ಹಾಸನ ಪೆನ್‌ ಡ್ರೈವ್‌ ಕೇಸ್‌ | ಮಲೆನಾಡು ಟುಡೆಯಲ್ಲಿ ಬೆತ್ತಲೆ ಸತ್ಯ ! | ದೊಡ್ಡಸುದ್ದಿ

Hasan Pen Drive Case | Bare truth in Malenadu Today! | big news Hassan District, Malenadu, Hassan Pen Drive News Follow-up. Supreme Court

ಹಾಸನ ಪೆನ್‌ ಡ್ರೈವ್‌ ಕೇಸ್‌ | ಮಲೆನಾಡು ಟುಡೆಯಲ್ಲಿ ಬೆತ್ತಲೆ ಸತ್ಯ ! | ದೊಡ್ಡಸುದ್ದಿ
Hasan Pen Drive Case , Malenadu, Hassan Pen Drive News Follow-up. Supreme Court

SHIVAMOGGA | MALENADUTODAY NEWS | Apr 27, 2024    

ಇವತ್ತಿಗೆ ವಾರ ಕಳೆದಿರಬಹುದು. ಹಾಸನದ ಪೆನ್‌ಡ್ರೈವ್‌ ವಿಚಾರ ಮುಗಮ್ಮಾಗಿ ರಾಜ್ಯದೆಲ್ಲೆಡೆ ಹರಿದಾಡುತ್ತಿದೆ. ವಿಶ್ವದಲ್ಲಿಯೇ ಅತಿದೊಡ್ಡ ವಿಕೃತ ಸೆಕ್ಸ್‌ ಸ್ಕ್ಯಾಮ್‌ ಎನ್ನಬಹುದಾದ ಪ್ರಕರಣದಲ್ಲಿ ಸಿಸ್ಟಮ್‌ ಮಾತ್ರ ಪ್ರತಿಕ್ರಿಯಿಸುತ್ತಿಲ್ಲ. ಜಾಣ ಮೌನ ವ್ಯವಸ್ಥೆಯ ಬಹುದೊಡ್ಡ ದುರಂತ. ಹಾದಿಬೀದಿಯಲ್ಲಿ ಬಿದ್ದು ಮಾನ ಕಳೆಯುತ್ತಿರುವ ಪೆನ್‌ಡ್ರೈವ್‌ ಕೇಳುತ್ತಿರುವ ಪ್ರಶ್ನೆ ನ್ಯಾಯ ಎಲ್ಲಿದೆ? ಉತ್ತರವನ್ನ ಬಹುಶಃ ಈ ದೇಶದ ನ್ಯಾಯಾಂಗ ವ್ಯವಸ್ಥೆಯೇ ನೀಡಬೇಕೆನೋ? ಇಲ್ಲವಾದರೆ, ದುರಂತ ಅಂತ್ಯಗಳಿಗೆ ಪ್ರಕರಣ ಸಾಕ್ಷಿಯಾಗುವ ಅಪಾಯವಿದೆ. 

