ಹಿಂಬಾಗಿಲಿನಿಂದ ನುಗ್ಗಿ ಬಂದು ಅಡುಗೆ ಮನೆಯಲ್ಲಿ ಮಲಗಿದ ಕಾಳಿಂಗ | ಮುಂದೇನಾಯ್ತು ನೀವೆ ನೋಡಿ

12-foot-long king cobra entered the kitchen of a house in Shettikoppa, Narasimharajapura

ಹಿಂಬಾಗಿಲಿನಿಂದ ನುಗ್ಗಿ ಬಂದು ಅಡುಗೆ ಮನೆಯಲ್ಲಿ ಮಲಗಿದ ಕಾಳಿಂಗ | ಮುಂದೇನಾಯ್ತು ನೀವೆ ನೋಡಿ
Shettikoppa, Narasimharajapura , king cobra

SHIVAMOGGA | MALENADUTODAY NEWS | May 25, 2024  ಮಲೆನಾಡು ಟುಡೆ 

ನೆರೆ ಜಿಲ್ಲೆ ಚಿಕ್ಕಮಗಳೂರಿನ ಎನ್‌ಆರ್‌ ಪುರ ತಾಲ್ಲೂಕಿನಲ್ಲಿನ ಮನೆಯೊಂದರ ಅಡುಗೆ ಕೋಣೆಗೆ ಕಾಳಿಂಗ ಸರ್ಪವೊಂದು ನುಗ್ಗಿ ಆತಂಕ ಸೃಷ್ಟಿಸಿತ್ತು. ಅದನ್ನ ರಕ್ಷಣೆ ಮಾಡಿ, ಮನೆಯವರ ಭಯ ನಿವಾರಣೆ ಮಾಡಿದ ವಿಡಿಯೋ ಈ ವರದಿಯಲ್ಲಿದೆ 

ನರಸಿಂಹರಾಜಪುರ ತಾಲೂಕಿನ ಶೆಟ್ಟಿಕೊಪ್ಪದಲ್ಲಿ ಶುಕ್ರವಾರ ಸಂಜೆ 6.30ರ ಸಮಯದಲ್ಲಿ 12ಅಡಿ ಉದ್ದದ ಕಾಳಿಂಗ ಸರ್ಪ ಡಿ. ಮಂಜುನಾಥ ಗೌಡ ಅವರ ಮನೆಯ ಅಡುಗೆ ಮನೆ ಸೇರಿಕೊಂಡಿತ್ತು. ಹಾಗಾಗಿ ಕೆಲಕಾಲ ಆತಂಕ ಉಂಟಾಗಿತ್ತು, 

ಮಂಜುನಾಥ ಗೌಡ ಅವರು ಸಂಜೆ ಮನೆಯಲ್ಲಿ ಸ್ನಾನ ಮಾಡಿ ಬಟ್ಟೆ ಹರಡಲು ಹಿಂಬದಿ ಬಾಗಿಲು ತೆಗೆಯುತ್ತಿದ್ದಂತೆ ದಿಢೀರನೇ ಮನೆ ಒಳಗೇ ನುಗ್ಗಿದ ಕಾಳಿಂಗಸರ್ಪ ಅಡುಗೆ ಮನೆ ಸೇರಿಕೊಂಡು ಅಲ್ಲೆ ಮಲಗಿಬಿಟ್ಟಿದೆ. 

ಆನಂತರ ಮನೆಯವರು ಕುದುರೆ ಗುಂಡಿಯ ಉರಗ ಸಂರಕ್ಷಕ ಪಿ.ಜಿ.ಹರೀಂದ್ರ ಅವರಿಗೆ ಕರೆ ಮಾಡಿದ್ದಾರೆ. ಅವರು ಸ್ಥಳಕ್ಕೆ ಆ ಕಾಳಿಂಗ ಸರ್ಪವನ್ನು ಜಾಗರುಕವಾಗಿ ಹಿಡಿದ್ದಿದ್ದಾರೆ. ವಿಶೇಷ ಅಂದರೆ ಮನೆ ತನ್ನದೆಂಬಂತೆ ಒಳಗೆ ಬಂದಿದ್ದ ಕಾಳಿಂಗ ಯಾರಿಗೂ ಅಪಾಯವುಂಟು ಮಾಡಲಿಲ್ಲ. ಮೇಲಾಗಿ ತನ್ನ ಹಿಡಿಯುವಾಗಲು ಅದು ವಿರೋಧ ತೋರಲಿಲ್ಲ. ಸುರಕ್ಷಿತವಾಗಿ ಸೆರೆಯಾದ ಅದನ್ನು ಅರಣ್ಯ ಇಲಾಖೆ ಸಲಹೆಯಂತೆ ಅಭಯಾರಣ್ಯಕ್ಕೆ  ಬಿಡಲಾಗಿದೆ. 

 

12-foot-long king cobra entered the kitchen of a house in Shettikoppa, Narasimharajapura on Friday evening, causing panic among the residents. snake expert P.G. Harendra, who arrived and safely caught the cobra without harming it.