ಇತಿಹಾಸದಲ್ಲಿ ಎಂದೂ ಬತ್ತದ ದೇವಗಂಗಾ ಈಜುಕೊಳ, ! ಇಲ್ಲಿ ನಿಸರ್ಗ ಮುನಿದಿಲ್ಲ…ಕೊಳ ಬತ್ತಿಲ್ಲ. !

ಇತಿಹಾಸದಲ್ಲಿ ಎಂದೂ ಬತ್ತದ ದೇವಗಂಗ ಈಜುಕೊಳ ಇಲ್ಲಿ ನಿಸರ್ಗ ಮುನಿದಿಲ್ಲ…ಕೊಳ ಬತ್ತಿಲ್ಲ. ರಾಜ್ಯದಲ್ಲಿ ಬೀಕರ ಬರ ಎದುರಾಗಿ, ಹನಿ ಹನಿ ನೀರಿಗೂ ಕೂಡ ತತ್ವಾರ ಎದುರಾದಗಲೂ..ಬತ್ತಲಿಲ್ಲ ಈ ಜೀವಜಲ

 2019 ರಲ್ಲಿ ರಾಜ್ಯದಲ್ಲಿ ಬೀಕರ ಬರ ಎದುರಾಗಿ ಮಠ ಮಾನ್ಯಗಳ ಹಳ್ಳ-ಕೊಳ್ಳಗಳೆಲ್ಲಾ ಬತ್ತಿ ಬರಿದಾಗಿದ್ದವು. ಅದಕ್ಕು ಮುನ್ನ ಉಡುಪಿಯ ಶ್ರೀಕೃಷ್ಣ ಮಠದ ಪುಷ್ಕರಿಣಿ, ಬರಿದಾಗಿತ್ತು, ತದನಂತರ  ಶ್ರೀಕ್ಷೇತ್ರ ಧರ್ಮಸ್ಥಳದ ಜೀವನದಿ ನೇತ್ರಾವತಿ ಬತ್ತಿ ಬರಿದಾಗಿತ್ತು..ರಾಜ್ಯದಲ್ಲಿ ನೀರಿಗೆ ಹಾಹಾಕಾರ ಎದುರಾದ ಸಂದರ್ಭದಲ್ಲಿ ಇಲ್ಲೊಂದು ಕೊಳ ಮಾತ್ರ ಸದಾ  ತುಂಬಿ ತುಳುಕುತ್ತಿತ್ತು. ವರ್ಷಪೂರ್ತಿ ನೀರಿನಿಂದ ತುಂಬಿರುವ ಈ ಕೊಳ ಬರದ ಬೇಗೆಯಲ್ಲೂ  ಬತ್ತದೆ ತನ್ನ ನೈಜತೆಯನ್ನು ಉಳಿಸಿಕೊಂಡಿತ್ತು. ಯಾವುದು ಆ ಕೊಳ ಮುಂದೆ ಓದಿ.

ಇತಿಹಾಸದಲ್ಲಿ ಎಂದೂ ಬತ್ತದ ದೇವಗಂಗ ಈಜುಕೊಳ.

ಇಲ್ಲಿ ನಿಸರ್ಗ ಮುನಿದಿಲ್ಲ…ಕೊಳ ಬತ್ತಿಲ್ಲ.

ಮೂರು ವರ್ಷದ ಹಿಂದೆ ರಾಜ್ಯದಲ್ಲಿ ಬೇಸಿಗೆಯಲ್ಲಿ ಬೀಕರ ಬರ ಎದುರಾಗಿದ್ದು, ಜನ ಜಾನುವಾರುಗಳಿಗೆ ನೀರು ಸಿಗದೇ ಹಾಹಾಕಾರ ಎದುರಾಗಿತ್ತು. ಜನರು ನೀರಿಗಾಗಿ ಭೂಮಿಯ ಒಡಲನ್ನು ಬಗಿಯುವಂತಹ ಸ್ಥಿತಿ ನಿರ್ಮಾಣವಾಗಿತ್ತು..ರಾಜ್ಯಾಧ್ಯಂತ ತಲೆ ದೋರಿರುವ ಬರದಿಂದಾಗಿ ಮಠ ಮಾನ್ಯಗಳ ಆವರಣದಲ್ಲಿನ ಪುಷ್ಕರಣಿಗಳು,ಬಾವಿಗಳೆಲ್ಲಾ ಬತ್ತಿ ಬರಿದಾಗಿದ್ವು. ಆದರೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬಸವನಬೈನೆ ಗ್ರಾಮದ ದೇವಗಂಗ ಈಜುಕೊಳ ಮಾತ್ರ ನೀರಿನಿಂದ ತುಂಬಿ ತುಳುಕುತ್ತಿತ್ತು. ಈಗಲೂ ತುಂಬಿದೆ.

