35 ಗ್ರಾಂ ಬಂಗಾರ ತೆಗೆದುಕೊಂಡು ನಿಶ್ಚಯಿಸಿದ್ದ ಮದುವೆ ಮುರಿದ ಅಕ್ಕ,ತಮ್ಮ! ದಾಖಲಾಯ್ತು ಕೇಸ್

Sister, brother break marriage with 35 grams of gold Case registered Holehonnur Police Station, ಹೊಳೆಹೊನ್ನೂರು ಪೊಲೀಸ್‌ ಸ್ಟೇಷನ್‌ ,

35 ಗ್ರಾಂ ಬಂಗಾರ ತೆಗೆದುಕೊಂಡು ನಿಶ್ಚಯಿಸಿದ್ದ ಮದುವೆ ಮುರಿದ ಅಕ್ಕ,ತಮ್ಮ!  ದಾಖಲಾಯ್ತು ಕೇಸ್
Holehonnur Police Station, ಹೊಳೆಹೊನ್ನೂರು ಪೊಲೀಸ್‌ ಸ್ಟೇಷನ್‌ ,

Shivamogga Apr 19, 2024  ನಿಶ್ಚಿತಾರ್ಥ ಆದ ಬಳಿಕ ವರದಕ್ಷಿಣೆಗಾಗಿ ಮದುವೆ  ಮುರಿದುಕೊಂಡ ವರನನ್ನು ಬಂಧಿಸುವಂತೆ ಹುಡುಗಿಯ ಪೋಷಕರು ಪೊಲೀಸ್‌ ಸ್ಟೇಷನ್‌ ಮೆಟ್ಟಿಲೇರಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ನಲ್ಲಿ ನಡೆದಿದೆ. ವಿಚಾರ ಗೊತ್ತಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲವೆಂದು ಪೋಷಕರು ಆರೋಪಿಸಿದ್ದಾರೆ. 

ಹೊಳೆಹೊನ್ನೂರು ಲಿಮಿಟ್ಸ್‌ನಲ್ಲಿ, ಚನ್ನಗಿರಿ ಮೂಲದ ಯುವಕನೊಬ್ಬನಿಗೆ ಅರಬಿಳಚಿ ಮೂಲದ ಯುವತಿಯನ್ನ ಕೊಡುವುದು ಎಂದು ಮದುವೆ ನಿಶ್ಚಯವಾಗಿತ್ತು. ಈ ವೇಳೆ ನಿಶ್ಚಿತಾರ್ಥದ ದಿನವೇ ಹುಡುಗಿ ಮನೆಯವರು 30 ಗ್ರಾಂ ತೂಕದ ಬಂಗಾರದ ಬ್ರಾಸ್‌ಲೆಟ್ ಹಾಗೂ 5 ಗ್ರಾಂ ತೂಕದ ಉಂಗುರ ನೀಡಿದ್ದರು ಎನ್ನಲಾಗಿದೆ. ಆದರೆ ಮದುವೆ ಹತ್ತಿರವಿದ್ದಾಗ ವರ ಹಾಗೂ ಅವರ ಅಕ್ಕ ಹೆಚ್ಚಿನ ವರದಕ್ಷಿಣೆ ನೀಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಇದೆ ಕಾರಣಕ್ಕೆ ಮದುವೆ ಮುರಿದಿದ್ದಾರೆ ಎಂಬುದು ಪೋಷಕರ ಆರೋಪ. 

ಈ ಸಂಬಂಧ ಹುಡುಗಿ ಮನೆಯವರು ವರನ ಕಡೆಯವರಿಗಾಗಿ ಎಲ್ಲೆಡೆ ಹುಡುಕಾಡಿದ್ದಾರೆ. ಆದರೆ ಪೋನ್‌ ಸಂಪರ್ಕಕ್ಕೂ ಸಿಗದೇ ಹುಡುಗನ ಕಡೆಯವರು ನಾಪತ್ತೆಯಾಗಿದ್ದಾರೆ. ಹೀಗಾಗಿ ಪೋಷಕರು ಪೊಲೀಸರ ಮೊರೆಹೋಗಿದ್ದು ಹುಡುಗನ ಕಡೆಯವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.