ವಾಹನ ಸವಾರರೇ ಜಾಗ್ರತೆ! ಆಗುಂಬೆ ಘಾಟಿಯಲ್ಲಿ ಸಿಕ್ಕಿಹಾಕಿಕೊಳ್ತಿದೆ ವೆಹಿಕಲ್! ಇಲ್ಲಿದೆ ನೋಡಿ ರಿಪೋರ್ಟ್

Beware motorists! Vehicle stuck at Agumbe Ghat! Check out the report here

ವಾಹನ ಸವಾರರೇ ಜಾಗ್ರತೆ!  ಆಗುಂಬೆ ಘಾಟಿಯಲ್ಲಿ ಸಿಕ್ಕಿಹಾಕಿಕೊಳ್ತಿದೆ ವೆಹಿಕಲ್!  ಇಲ್ಲಿದೆ ನೋಡಿ ರಿಪೋರ್ಟ್

KARNATAKA NEWS/ ONLINE / Malenadu today/ Jul 3, 2023 SHIVAMOGGA NEWS

ಶಿವಮೊಗ್ಗ-ಉಡುಪಿ ಜಿಲ್ಲೆ ವ್ಯಾಪ್ತಿಗೆ ಬರುವ  ಆಗುಂಭೆ ಘಾಟಿಯಲ್ಲಿ ನಿನ್ನೆ ಹಲವು ಸಲ ಟ್ರಾಫಿಕ್ ಜಾಮ್ ಆಗಿತ್ತು. ಘಾಟಿ ತಿರುವಿನಲ್ಲಿ ಲಾರಿಯೊಂದು ಸಿಕ್ಕಿಹಾಕಿಕೊಂಡಿದ್ದರಿಂದ ಕೆಲ ಗಂಟೆಗಳ ಕಾಲ ಕಿಲೋಮೀಟರ್​ ಉದ್ದಕ್ಕೂ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಸನ್ನಿವೇಶ ಎದುರಾಗಿತ್ತು. 

ಒಂದು ಕಡೆ ಘಾಟಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಳೆಯಲ್ಲಿ ವಾಹನಗಳ ಸಂಚಾರ ಕೂಡ ಕಷ್ಟವಾಗುತ್ತಿದೆ.  ಮಳೆ ರಭಸದ ನಡುವೆ ವಾಹನ ಚಲಾಯಿಸುವುದು ಒಂದು ಕಷ್ಟವಾದರೆ, ರಸ್ತೆಯ ಇಳಿಜಾರು,. ಹಿಮ್ಮುಡಿ ತಿರುವು, ಚಾಲಕನ ಅನುಭವವನ್ನು ಪರೀಕ್ಷೆಗೊಡ್ಡುತ್ತಿವೆ. ಚೂರು ಯಾಮಾರಿದರೂ, ಒಂದು ವಾಹನ ಇಡೀ ಘಾಟಿ ಸಂಚಾರವನ್ನೆ ಬಂದ್ ಮಾಡುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ  ಆಗುಂಬೆ ಘಾಟಿಯ 8ನೇ ತಿರುವಿನಲ್ಲಿ  ಲಾರಿ ಒಂದು ಸಿಕ್ಕಿಹಾಕಿಕೊಂಡಿತ್ತು. ಇದರಿಂದಾಗಿ ಉಳಿದ ವಾಹನಗಳು ಮುಂದಕ್ಕೆ ಚಲಿಸಲಾಗದೇ ನಿಂತಲ್ಲಿಯೇ ನಿಂತಿದ್ದವು. 

ಇನ್ನೂ ಲಾರಿಯನ್ನ ಸ್ಥಳದಿಂದ ತೆರವುಗೊಳಿಸಿದ ಹೊರತಾಗಿಯು, ವಾಹನ ಸಂಚಾರ ದಟ್ಟಣೆಯು ಕಡಿಮೆಯಾಗಲು ಬಹಳ ಹೊತ್ತೆ ಬೇಕಾಯ್ತು. ಇದರ ನಡುವೆ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ ಕೆಲಕಾಲ ಮತ್ತೆ ಟ್ರಾಫಿಕ್ ಜಾಮ್ ಆಗಿದೆ. ಇನ್ನೂ ಇದರ ನಡುವೆ ಆ್ಯಂಬುಲೆನ್ಸ್​ಗಳ ಓಡಾಟಕ್ಕೂ ಘಾಟಿಯಲ್ಲಿ ನಿನ್ನೆ ಕಷ್ಟವಾಗಿತ್ತು.  


