ಮಧ್ಯಾಹ್ನ 12 ಗಂಟೆಯಿಂದ 3 ಗಂಟೆವರೆಗೆ ಹೊರಗಡೆ ಕೆಲಸ ಕಡಿಮೆಮಾಡಿ | 6 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ |

Alert from 12 pm to 3 pm Red alert in 6 districts, weather in bengaluru 10 days, weather today at my location, karnataka election 2024, coorg weather, chikmagalur weather, rain forecast in karnataka weather bidar karnataka, yercaud weather, goa weather,

ಮಧ್ಯಾಹ್ನ 12 ಗಂಟೆಯಿಂದ 3 ಗಂಟೆವರೆಗೆ ಹೊರಗಡೆ ಕೆಲಸ ಕಡಿಮೆಮಾಡಿ | 6 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ |
weather in bengaluru 10 days, weather today at my location, karnataka election 2024, coorg weather, chikmagalur weather, rain forecast in karnataka weather bidar karnataka, yercaud weather, goa weather,

SHIVAMOGGA | MALENADUTODAY NEWS | May 2, 2024  

ಶಿವಮೊಗ್ಗವೂ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು ರಣಗುಟ್ಟುತ್ತಿದೆ. ಅದರಲ್ಲಿಯು ಇವತ್ತು ಹಾವೇರಿ, ಧಾರವಾಡ, ಕೊಪ್ಪಳ, ಬಾಗಲಕೋಟೆ, ಬೆಳಗಾವಿ ಗದಗ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ನೀಡಲಾಗಿದೆ. ಅಂದರೆ  ಹೀಟ್‌ ವೇವ್‌, ಬಿಸಿಗಾಳಿ ಬೀಸುವ ಸಾಧ್ಯತೆ ಎಂದ ವಾರ್ನಿಂಗ್‌ ನೀಡಲಾಗಿದೆ. 

 

ಇನ್ನೂ ಶಿವಮೊಗ್ಗದ ಪಕ್ಕದ ಜಿಲ್ಲೆಯಾದ ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ,ಬಳ್ಳಾರಿ, ರಾಯಚೂರು, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ನೀಡಲಾಗಿದೆ. ಇದರರ್ಥ ಬಿಸಿಗಾಳಿಯ ಬಗ್ಗೆ ಅಲರ್ಟ್‌ ಆಗಿರಿ ಎಂದು. 

 

ಇನ್ನೂ ಹವಾಮಾನ ಮನ್ಸೂಚನೆಯ ತಜ್ಞರು ‘ಬಿಸಿ ಗಾಳಿ ಹಾಗೂ ಅತಿಯಾದ ಬಿಸಿಲು ಇರುವ ಕಾರಣ ರೈತರು ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗಿನ ಅವಧಿಯಲ್ಲಿ ಮನೆಯಲ್ಲಿ ಇದ್ದು, ಆರೋಗ್ಯ ಕಾಯ್ದುಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.



ಐಎಂಡಿ ವರದಿ ಪ್ರಕಾರ ನಿನ್ನೆ ಕಲಬುರಗಿಯಲ್ಲಿ ಗರಿಷ್ಠ 43.3 ಸೆಲ್ಸಿಯಸ್‌, ಕೊಪ್ಪಳದಲ್ಲಿ 42 ಹಾಗೂ ಬೀದರ್‌ನಲ್ಲಿ 41.2 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ.