ಶಿವಮೊಗ್ಗ ನಗರ ನಾಗರಿಕರಿಗೆ ಸೂಚನೆ, ಹೆಚ್ಚಾಯ್ತು ನೀರಿನ ಕಂದಾಯ/ ಕಟ್ಟಿರೋರಿಗೂ ಮತ್ತೆ ಬಾಕಿ ಕಟ್ಟಲು ಸೂಚನೆ/ ಏನಿದೆ ಪ್ರಕಟಣೆಯಲ್ಲಿ

Malenadu Today

ಶಿವಮೊಗ್ಗ : ಶಿವಮೊಗ್ಗ ನಗರಪಾಲಿಕೆಯ ಜನರಿಗೆ ಹೊಸ ಹೊರೆಯೊಂದನ್ನ ನೀಡಿದೆ.  ನಗರಸಭೆಯಿಂದ ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿರುವ ಹಿನ್ನೆಲೆಯಲ್ಲಿ ನೀರಿನ ದರವನ್ನು ಕರ್ನಾಟಕ ಸರ್ಕಾರದ ಆದೇಶ ಹಾಗೂ ಮಹಾನಗರಪಾಲಿಕೆಯ ನಿರ್ದೇಶನದಂತೆ ಪರಿಷ್ಕರಿಸಲಾಗಿದೆ ಎಂದು ತಿಳಿಸಿದೆ. ಅಲ್ಲದೆ ಈಗಾಗಲೇ 2022 -23 ನೇ ಸಾಲಿನ ನೀರಿನ ಕಂದಾಯವನ್ನು ಕಟ್ಟಿದವರು, ಸದ್ಯ ಹೆಚ್ಚಾಗಿರುವ ದರದ ಅನುಸಾರ ಬಾಕಿಮೊತ್ತವನ್ನು ಕಟ್ಟಬೇಕು ಎಂದು ತಿಳಿಸಲಾಗಿದೆ. 

ಇದನ್ನು ಸಹ ಓದಿ: ಎಷ್ಟೇ ಆದ್ರೂ ನಮ್ ಹುಡುಗ ಎಂದು ಮನ್ನಿಸಬಹುದಿತ್ತಲ್ಲವೇ ಕನ್ನಡ ಮಾಧ್ಯಮ ಲೋಕ..! ನಾವೇ ಮೊದಲು ಎಂದು ಸುದ್ದಿಯಲ್ಲಿ ಜಿದ್ದಿಗೆ ಬಿದ್ದವರಂತೆ ದ್ವೇಷಿಗಳಾದವರು…ನಟ ದರ್ಶನ್ ವಿಚಾರದಲ್ಲಿ ಒಗ್ಗಟ್ಟಿನ ಜಪ ಮಾಡಿದ್ದರ ಹಿಂದಿನ ಗುಟ್ಟೇನು?

ಪ್ರಕಟಣೆಯಲ್ಲಿ ಏನಿದೆ?

ಶಿವಮೊಗ್ಗ ನಗರವನ್ನು ನಗರಸಭೆಯಿಂದ ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲಾದ ಪ್ರಯುಕ್ತ ನೀರಿನ ದರವನ್ನು ಕರ್ನಾಟಕ ಸರ್ಕಾರದ ಆದೇಶ ಹಾಗೂ ಮಹಾನಗರಪಾಲಿಕೆಯ ನಿರ್ದೇಶನದಂತೆ ಪರಿಷ್ಕರಿಸಲಾಗಿದೆ. ಪಾಲಿಕೆಗಳಿಗೆ ಅನ್ವಯಿಸುವ ದರದಂತೆ ಮೀಟರ್ ರಹಿತ ಸಂಪರ್ಕಗಳಿಗೆ ಕನಿಷ್ಟ ದರ ಪ್ರತಿ ತಿಂಗಳು ಗೃಹಬಳಕೆ ಸಂಪರ್ಕಕ್ಕೆ ರೂ.175, ಗೃಹೇತರ ಸಂಪರ್ಕಕ್ಕೆ ರೂ.350 ಕ್ಕೆ ನಿಗದಿಪಡಿಸಲಾಗಿರುತ್ತದೆ. 2022-23 ನೇ ಸಾಲಿನಿಂದ ನೀರಿನ ಕಂದಾಯವನ್ನು ಪರಿಷ್ಕೃತ ದರದಂತೆ ಪಾವತಿಸಲು ಹಾಗೂ ಈಗಾಗಲೇ 2022-23 ನೇ ಸಾಲಿನ ನೀರಿನ ಕಂದಾಯವನ್ನು ಪಾವತಿಸಿರುವ ಖಾತೆದಾರರಿಗೆ ಪರಿಷ್ಕೃತ ದರದ ವ್ಯತ್ಯಾಸದ ಮೊತ್ತವನ್ನು ಪಾವತಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗದ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ.

ಇದನ್ನ ಸಹ ಓದಿ : ರಿಪ್ಪನ್ ಪೇಟೆ ಹೆದ್ದಾರಿ ಪುರದಲ್ಲಿ ಕಾರು ಪಲ್ಟಿ ನಂತರ ನಡೆದಿದ್ದೇನು?

Malenadu Today

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Share This Article