರದ ಶಿವಪ್ಪನಾಯಕ ವೃತ್ತದಿಂದ ರಾಮಣ್ಣ ಶ್ರೇಷ್ಠಿ ಪಾರ್ಕ್ ವರೆಗೆ ದೀಪೋತ್ಸವ ಮೆರವಣಿಗೆ ಸಹ ನಡೆಯಿತು.
ಗಾಂಧಿಬಜಾರ್ನಲ್ಲಿ ಮೆರವಣಿಗೆ
ಮಂಗಳವಾಧ್ಯಗಳ ಸಮ್ಮೇಳನದೊಂದಿಗೆ ನಡೆದ ಮೆರವಣಿಗೆಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಶಾಸಕ ಚನ್ನಬಸಪ್ಪರವರು ಸಹ ಪಾಲ್ಗೊಂಡಿದ್ದರು. ಡಿಎಸ್ ಅರುಣ್ ಸೇರಿದಂತೆ ಬಿಜೆಪಿಯ ಹತ್ತಾರು ಮುಖಂಡರುಗಳು ವಿಶೇಷವಾಗಿ ರಾಮೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡು ಖುಷಿ ಪಟ್ಟರು.
ಕಾಂಗ್ರೆಸ್ ಮುಖಂಡರಿಂದಲೂ ವಿಶೇಷ ಪೂಜೆ
ಇತ್ತ ಕಾಂಗ್ರೆಸ್ ಮುಖಂಡರು , ಕಾರ್ಯಕರ್ತರು ಸಹ ರಾಮೋತ್ಸವ ಹಿನ್ನೆಲೆಯಲ್ಲಿ ತಮ್ಮ ಏರಿಯಾಗಳಲ್ಲಿ ವಿಶೇಷವಾಗಿ ಸಡಗರವನ್ನು ಆಚರಿಸಿದರು. ಹಿರಿಯ ಮುಖಂಡ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿಯಲ್ಲಿ ಕೋದಂಡರಾಮ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ರಾಮೋತ್ಸವದ ಶುಭಕೋರಿದರು. ಅದೇ ರೀತಿಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣರವರು ಸಹ ತಮ್ಮ ಅಭಿಮಾನಿಗಳ ಜೊತೆಗೆ ರಾಮೋತ್ಸವದ ಪೂಜೆಯಲ್ಲಿ ಪಾಲ್ಗೊಂಡರು.
ಶಿವಮೊಗ್ಗ ನಗರದೆಲ್ಲೆಡೆ
ಶಿವಮೊಗ್ಗದ ಗೋಪಿ ವೃತ್ತ, ದುರ್ಗಿಗುಡಿ, ಜೈಲ್ ಸರ್ಕಲ್, ಲಕ್ಷ್ಮೀಟಾಕೀಸ್ ವೃತ್ತ ಸೇರಿದಂತೆ ಇತ್ತ ಹಳೆಯ ಶಿವಮೊಗ್ಗದಲ್ಲಿ ಸೀಗೇಹಟ್ಟಿ, ಸಿದ್ದಯ್ಯರೋಡ್, ರವಿವರ್ಮ ಸರ್ಕಲ್, ಬಿಬಿ ಸ್ಟ್ರೀಟ್, ಗಾಂಧಿಬಜಾರ್ಗಳಲ್ಲಿ ನಿನ್ನೆಯಿಡಿ ದಿನ ವಿಶೇಷವಾದ ಸಂಭ್ರಮ ಮನೆ ಮಾಡಿತ್ತು. ರಸ್ತೆ ತುಂಬೆಲ್ಲಾ ಸೇರಿದ್ದ ಜನರು ರಾಮಪ್ರಾಣ ಪ್ರತಿಷ್ಟಾಪನೆಯನ್ನು ಭಕ್ತಿ ಭಾವದಲ್ಲಿ ಕಣ್ತುಂಬಿಕೊಂಡರು.
ಪೊಲೀಸ್ ಬಿಗಿಭದ್ರತೆ
ಇನ್ನೂ ರಾಮೋತ್ಸವದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಪೊಲೀಸ್ ಇಲಾಖೆ ಹೆಚ್ಚಿನ ಬಂದೋಬಸ್ತ್ ಮಾಡಿಕೊಂಡಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನ ನಿಯೋಜಿಸಲಾಗಿತ್ತು. ಶಿವಪ್ಪನಾಯಕ ವೃತ್ತದಲ್ಲಿ ನಡೆದ ಸಣ್ಣ ಘಟನೆಯ ಬೆನ್ನಲ್ಲೆ ಮತ್ತಷ್ಟು ಭದ್ರತೆಯನ್ನು ಕೈಗೊಳ್ಳಲಾಯ್ತು.