ಏನಿದು ಪೆನ್‌ ಡ್ರೈವ್‌ ಕೇಸ್?‌

ರಾಜ್ಯದ ಪ್ರಭಾವಿ ಕುಟುಂಬದ ವ್ಯಕ್ತಿಯೊಬ್ಬರದ್ದು ಎನ್ನಲಾದ ಸೆಕ್ಸ್‌ ವಿಡಿಯೋಗಳು ವೈರಲ್‌ ಆಗುತ್ತಿವೆ. ಇಂತಹ ದೃಶ್ಯಗಳಿರುವ ಪೆನ್‌ಡ್ರೈವ್‌ ಹಾಗೂ ಸಿಡಿಗಳನ್ನ ಹಾಸನದ ಹಲವೆಡೆ ಗದ್ದೆಗೆ ಭತ್ತ ಬೀರಿದ ಹಾಗೆ ಬೀರಲಾಗಿದೆ ಎನ್ನಲಾಗ್ತಿದೆ. ಇದು ಪುಕಾರಷ್ಟೆ, ಅಸಲಿಗೆ ಆಯ್ದ ಸ್ಥಳಗಳಲ್ಲಿ ಒಂದಷ್ಟು ಸೀಡಿ ಪೆನ್‌ ಡ್ರೈವ್‌ ಇಟ್ಟು ವೈರಲ್‌ ಆಗುವಂತೆ ನೋಡಿಕೊಳ್ಳಲಾಗಿದೆ. ಪ್ರಭಾವಿ ಮುಖಂಡನ ಹಾಗೂ ಆತನ ಕುಟುಂಬದವರ ತೆಜೋವಧೆಯೇ ಈ ರೀತಿ ಮಾಡಲು ಕಾರಣ ಎನ್ನುತ್ತದೆ ಆರೋಪ. ಹಾಗಿದ್ದು ಸಹ ಯಾರದ್ದೋ ಮುಖ ಕೆಡಿಸೋಕೆ, ಹೆಣ್ಣುಮಕ್ಕಳ ಅಶ್ಲೀಲ ಚಿತ್ರಗಳನ್ನ ಹಾದಿಬೀದಿಗೆ ಎಸೆದಿದ್ದು ಘೋರ ಅಪರಾಧ. 

ನಡೆದಿದ್ದೇನು?

ಇಷ್ಟಕ್ಕೂ ವಿಡಿಯೋ ಹೊರಕ್ಕೆ ಬಂದಿದ್ದು ಹೇಗೆ? ಅದರ ಹಿಂದಿನ ಕಥೆ ಏನು? ಏನ್ನುವುದಾದರೆ, ಹಾಸನದಲ್ಲಿ ಹೀಗೆ ವಿಡಿಯೋ ಹರಿದಾಡ್ತಿದೆ ಎಂಬ ಸುದ್ದಿ 2023 ರಲ್ಲೇ ಪಸರಾಗಿತ್ತು. ಅದರ ಬೆನ್ನಲ್ಲೆ ಇಂಜೆಕ್ಷನ್‌ ಆರ್ಡರ್‌ವೊಂದು ಹರಿದಾಡ್ತಿದ್ದ ಈಥರಕ್ಕೆ ಈಥರ ಹಿಂಗಿಂಗೆ ಎಂಬ ಸುದ್ದಿಗೆ ಬ್ರೇಕ್‌ ಹಾಕಿತ್ತು.

ಭೂಮಿಯೊಂದರ ವಿಚಾರದ ಪ್ರತೀಕಾರ ಸ್ವರೂಪ ಈ ಪೆನ್‌ ಡ್ರೈವ್‌ ಕೇಸ್‌ ಎನ್ನುತ್ತೆ ಮೂಲ. ಜಮೀನು ವಿಚಾರಕ್ಕೆ ಕೊಟ್ಟ ಕಿರುಕುಳಕ್ಕೆ ಪ್ರತಿಕಾರವಾಗಿ ಪೆನ್‌ ಡ್ರೈವ್‌ ಹೊರಕ್ಕೆ ಬಂದಿತ್ತು. ಇದೀಗ ಚುನಾವಣೆ ಹೊತ್ತಿನಲ್ಲಿ ರಾಜಕೀಯ ಪ್ರಭಾವ ತಗ್ಗಿಸುವ ನಿಟ್ಟಿನಲ್ಲಿ ಇಂಜೆಕ್ಷನ್‌ ಆರ್ಡರ್‌ನ ಹೊರತಾಗಿ ಪೆನ್‌ಡ್ರೈವ್‌ನಲ್ಲಿ ಇದ್ದ ದೃಶ್ಯಗಳನ್ನ ಲೀಕ್‌ ಮಾಡಲಾಯ್ತು ಎಂಬದು ಆರೋಪ. ಇದಕ್ಕೆ  ರಾಜಕೀಯದ ಸಪೋರ್ಟ್‌ ಸಿಕ್ಕು ಇದೀಗ ವಿಕೃತಿಯ ವಿಡಿಯೋಗಳು ಈ ವಾರದಲ್ಲಿ ಬಯಲಾಗಿದೆ ಎನ್ನಲಾಗ್ತಿದೆ. 