Malenadu Today

ಕೆಳದಿ ಅರಸರ ಕಾಲದಲ್ಲಿ ನಿರ್ಮಾಣವಾಗಿರುವ ಈ ಕೊಳಕ್ಕೆ ನೂರಾರು ವರ್ಷದ ಇತಿಹಾಸ ಇದೆ. ಇದರಲ್ಲಿ ಏಳು ಕೊಳಗಳಿದ್ದು ಕಮಲಾಕಾರ,ನಕ್ಷತ್ರಾಕಾರದಲ್ಲಿ ಕೊಳಗಳನ್ನು ನಿರ್ಮಿಸಲಾಗಿದೆ.ಒಂದರ ಮೂಲಕ ಮತ್ತೊಂದು ಕೊಳಕ್ಕೆ ನೀರು ಹಾಯುವ ವ್ಯವಸ್ಥೆ ಇಲ್ಲಿದೆ. ಕೆಳದಿ ಅರಸರ ರಾಣಿಯರು ದೇವಗಂಗ ಕೊಳದಲ್ಲಿ ಈಜುತ್ತಿದ್ದರು. ಕೊಳದ ಪಕ್ಕದಲ್ಲಿ ಗುಲಾಬಿ ತೋಟವಿತ್ತು.ಹೀಗಾಗಿ ಇದನ್ನು ಗುಲಾಬಿ ಕೊಪ್ಪಲು ಅಂತಲೂ ಕರೆಯುತ್ತಿದ್ದರು.ಅಂದಿನ ಕಾಲದಲ್ಲಿ ಕಾಶಿ ಕೇದಾರದಂತ ಪುಣ್ಯ ಕ್ಷೇತ್ರಗಳಿಗೆ ಹೋಗಲು ಸಾಧ್ಯವಾಗದ ಜನರಿಗೆ ಕೆಳದಿ ಅರಸರು ಇಲ್ಲಿಯೇ ಪೂಜೆ ಸಲ್ಲಿಸುವ ವ್ಯವಸ್ಥೆ ಕಲ್ಪಿಸಿದ್ದರು ಎನ್ನಲಾಗಿದೆ. ಕೆಳದಿ ಅರಸರು ಅದ್ಯಾವ ಪರಿಕಲ್ಪನೆಯಲ್ಲಿ ನೀರಿನ ಸೆಲೆಯನ್ನು ಗಮನಿಸಿ ಕೊಳ ನಿರ್ಮಿಸಿದ್ದರೋ,,ಗೊತ್ತಿಲ್ಲ..ಈ ಕೊಳದಲ್ಲಿ ಅಂದಿನಿಂದ ಇಂದಿನವರೆಗೂ ನೀರು ಬತ್ತೇ ಇಲ್ಲ…ಇಸ್ರೋ ಸಂಸ್ಥೆ ಕೂಡ ಇಲ್ಲಿನ ಅಂತರ್ಜಲ ಮೂಲವನ್ನು ಸಂಶೋಧನೆಗೈಯಲು ಮುಂದಾಗಿದೆ.

Malenadu Today

ಕೊಳದಲ್ಲಿ ಮಿಂದೇಳುತ್ತಿರುವ ಸ್ಥಳೀಯರು..

