16222 ಮೈಸೂರು-ತಾಳಗುಪ್ಪ ಡೈಲಿ ಎಕ್ಸ್‌ಪ್ರೆಸ್ | ರೈಲು ಸಂಚಾರದ ವೇಳಾಪಟ್ಟಿಯಲ್ಲಿ ಬದಲಾವಣೆ! ರೈಲ್ವೆ ಪ್ರಯಾಣಿಕರೇ ವಿವರ ಇಲ್ಲಿದೆ

16222 Mysore-Talaguppa Daily Express | Change in train schedule! Here is the details for railway passengers

16222 ಮೈಸೂರು-ತಾಳಗುಪ್ಪ ಡೈಲಿ ಎಕ್ಸ್‌ಪ್ರೆಸ್ |  ರೈಲು ಸಂಚಾರದ ವೇಳಾಪಟ್ಟಿಯಲ್ಲಿ ಬದಲಾವಣೆ! ರೈಲ್ವೆ ಪ್ರಯಾಣಿಕರೇ ವಿವರ ಇಲ್ಲಿದೆ
Mysore-Talaguppa Daily Expressn train schedule

Shivamogga  Apr 16, 2024  Mysore-Talaguppa Daily Expressn train schedule  ಶಿವಮೊಗ್ಗ ರೈಲ್ವೆ ನಿಲ್ದಾಣದ ವ್ಯಾಪ್ತಿಯನ್ನು ಒಳಗೊಂಡ ನೈರುತ್ಯ ರೈಲ್ವೆ ಇಲಾಖೆ ಪ್ರಮುಖ ರೈಲಿನ ಸಂಚಾರದ ವೇಳಾಪಟ್ಟಿಯನ್ನು ರಿಷೆಡ್ಯೂಲ್‌ ಮಾಡಿದೆ. ಈ ಸಂಬಂಧ ಪ್ರಕಟಣೆಯನ್ನ ಸಹ ಹೊರಡಿಸಿದೆ. ಇನ್ನೂ  rescheduled train ಎಂದರೆ, ಈ ಹಿಂದೆ ನಿಗದಿಪಡಿಸಿದ ಸಮಯದಲ್ಲಿ ಸಂಚರಿಸುವ ಸಮಯ ಬದಲಾವಣೆ ಆಗಿದೆ ಎಂದು ಅರ್ಥ. ಆಯ್ದ ದಿನಗಳಂದ ಈ ರೀತಿಯಲ್ಲಿ ಟ್ರೈನ್‌ ಟೈಮಿಂಗ್ಸ್‌ನಲ್ಲಿ ಬದಲಾವಣೆ ಮಾಡಿ ರೈಲ್ವೆ ಇಲಾಖೆ ಪ್ರಕಟಣೆಯನ್ನು ನೀಡುತ್ತದೆ. 

ಉದಾಹರಣೆಗೆ ಪ್ರಯಾಣಿಕರು ಶಿವಮೊಗ್ಗ ರೈಲ್ವೆ ನಿಲ್ದಾಣ ರಾತ್ರಿ ಕೊನೆ ಟ್ರೈನ್‌ಗೆ ಬೆಂಗಳೂರು ತೆರಳುತ್ತಿರುತ್ತಾರೆ. ಆ ಸಮಯಕ್ಕೆ ತಕ್ಕಂತೆ ಟ್ರೈನ್‌ ನಿಲ್ದಾಣಕ್ಕೆ ಬರುತ್ತದೆ. ಆದರೆ ಕೆಲವೊಮ್ಮೆ  ಕೊನೆಯ ಟ್ರೈನ ಆಗಮನ, ನಿರ್ಗಮನದ ಸಮಯ ಹಾಗೂ ಸಂಚಾರದ ಅವಧಿಯಲ್ಲಿ ವ್ಯತ್ಯಾಸವಾಗುತ್ತದೆ. ಈ ಬಗ್ಗೆ ಮೊದಲೇ ಪ್ರಯಾಣಿಕರಿಗೆ ರೈಲ್ವೆ ತಿಳಿಸುತ್ತದೆ. ಅದನ್ನ ರಿಷೆಡ್ಯೂಲ್‌ ಪಟ್ಟಿಯಲ್ಲಿ ಇಲಾಖೆ ಪ್ರಕಟಣೆ ನೀಡುತ್ತದೆ.  