ಚುನಾವಣಾ ತಂತ್ರಗಾರಿಕೆನಾ?

ವಿಚಿತ್ರ ಅಂದರೆ, ಇಡೀ ಪ್ರಕರಣ ಎಲೆಕ್ಷನ್‌ಗೆ ಸೀಮಿತವಾಗಿತ್ತು.  ಹೀಗೊಂದು ತಂತ್ರಗಾರಿಕೆ ಮಾಡಿ ಚುನಾವಣೆ ನಡೆಸಬೇಕಿತ್ತಾ? ಗೊತ್ತಿಲ್ಲ! ಮಂಡ್ಯ, ಹಾಸನ  ಸೇರಿದಂತೆ ಒಂದಷ್ಟು ಕ್ಷೇತ್ರಗಳ ಮೇಲೆ ಪರಿಣಾಮ ಬೀರಿಸುವುದು ಪೆನ್‌ ಡ್ರೈವ್‌ ತಂತ್ರಗಾರಿಕೆಯ ಭಾಗವಾಗಿತ್ತಂತೆ. ಇನ್ನೂ ಸೀಡಿ ಸತ್ಯಗಳು ಈ ಹಿಂದೆಯು ಹೊರಕ್ಕೆ ಬಂದಿದೆ. ರಾಜಕಾರಣದ ಬತ್ತಳಿಕೆಯಲ್ಲಿ ಸೀಡಿ ಕೇಸ್‌ಗಳು ಮೋಸ್ಟ್‌ ಕ್ರಿಮಿನಲ್‌ & ವರ್ಸ್ಟ್‌ ತಂತ್ರಗಾರಿಕೆ. ಈ ಪೆನ್‌ಡ್ರೈವ್‌ ಕೇಸ್‌ ಅದರ ಮುಂದುವರಿದ ಭಾಗವೆಂಬುದು ಸ್ಪಷ್ಟ.  ಇದನ್ನ ಒತ್ತಗಿಟ್ಟರೆ, ಸದರಿ ಕೇಸ್‌ ಬೇರೆಯದ್ದೇ ಸ್ವರೂಪ ಪಡೆದುಕೊಳ್ಳಬೇಕಿತ್ತು. ಒಬ್ಬ ಗೌರವಯುತ ಹೆಣ್ಣಿನ ಮರ್ಯಾದೆಯನ್ನು ಉಚ್ಚಾಟಿಸಿದಂತಿರುವ ಪ್ರಕರಣ, ಜಾತಿವ್ಯವಸ್ಥೆ, ಅಧಿಕಾರ ಬಲ, ಪ್ರಭಾವಿ ಕುಟುಂಬ, ಹಣದ ಶಕ್ತಿಕೇಂದ್ರದ ಕಾಲಿನಡಿಯಲ್ಲಿ ಸಿಲುಕಿ ಉಸಿರುಗಟ್ಟಿಸಿಕೊಂಡ ಜನಸಾಮಾನ್ಯನ ಕೊರಳಿನಂತಾಗಿದೆ. 

ಶ್!!!

ಇನ್ನ ಹಲವು ಮಾಧ್ಯಮಗಳದ್ದು, ಪ್ರಮುಖ ತನಿಖಾಸಂಸ್ಥೆಗಳದ್ದು, ಪವರ್‌ ಪುಲ್‌ ಪಕ್ಷಗಳದ್ದು ಈ ವಿಚಾರಕ್ಕೆ ಮಾತಿಲ್ಲ..ಕಥೆಯಿಲ್ಲ..ಚುಪ್ಕೆ..ಸುಮ್ಕೆ..ಆಟವಾಗಿದೆ. ಸೀರಿಯಸ್‌ ಆದ ಒಂದೇ ಒಂದು ಹೇಳಿಕೆ ಪ್ರಮುಖ ರಾಜಕಾರಣಿಗಳಿಂದ ಬಂದಿಲ್ಲ. ಬಹುಶಃ ಮೇ ಏಳರ ನಂತರವಷ್ಟೆ ಎಲ್ಲರ ಮಾತುಗಳು ಹೊರಕ್ಕೆ ಬರಬಹುದು. ಅಲ್ಲಿವರೆಗೂ ಹೌದಾ…ಹೌದಾ.. ಹೌದಾ ಅಷ್ಟೆ..

ಯಾರೋ ಒಬ್ಬ ದೊಡ್ಡ ರಾಜಕಾರಣಿ, ಇನ್ನೊಬ್ಬ ರಾಜಕಾರಣಿಯೊಬ್ಬರು ಹೆಣ್ಣುಮಕ್ಕಳನ್ನ ಕಿಡ್ನ್ಯಾಪ್‌ ಮಾಡಿದ್ದಾರೆ ಅಂತಾ ನೇರ ಆರೋಪ ಮಾಡಿದಾಗಲೂ ವ್ಯವಸ್ಥೆ ಮಾತನಾಡಿರಲಿಲ್ಲ. ಇದೀಗ ಹತ್ರತ್ರ ಮೂರು ಸಾವಿರ ಹೆಣ್ಣುಮಕ್ಕಳನ್ನ ಮೊಬೈಲ್‌ ಕ್ಯಾಮರಾದೆದುರು ಬೆತ್ತಲಾಗಿಸಿದ ವಿಕೃತ ಕಾಮದ ವಿರುದ್ಧ ಪ್ರತಿಭಟನೆಯು ಸಹ ವ್ಯಕ್ತವಾಗ್ತಿಲ್ಲ. ವಿರೋಧಿ ಬಣದವರು, ವೈಯಕ್ತಿಕವಾಗಿ ಖ್ಯಾತಿವೆತ್ತವರು ಸಹ ಪೆನ್‌ ಡ್ರೈವ್‌ ವಿಚಾರದಲ್ಲಿ ಶ್!!!!‌ ಎನ್ನುತ್ತಿದ್ದಾರೆ.

ಇಷ್ಟೆ ಏಕೆ ಘನ ಸರ್ಕಾರದ ಪ್ರತಿಕ್ರಿಯೆ ಇನ್ನಷ್ಟೆ ಬರಬೇಕಿದೆ. ಸಮಾಧಾನದ ಸಂಗತಿ ಎಂದರೆ,  ಈ ಪೆನ್‌ ಡ್ರೈವ್‌ ಕೇಸ್‌ನಲ್ಲಿ ರಾಜ್ಯ ಮಹಿಳಾ ಆಯೋಗ ಧ್ವನಿ ಎತ್ತಿರುವುದು.  ಸರ್ಕಾರಕ್ಕೆ  ಹಾಗೂ ಪೊಲೀಸ್‌ ಇಲಾಖೆ  ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಎಂದು ಕೋರಿದ್ದಾರೆ. ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸುವ ನಿರೀಕ್ಷೆಯಂತು ಇಟ್ಟುಕೊಳ್ಳಬೇಕಿದೆ. 

