ಜನ ಹೋಗುವ ಹಾದಿಯಲ್ಲೆಲ್ಲಾ ಅಡ್ಡ ಸಿಕ್ಕಿ ಬೆದರಿಸ್ತಿವೆ ಕಾಡುಕೋಣ | ಎಂತಾ ಸಮಸ್ಯೆ ಗೊತ್ತಾ?

in the Hosanagara area complaining about an increase in wild bison attacks 

ಜನ ಹೋಗುವ ಹಾದಿಯಲ್ಲೆಲ್ಲಾ ಅಡ್ಡ ಸಿಕ್ಕಿ ಬೆದರಿಸ್ತಿವೆ ಕಾಡುಕೋಣ  |  ಎಂತಾ ಸಮಸ್ಯೆ ಗೊತ್ತಾ?
Hosanagara , wild bison attack, ಹೊಸನಗರ , ಕಾಡು ಕೋಣ,

SHIVAMOGGA | MALENADUTODAY NEWS | Jul 6, 2024  ಮಲೆನಾಡು 

ಶಿವಮೊಗ್ಗ ಜಿಲ್ಲೆ ಹೊಸನಗರ ಬಾಗದಲ್ಲಿ ಕಾಡುಕೋಣಗಳ ಹಾವಳಿ ಜಾಸ್ತಿಯಾಗಿದೆ ಅಂತಾ ಅಲ್ಲಿಯ ಸ್ಥಳೀಯರು ದೂರು ಹೇಳುತ್ತಿದ್ದಾರೆ. ಆನೆಗಳಿಂದಾದರೂ ತಪ್ಪಿಸಿಕೊಳ್ಳಬಹುದು. ಈ ಕಾಡುಕೋಣಗಳು ಯಾವಾಗ ಎಲ್ಲಿಂದ ಬಂದು ಹಾಯುತ್ತವೆ ಎಂಬುದು ಗೊತ್ತಾಗಲ್ಲ, ಬೈಕ್‌ಗೆ ಡಿಕ್ಕಿ ಹೊಡೆದ ಸೊಂಟ ಮುರಿದೆ ಹೋಗುತ್ತದೆ. ಇವುಗಳಿಂದ ಜೀವಕ್ಕೊಂದು ಗ್ಯಾರಂಟಿ ಇಲ್ಲದಂತಾಗಿದೆ ಎಂದು ಸ್ಥಳೀಯರು ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. 

ಇಲ್ಲಿನ ಯಡೂರು ಹಾಗೂ  ಸುಳಗೋಡು ಭಾಗದಲ್ಲಿ ಇವುಗಳ ಹಾವಳಿ ಹೆಚ್ಚಾಗಿದೆಯಂತೆ, ಮಾಣಿ ಡ್ಯಾಂನಿಂದ ಆಚೆಗಿದ್ದ ಕಾಡುಕೋಣಗಳ ಹಿಂಡು ಈ ಬದಿಗೆ ಬಂದು ಓಡಾಡುತ್ತಿವೆ ಎಂಬುದು ಸ್ಥಳೀಯರ ಆರೋಪ. ಒಂದು ಹಿಂಡು ಕಾಡುಕೋಣ ರೈತರ ಹೊಲಕ್ಕೆ ತೋಟಕ್ಕೆ ನುಗ್ಗಿ ಬೆಳೆ ಹಾಳು ಮಾಡುತ್ತಿವೆ, ಉಪದ್ರ ಸಹಿಸಲಾಗುತ್ತಿಲ್ಲ ಎನ್ನುತ್ತಾರೆ ರೈತರು. ಇನ್ನೂ ಒಂಟಿ ಮನೆಗಳಿಗೆ ಹೋಗುವ ದಾರಿಯಲ್ಲಿ ದುತ್ತೆಂದು ಬಂದು ಎಲ್ಲಿ ದೂಡಿ ಕೆಡೆವುತ್ತವೋ ಎಂಬ ಭಯದಲ್ಲಿ ಇಲ್ಲಿನ ಜನರಿದ್ದಾರೆ. ಅರಣ್ಯ ಇಲಾಖೆ ಇವುಗಳನ್ನ ದೂರ ಬೆರಸುವ ಕೆಲಸ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸ್ತಿದ್ದಾರೆ.  Residents of the Shivamogga district, particularly in the Hosanagara area, are complaining about an increase in wild bison attacks  Farmers in Yadoru and Sulugodu have reported that the bison are destroying their crops and causing significant damage.