ಅಂದು ರಾಣಿಯರು ವಿಲಾಸಿ ಬದುಕಿಗೆ ನಿರ್ಮಿಸಿಕೊಂಡ ಕೊಳದಲ್ಲಿ ಈಗ ಪ್ರವಾಸಿಗರು ಈಜುತ್ತಿದ್ದಾರೆ.ಇದೊಂದು ರೀತಿಯ ಸ್ವಿಮ್ಮಿಂಗ್ ಪೂಲ್ ..,ನೈಸರ್ಗಿಕವಾಗಿಯೇ ಈ ಕೊಳಕ್ಕೆ ನೀರು ಬೆಟ್ಟದಿಂದ ಹರಿದು ಬರುವುದರಿಂದ ಈವರೆಗೂ ಕೊಳ ಬತ್ತಿಯೇ ಇಲ್ಲ. ಬೀಕರ ಬರದಲ್ಲಿಯೂ ಕೂಡ ಕೊಳದಲ್ಲಿ ನೀರು ತುಂಬಿದ್ದು ಪ್ರವಾಸಿಗರು ಅಪರೂಪದ ದೇವಗಂಗ ಕೊಳ ಕಂಡು ಎಂಜಾಯ್ ಮಾಡುತ್ತಿದ್ದಾರೆ ಅಲ್ಲದೇ ನೀರಿನಲ್ಲಿ ಮಿಂದೆದ್ದು ದಣಿವಾರಿಸಿಕೊಳ್ಳುತ್ತಿದ್ದಾರೆ.

 ಇದನ್ನ ಸಹ ಓದಿ : ರಿಪ್ಪನ್ ಪೇಟೆ ಹೆದ್ದಾರಿ ಪುರದಲ್ಲಿ ಕಾರು ಪಲ್ಟಿ ನಂತರ ನಡೆದಿದ್ದೇನು?

ಕೆಳದಿ ಅರಸರ ಕಾಲದಲ್ಲಿ ನಿರ್ಮಾಣವಾದ ಈ ದೇವಗಂಗ ಕೊಳವನ್ನು ಪುರಾತತ್ವ ಇಲಾಖೆ ನಿರ್ವಹಣೆ ಮಾಡುತ್ತಿದೆ. ಕಳೆದ ಕೆಲ ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕೊಳದ ಸುತ್ತ ಲಾನ್ ಹಾಕಲಾಗಿದ್ದು ನಿರ್ವಹಣೆ ಇಲ್ಲದೇ ಅದು ಸಂಪೂರ್ಣ ಹೊಣಗಿ ಹೋಗಿದೆ. ಅಷ್ಟೇ ಅಲ್ಲದೇ ಬತ್ತದ ದೇವಗಂಗ ಕೊಳಕ್ಕೆ ಹೋಗಲು ಸರಿಯಾದ ರಸ್ತೆ ವ್ಯವಸ್ಥೆ ಮಾಡ ಬೇಕಿದೆ. ಆಗಾಗೀ ಸಮರ್ಪಕವಾಗಿ ರಸ್ತೆ ವ್ಯವಸ್ಥೆ ಕಲ್ಪಸಿಕೊಡುವ ಮೂಲಕ ಅಪರೂಪದ ದೇವಗಂಗ ಕೊಳವನ್ನು ಉಳಿಸ ಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.

 

ದೇವಗಂಗ ಕೊಳ ಬತ್ತದಿರಲು ಅಂತರ್ಜಲ ಹಾಗು ಜಲಕಿಂಡಿಗಳು ಕಾರಣವಾಗಿದೆ,ಬತ್ತದ ದೇವಗಂಗೆ ಕೊಳ ನೀರಿನ ಮೌಲ್ಯ ಸಾರಿ ಹೇಳುತ್ತಿದೆ.ಆದರೆ ಪ್ರವಾಸಿ ತಾಣವಾಗಿರುವ ದೇವಗಂಗೆ ಕೊಳ ನಿರ್ಲಕ್ಷ್ಯಕೊಳಗಾಗಿದೆ. ಈ ಅಪರೂಪದ ದೇವಗಂಗೆ ಕೊಳವನ್ನು ಪುರಾತತ್ವ ಇಲಾಖೆ ಸಮರ್ಪಕವಾಗಿ ನಿರ್ವಹಣೆ ಮಾಡುವ ಮೂಲಕ ಇದಕ್ಕೆ ಜೀವ ಕಳೆ ತುಂಬ ಬೇಕಿದೆ.

 

 

 

 

Leave a Comment