ಜೇಡರ ಬಲೆ 

ಕಾನೂನು ಜೇಡರಬಲೆಯಿದ್ದಂತೆ ಎಂಬ ಹಳೆಯ ಮಾತಿದೆ. ಹೌದು ಕಾನೂನು ಜೇಡರಬಲೆಯೇ, ಅಲ್ಲಿ ಸಿಲುಕುವುದು ಸಣ್ಣಪುಟ್ಟ ಕ್ರಿಮಿಗಳು. ಅತಿದೊಡ್ಡ ದುಷ್ಟರ ದೊರೆಗಳು ಈ ಜೇಡರ ಬಲೆಯನ್ನೆ ಹರಿದು ಚೂರಾಗಿಸ್ತಾರಂತೆ. ಕಾನೂನೇ ಇಂತವರ ವಿಷಯದಲ್ಲಿ ಬದಲಾಗುತ್ತದೆ ಎನ್ನುವ ಟೀಕೆ ಕೇವಲ ವ್ಯಂಗ್ಯವಷ್ಟೆವಲ್ಲ. ದೌರ್ಭಾಗ್ಯದ ಸಂಗತಿ ಎನ್ನುತ್ತಾರೆ ಕಾನೂನು ತಜ್ಞರೊಬ್ಬರು. ಇದಕ್ಕೆ ಪೂರಕ ಎಂಬಂತೆ ಪೆನ್‌ ಡ್ರೈವ್‌ ಕೇಸ್‌ ಕೂಡ ಕಾನೂನನ್ನ ಮೀರಿ ಸಾಗುವ ಯತ್ನ ಮಾಡುತ್ತಿದೆ.  

ಐಪಿಸಿ ಸೆಕ್ಷನ್‌ ಅಡಿಯಲ್ಲಿ

ಕರ್ನಾಟಕ ರಾಜ್ಯ ಉಮೇಶ್‌ ರೆಡ್ಡಿಯಂತಹ ವಿಕೃತನನ್ನು ನೋಡಿದೆ. ಈ ಪೆನ್‌ ಡ್ರೈವ್‌ ಕೇಸ್‌ ಅದನ್ನು ಮೀರಿಸಬಹುದು. ವಿಶ್ವದ ಅತಿದೊಡ್ಡ ವಿಕೃತ ಕಾಮದ ಪ್ರಕರಣವಾಗುವ ಸಾಧ್ಯತೆ ಇದೆ. ಏಕೆಂದರೆ, ಮಹಿಳೆಯರನ್ನು ದೃಶ್ಯದಲ್ಲಿ ಬಳಸಿಕೊಂಡ ರೀತಿ ಹಲವು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಅಪರಾಧವಾಗುತ್ತದೆ.

ಬಲವಂತದ ಸೆಕ್ಸ್‌, ಮಹಿಳೆಯ ಮೇಲಿನ ದೌರ್ಜನ್ಯ, ಅನುಮತಿಯಿಲ್ಲದೆ ಆಕೆಯ ಖಾಸಗಿತನದ ಚೀತ್ರಿಕರಣ ಮತ್ತು  ಆ ದೃಶ್ಯಗಳನ್ನ ಹಂಚಿದ ಅಪರಾಧ, ಲೈಂಗಿಕ ದೌರ್ಜನ್ಯ & ಕಿರುಕುಳ, ವಿಕೃತ ಕಾಮ, ನಂಬಿಕೆ ದ್ರೋಹ, ಅತ್ಯಾಚಾರ, ಕೆಲಸದ ಸ್ಥಳದಲ್ಲಿ ಮಹಿಳೆಗೆ ಕಿರುಕುಳ, ಐಟಿ ಆಕ್ಟ್‌, ಹೀಗೆ ಪ್ರತಿದೃಶ್ಯದಲ್ಲಿ ಕಾಣುವ ಮಹಿಳೆಯ ಘನತೆ ಗೌರವಕ್ಕೆ ಧಕ್ಕೆ ತಂದ ಆರೋಪಗಳಿಂದ ಹಿಡಿದು ವಿಕೃತಿಯ ಅಪರಾಧಗಳವರೆಗೂ ಸರಣಿ ಸಾಲಿನ ಐಪಿಸಿ ಸೆಕ್ಷನ್‌ಗಳು ಪ್ರಕರಣಕ್ಕೆ ಅನ್ವಯವಾಗುತ್ತದೆ. ಆದರೆ ಅನ್ವಯಿಸಲು ನ್ಯಾಯಾಂಗ ವ್ಯವಸ್ಥೆಯೇ ಮುಂದಾಗಬೇಕೆನಿಸುತ್ತಿದೆ ಎನ್ನುತ್ತಾರೆ ವಕೀಲರೊಬ್ಬರು. ಅವರು ಹೇಳುವ ಪ್ರಕಾರ, ಕಾರ್ಯಾಂಗ, ಶಾಸಕಾಂಗ ವ್ಯವಸ್ಥೆಗಳು ಮೌನವಾಗಿದ್ದಾಗ ನ್ಯಾಯಾಂಗದ ಅಡಿಯಲ್ಲಷ್ಟೆ ಪ್ರಕರಣಕ್ಕೆ ನ್ಯಾಯ ಸಿಗಬೇಕಿದೆ

ಹರಿದಾಡುತ್ತಿರುವ ದೃಶ್ಯಗಳು ಸಂಬಂಧಪಟ್ಟವರದ್ದೇ ಆಗಿದ್ದಲ್ಲಿ ಪ್ರಿವೆನ್ಶಪ್‌ ಆಫ್‌ ಕರಪ್ಷನ್‌ ಆಕ್ಟ್‌ ಅಡಿಯಲ್ಲಿ ಅಧಿಕಾರದ ದುರುಪಯೋಗವಾಗುತ್ತದೆ ಎಂದು ಹೇಳಲಾಗುತ್ತಿದೆ. 2800 ಕ್ಕೂ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸುವುದರ ಹಿಂದೆ, ದುಡ್ಡಿನ ಆಮೀಷ ಒಡ್ಡಿರುವ, ಬ್ಲಾಕ್‌ಮೇಲ್‌ ಮಾಡಿರುವ , ಕೆಲಸ ಮಾಡಿಸಿಕೊಳ್ಳಲು ಅನಿವಾರ್ಯತೆ ಸೃಷ್ಟಿಸಿರುವ,  ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡಿರುವ, ಅಧಿಕಾರದ ಆಸೆ ಒಡ್ಡಿರುವ, ಅಸಹಾಯಕತನವನ್ನು ಮಿಸ್‌ ಯುಸ್‌ ಮಾಡಿರುವ ಸಾಧ್ಯತೆ ಇದೆ ಎನ್ನುತ್ತದೆ ತನಿಖಾಸಂಸ್ಥೆಯ ಕ್ರೈಂ ವಿಭಾಗ. ಎಲ್ಲದಕ್ಕಿಂತಲೂ ಹೆಚ್ಚಾಗಿ ಮಹಿಳೆಯ ಖಾಸಗಿತನದ ದೃಶ್ಯವನ್ನು ಹಂಚಿದ್ದು ಎಲ್ಲದಕ್ಕಿಂತಲೂ ದೊಡ್ಡ ಅಪರಾಧಿಕ ಕೃತ್ಯ 

ವೈರಲ್ ಮಾಡುತ್ತಿರುವ ದೃಶ್ಯಗಳು ಅಸಹ್ಯಹುಟ್ಟಿಸುತ್ತಿದೆ. ಅದರಲ್ಲಿಯು ಬಡಮಹಿಳೆಯೊಬ್ಬರು ಕೈ ಮುಗಿದು ಅಂಗಲಾಚಿದರೂ ಬಿಡದೇ ಆಕೆಯ ಮೇಲೆ ವಿಕೃತಿ ಎಸಗಿರುವಂತದ್ದು ಕ್ಷಮಿಸಲಾರದಂತಹ ಅಪರಾಧ. ಈ ವಿಡಿಯೋ ಆಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಕಾನೂನಿನಡಿ ರೇಪ್‌ ದಾಖಲಿಸಬೇಕು. ಬಹಿರಂಗಗೊಂಡಿರುವ ವಿಡಿಯೋಗಳ ಪೈಕಿ ಮನಕಲಕುವ ವಿಡಿಯೋ ಇದಾಗಿದ್ದು, ಸಂತೃಸ್ತ ಮಹಿಳೆ ನ್ಯಾಯ ಮತ್ತು ಪರಿಹಾರ ಎರಡೂ ಸಹ ಸಿಗಬೇಕು. ಆಕೆಗೆ ರಕ್ಷಣೆ ನೀಡಬೇಕು. ವಿಕೃತಿ ಮೆರೆದ ಮತ್ತು ಆ ದೃಶ್ಯವನ್ನ ಹಂಚಿದ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕು.

