ಆನವಟ್ಟಿ ಗುಡ್ಡದ ರಸ್ತೆ ಕ್ರಾಸ್‌ನಲ್ಲಿ ಐಟಂ ಸಮೇತ ನಿಂತಿದ್ದ ಇಬ್ಬರಿಗೆ ಪೊಲೀಸರ ಶಾಕ್‌ | ಸ್ಪಾಟ್‌ನಲ್ಲಿಯೇ ಅರೆಸ್ಟ್‌

Shivamogga police continue their crackdown on cannabis

ಆನವಟ್ಟಿ ಗುಡ್ಡದ ರಸ್ತೆ ಕ್ರಾಸ್‌ನಲ್ಲಿ ಐಟಂ ಸಮೇತ ನಿಂತಿದ್ದ ಇಬ್ಬರಿಗೆ ಪೊಲೀಸರ ಶಾಕ್‌ | ಸ್ಪಾಟ್‌ನಲ್ಲಿಯೇ ಅರೆಸ್ಟ್‌
Shivamogga police

SHIVAMOGGA | MALENADUTODAY NEWS | Jun 27, 2024  ಮಲೆನಾಡು ಟುಡೆ 

ಶಿವಮೊಗ್ಗ ಪೊಲೀಸರು ಗಾಂಜಾ ಬೇಟೆ ಮುಂದುವರಿಸಿದ್ದಾರೆ. ಇದಕ್ಕೆ ಪೂರಕವಾಗಿ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಪೊಲೀಸರು ನಲವತ್ತು ಸಾವಿರ ಮೌಲ್ಯ ಗಾಂಜಾ ಸೀಜ್‌ ಮಾಡಿದ್ದಾರೆ.  ಆನವಟ್ಟಿ ಟೌನ್ ತಿಮ್ಲಾಪುರ ಗುಡ್ಡದ ರಸ್ತೆ ಕ್ರಾಸ್ ನ ಬಳಿ ಇಬ್ಬರು ಆಸಾಮಿಗಳು ಗಾಂಜಾವನ್ನು  ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಈ ಬೆನ್ನಲ್ಲೆ  ರಾಜು ರೆಡ್ಡಿ ಬೆನ್ನೂರು ಪಿಎಸ್ಐ,  ಆನವಟ್ಟಿ   ಪೊಲೀಸ್ ಠಾಣೆರವರ ನೇತೃತ್ವದ ಸಿಬ್ಬಂಧಿಗಳ ತಂಡ ರೇಡ್‌ ಮಾಡಿದೆ. 

ಸ್ಥಳದಲ್ಲಿ ದಾಳಿ ನಡೆಸಿದ ಪೊಲೀಸರು  ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಾದ 1) ಸುಹೇಲ್ ಮೆಹಬೂಬ್ ಅಲಿ ಮುಲ್ಲನ್ನವರ್, 27 ವರ್ಷ, ಗುಡ್ಡದ ಮಲ್ಲಾಪುರ, ಬ್ಯಾಡಗಿ ತಾಲ್ಲೂಕು ಹಾವೇರಿ ಮತ್ತು 2) ಗೌಸ್ ಮೊಹಿದ್ದೀನ್ ಶಾ, 26 ವರ್ಷ, ತಿಳುವಳ್ಳಿ ಗ್ರಾಮ ಹಾವೇರಿ  ಇವರನ್ನು ದಸ್ತಗಿರಿ ಮಾಡಿದೆ. 

ಅಲ್ಲದೆ ಆರೋಪಿತರಿಂದ  ಅಂದಾಜು ಮೌಲ್ಯ 40,000/-  ರೂಗಳ 980  ಗ್ರಾಂ ತೂಕದ ಒಣ ಗಾಂಜಾವನ್ನು, ಗಾಂಜಾ ಮಾರಾಟ ಮಾಡಿ ಗಳಿಸಿದ  ರೂ 600/- ನಗದು ಹಣವನ್ನು  ಅಮಾನತ್ತು ಪಡಿಸಿಕೊಂಡು, ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 0099/2024  ಕಲಂ 20(b) NDPS ಕಾಯ್ದೆ ಅಡಿ ಕೇಸ್‌ ದಾಖಲಿಸಿದೆ 

Shivamogga police continue their crackdown on cannabis, seizing 980 grams worth 40,000 rupees in Soraba taluk. Two suspects,