ಹಾಸನ | ಎಸ್‌ಪಿಗೆ ದೂರು ಕೊಡಲು ಹೊರಟಿದ್ದ ಪತ್ನಿಯನ್ನ ಚಾಕು ಚುಚ್ಚಿ ಕೊಲೆ ಮಾಡಿದ ಕಾನ್ಸ್‌ಟೇಬಲ್‌

police constable in Hassan, Karnataka, India, has been accused of murdering his wife

ಹಾಸನ | ಎಸ್‌ಪಿಗೆ ದೂರು ಕೊಡಲು ಹೊರಟಿದ್ದ ಪತ್ನಿಯನ್ನ ಚಾಕು ಚುಚ್ಚಿ ಕೊಲೆ ಮಾಡಿದ ಕಾನ್ಸ್‌ಟೇಬಲ್‌
police constable in Hassan, Karnataka, India,

SHIVAMOGGA | MALENADUTODAY NEWS | Jul 2, 2024  ಮಲೆನಾಡು ಟುಡೆ 

ಹಾಸನದಲ್ಲಿ ಪೊಲೀಸ್‌ ಸಿಬ್ಬಂದಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಮನೆಜಗಳ ಹಿನ್ನೆಲೆ ಎಸ್‌ಪಿ ಗೆ ದೂರು ಕೊಡಲು ಬಂದಿದ್ದ ಪತ್ನಿಯನ್ನ ಕಾನ್ಸ್‌ಟೇಬಲ್‌ ಎಸ್‌ಪಿ ಕಚೇರಿ ಸಮೀಪವೇ ಕೊಲೆ ಮಾಡಿದ್ದಾರೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಕೇಸ್‌ ದಾಖಲಿಸಲಾಗಿದೆ. 

ನಿನ್ನೆ ದಿನ ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ,  ಮಮತಾ (37) ಎಂಬವರು ತಮ್ಮ ಪತಿ, ಪೊಲೀಸ್ ಕಾನ್‌ಸ್ಟೆಬಲ್‌ ಲೋಕನಾಥ್  ವಿರುದ್ಧ ದೂರು ನೀಡಲು ಆಗಮಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಕಾನ್ಸ್‌ಟೇಬಲ್‌ ಮಮತಾರಿಗೆ ಚಾಕುವಿನಿಂದ ಇರಿದಿದ್ದಾರೆ. ತಕ್ಷಣ ಅವರನ್ನ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಪ್ರಕರಣ ಸಂಬಂಧ ಲೋಕ್‌ನಾಥ್‌ ರನ್ನ ವಶಕ್ಕೆ ಪಡೆಯಲಾಗಿದೆ. ನಾಲ್ಕೈದು ದಿನಗಳಿಂದ ಇಬ್ಬರ ನಡುವೆ ಜಗಳ ನಡೆದಿದ್ದು ಪತಿ ವಿರುದ್ಧ ಪತ್ನಿ ದೂರು ನೀಡಲು ಹೊರಟಿದ್ದರು ಎನ್ನಲಾಗುತ್ತಿದೆ.  

A police constable in Hassan, Karnataka, India, has been accused of murdering his wife. The victim, Mamata, was on her way to file a complaint against her husband, Lokanath, when he stabbed her near the SP's office.