ಹೆಸರು ಹೇಳಲು ಇಚ್ಚಿಸಿದ ವ್ಯಕ್ತಿ

ಸುಪ್ರೀಂಕೋರ್ಟ್‌ ಮೆಟ್ಟಿಲೇರುತ್ತಾ ಪ್ರಕರಣ

ಹಿರಿಯ ವಕೀಲರು ಹೇಳುವಂತೆ, ಇಂತಹ ಪ್ರಕರಣಗಳ ಸಂಬಂಧ ಸ್ವತಃ ಕೋರ್ಟ್‌ ವಿಚಾರಣೆ ಕೈಗೆತ್ತಿಕೊಳ್ಳುವ ಪ್ರಯತ್ನ ಮಾಡಬಹುದು. ಅಂತಹ ಸಾಧ್ಯತೆಗಳು ಹೆಚ್ಚಿವೆ. ಮಹಿಳೆಯ ಮಾನ ಗೌರವ ಹಕ್ಕಿನ ಪ್ರಶ್ನೆಯಾದ್ದರಿಂದ ಗೌರವಾನ್ವಿತ ನ್ಯಾಯಾಲಯ ಈ ಬಗ್ಗೆ ಸುಮುಟೋ ಕೇಸ್‌ಗೆ ಸೂಚಿಸಿ, ತನ್ನ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬಹುದು. ಇಲ್ಲಿ ಮಹಿಳೆಯ ಮೇಲೆ ವಿಕೃತಿ ಎಸೆಗಿದ್ದು ಹಾಗೂ ನಿರಾಕರಣೆಯ ನಡುವೆಯು ಚಿತ್ರೀಕರಿಸಿದ್ದು ಮತ್ತು ಅಂತಹ ದೃಶ್ಯವನ್ನು ಹಂಚಿ ಗೌರವಕ್ಕೆ ಚ್ಯುತಿ ತಂದಿದ್ದು ಮೇಜರ್‌ ಅಫೆನ್ಸ್‌..

ಪೆನ್‌ ಡ್ರೈವ್‌ ಕೇಸ್‌ನ ಬಗ್ಗೆ ವಿಚಾರ ನಮಗೂ ತಲುಪಿದೆ. ವ್ಯವಸ್ಥೆಯಡಿಯಲ್ಲಿನ ಮುಖ್ಯ ವ್ಯಕ್ತಿಗಳು ಪ್ರಕರಣದ ಬಗ್ಗೆ ಮಾತನಾಡದೇ ಇರುವುದು ಖೇದಕರ. ಈ ವಿಚಾರದಲ್ಲಿ ನಾಯ್ಯಾಲಯವೇ ಮಧ್ಯಪ್ರವೇಶಿಸಿ ಪ್ರಕರಣವನ್ನು ಕೈಗೆತ್ತಿಕೊಳ್ಳಲು ಅವಕಾಶಗಳು ಇವೆ. ನ್ಯಾಯಾಂಗ ತನಿಖೆಯಿಂದ ಮಾತ್ರ ಈ ಪ್ರಕರಣದ ಸಂತ್ರಸ್ತರಿಗೆ ದೈರ್ಯ ತುಂಬಲು ಸಾಧ್ಯ. ಹೈಕೋರ್ಟ್‌ ಅಥವಾ ಸುಪ್ರೀಂಕೋರ್ಟ್‌ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆ ನಡೆದು ತಪ್ಪಿತಸ್ತರಿಗೆ ಶಿಕ್ಷೆಯಾಗಬೇಕು 