ಮುಖ್ಯವಾಗಿ ಪ್ರಯಾಣಿಕರಿಗೆ ನಿಗದಿತ ಟ್ರೈನ್‌ ಹೊರಡುವ 5-8 ಗಂಟೆಗೂ ಮೊದಲು ಅದರ ರಿಶೆಡ್ಯೂಲ್‌ ಟೈಮಿಂಗ್ಸ್‌ನ್ನ ರೈಲ್ವೆ ಇಲಾಖೆ ನೀಡುತ್ತದೆ. ಇದೇ ರೀತಿಯಲ್ಲಿ  ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್‌ ರೈಲಿನ ಸಂಚಾರದ ಸಮಯ ಆಯ್ದ ದಿನಾಂಕಗಳಲ್ಲಿ 

ಬದಲಾವಣೆಯಾಗಲಿರುವ ಬಗ್ಗೆ ನೈರುತ್ಯ ರೈಲ್ವೆ ಇಲಾಖೆ  (South Western Railway) ಪ್ರಕಟಣೆ ನೀಡಿದೆ. 

The following trains are rescheduled due to track maintenance work between Arsikere and Bageshapura stations

ಮೈಸೂರು ವಿಭಾಗದ ಅರಸೀಕೆರೆ ಮತ್ತು ಬಾಗೇಶಪುರ ನಿಲ್ದಾಣಗಳ ನಡುವಿನ ಹಳಿ ನಿರ್ವಹಣಾ ಕಾರ್ಯ ನಡೆಯುತ್ತಿದ್ದು, ಈ ಸಂಬಂಧ  ಈ ಕೆಳಗಿನ ರೈಲುಗಳ ವೇಳಾಪಟ್ಟಿಯನ್ನು ಮರುಹೊಂದಿಸಲಾಗಿದೆ ಎಂದು ನೈರುತ್ಯ ರೈಲ್ವೆ ವಿಭಾಗ ತಿಳಿಸಿದೆ. 

16222 ಮೈಸೂರು-ತಾಳಗುಪ್ಪ ಡೈಲಿ ಎಕ್ಸ್‌ಪ್ರೆಸ್

ಏಪ್ರಿಲ್ 15, 17, 20, 22, 24, 27, 29, ಮೇ, 1, 4, 6, 8, 11, 13, 15, 18, 20, 22, 25, 27, 29, ಜೂನ್ 1, 3, 5, 8, 10, 12, 15, 17, 19, 22, 24, 26, 29, ಜುಲೈ 1, 3 ಮತ್ತು 6, 2024 ರಂದು  16222 ಮೈಸೂರು-ತಾಳಗುಪ್ಪ ಡೈಲಿ ಎಕ್ಸ್‌ಪ್ರೆಸ್ ಟ್ರೈನ್ ಹೊರಡುವ ಸಮಯವನ್ನ ಮೈಸೂರಿನಿಂದ 30 ನಿಮಿಷಗಳ ಕಾಲ ರಿಷೆಡ್ಯೂಲ್‌ ಮಾಡಲಾಗಿದೆ. ಹಾಗೇನೆ ಮಾರ್ಗದಲ್ಲಿ 30 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಅಂದರೆ ಈ ದಿನಗಳಂದು ಟ್ರೈನ್‌ ಸಂಚಾರದಲ್ಲಿ 30 ನಿಮಿಷ ವಿಳಂಬವಾಗುವ ಸಾಧ್ಯತೆ ಇದೆ. 

06267 ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್  ಟ್ರೈನ್‌  ಸಂಚಾರದಲ್ಲಿ ಏಪ್ರಿಲ್ 15, 17, 20, 22, 24, 27, 29, ಮೇ, 1, 4, 6, 8, 11, 13, 15, 18, 20, 22, 25, 27, 29, ಜೂನ್ 1, 3, 5, 8, 10, 12, 15, 17, 19, 22, 24, 26, 29, ಜುಲೈ 1, 3 ಮತ್ತು 6, 2024 ರಂದು ಅರಸೀಕೆರೆಯಿಂದ 40 ನಿಮಿಷಕ್ಕೆ ಮರುನಿಗದಿಪಡಿಸಲಾಗಿದೆ