ಶ್ರೀಪಾಲ್‌, ವಕೀಲರು

ಇದೆಂಥಾ ವಿಕೃತಿ

ವಿಡಿಯೋ ಮಾರ್ಪಿಂಗ್‌ ಆಗಿದೆ. ಎಐ ಬಳಸಿ ದುರುದ್ದೇಶದಿಂದ ಕೃತ್ಯವೆಸಗಲಾಗಿದೆ ಎಂಬ ವಾದವೂ ಇಲ್ಲಿದೆ. ಇದಕ್ಕೆ ವೈಜ್ಞಾನಿಕ ತನಿಖೆ ಉತ್ತರಿಸಬೇಕೆ ಹೊರತು, ಅನಿಷ್ಟಕ್ಕೆ ಶನೀಶ್ವರ ಕಾರಣ ಎಂಬಂತೆ, ಎಐಯನ್ನ ದೂರುವ ಮೌಢ್ಯವಾಗಬಾರದು. ಇನ್ನೊಂದು ಕಡೆ, ಮೊಬೈಲ್‌ನಿಂದ ಮೊಬೈಲ್‌ಗೆ ದೃಶ್ಯಗಳನ್ನು ಹಂಚುವುದು ಕೂಡ ಕಾನೂನಿನ ಅಡಿಯಲ್ಲಿ ಅಪರಾಧ. ಈ ವಿಚಾರದ ಅರಿವಿದ್ದರೂ ಸಹ ಪೆನ್‌ ಡ್ರೈವ್‌ ವಿಡಿಯೋಗಳನ್ನ ಅತಿ ಹೆಚ್ಚುಬಾರಿ ಫಾರವರ್ಡ್‌ ಮಾಡಲಾಗುತ್ತಿದೆ. ಅಲ್ಲದೆ ಅದರಲ್ಲಿರುವವರು ಯಾರು ಎಂದು ಹುಡುಕುವ ಮತ್ತೊಂದು ವಿಕೃತಿ ಜಾಸ್ತಿಯಾಗುತ್ತಿದೆ. ಕಂಡವರ ಉದ್ದೇಶಪೂರ್ವಕ ಅಫೆನ್ಸಿವ್‌ ಚೇಷ್ಟೆಗೆ ಸಂತ್ರಸ್ತರ ಮಾನ ಹರಾಜಗುತ್ತಿರುವುದಕ್ಕೆ ನ್ಯಾಯ ಸಿಗಲೇಬೇಕಿದೆ. ಆ ನಿಟ್ಟಿನಲ್ಲಿ ಯಾವ ವ್ಯವಸ್ಥೆ ಮುಂದಡಿ ಇಡುತ್ತದೆಯೋ? 

ಯಾರದ್ದೋ ಒಬ್ಬರ ವಿಚಾರಕ್ಕೆ ಹೆಣ್ಣುಮಕ್ಕಳ ಗೌರವಕ್ಕೆ ದಕ್ಕೆ ತಂದಿರುವಂತಹ ಪ್ರಕರಣ ಇದಾಗಿದೆ. ಈ ಪ್ರಕರಣದಲ್ಲಿ ಜಗದಗಲದಷ್ಟು ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಸಂತ್ರಸ್ತರಿಗೆ ನ್ಯಾಯ ಸಿಗಲು, ಅವರುಗಳಿಗೆ ಧೈರ್ಯ ತುಂಬಲು ಹಾಗೂ ಕಾನೂನಿನಡಿಯಲ್ಲಿ ಶೋಷಿತ ಮಹಿಳೆಯರಿಗೆ ರಕ್ಷಣೆ ಸಿಗಲು ಸ್ವತಃ ಮಾನ್ಯ ಸುಪ್ರೀಂಕೋರ್ಟ್‌ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕು.

ಎನ್‌.ಮಂಜುನಾಥ್‌, ಅಧ್ಯಕ್ಷರು ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