ಪೊಲೀಸರಿಗೆ ಕಾರ್ಯಾಚರಣೆ ಹೇಗೆ ಮಾಡಬೇಕು ಎಂದು ಹೇಳಿಕೊಟ್ಟ ಮಾಳೂರು ಮಂದಿ! ಕಾರಣವೇನು ಗೊತ್ತಾ?

ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಪೊಲೀಸರಿಗೆ ಕಾರ್ಯಾಚರಣೆ ಹೇಗೆ ನಡೆಸಬೇಕು ಎಂದು ಸ್ಥಳೀಯ ಗ್ರಾಮಸ್ಥರು ಹೇಳಿಕೊಟ್ಟ ಘಟನೆ ಬಗ್ಗೆ ನಿನ್ನೆ ವರದಿಯಾಗಿದೆ. ನಿಷೇಧಿತ ಪ್ರದೇಶದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವ ದೂರುಗಳನ್ನ ಕೊಟ್ಟರೂ ಸುಮ್ಮನೆ ಇದ್ದಿದ್ದರಂತೆ ಮಾಳೂರು ಪೊಲೀಸರು. ಈ ಹಿನ್ನೆಲೆಯಲ್ಲಿ ಖುದ್ಧಾಗಿ ಗ್ರಾಮಸ್ಥರೇ ದಾಳಿ ನಡೆಸಿ ಮರಳು ತೆಗೆಯುತ್ತಿದ್ದ ಟ್ರ್ಯಾಕ್ಟರ್​ ಹಾಗೂ ಜೆಸಿಬಿಯನ್ನ ಹಿಡಿದು, ಆನಂತರ ಸ್ಥಳಕ್ಕೆ ಪೊಲೀಸರನ್ನ ಕರೆಸಿದ್ಧಾರೆ. ನಿನ್ನೆ ಈ ಘಟನೆ ನಡೆದಿದ್ದು ಮಾಳೂರು ಪೊಲೀಸರ ವಿರುದ್ಧ ಸ್ಥಳೀಯರು ಸಾಲು ಸಾಲು ಆರೋಪ ಮಾಡಿದ್ಧಾರೆ. 

ನಡೆದಿದ್ದೇನು? 

ಸಾಮಾನ್ಯವಾಗಿ ಮಳೆಗಾಲ ಆರಂಭವಾಗುತ್ತಲೇ ಮರಳು ಸಾಗಾಟ ಬಂದ್ ಆಗುತ್ತದೆ. ಆದರೆ ಅನಧಿಕೃತವಾಗಿ ತುಂಗಾನದಿಯಲ್ಲಿ ಮರಳನ್ನು ತೆಗೆದು ಸಾಗಿಸಲಾಗುತ್ತಿದೆ. ಈ ದೊಡ್ಡ ವಹಿವಾಟಿನಲ್ಲಿ ಕೆಲ ಪೊಲೀಸರ ವಿರುದ್ಧ ದುಡ್ಡಿನ ವ್ಯವಹಾರ ನಡೆದಿರುವ ಆರೋಪವೂ ಇದೆ. ಇದೇ ಕಾರಣಕ್ಕೆ ಸ್ಥಳೀಯರ ದೂರನ್ನ ಪೊಲೀಸರು ಆಲಿಸ್ತಿಲ್ಲ ಎಂಬುದು ಆರೋಪ. 



ಇನ್ನೂ  ಮಹಿಷಿ ಸಮೀಪ ಮರಳು ತೆಗೆಯುವಂತಿಲ್ಲ. ಇದು ನಿಷೇಧಿತ ಪ್ರದೇಶ, ನ್ಯಾಯಾಲಯದ ಆದೇಶವೂ ಈ ಸಂಬಂಧವಿದೆ. ಹೀಗಿದ್ದರೂ ಇಲ್ಲಿಯ ಸೇತುವೆ ಬಳಿಯಲ್ಲಿ ಭರ್ತಿಯಾಗಿ ಮರಳು ತೆಗೆಯುತ್ತಿರುವುದನ್ನ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಕಡೆಯಿಂದ ಸ್ಪಂದನೆ ಸಿಗದಿದ್ದಾಗ, ಊರಿನವರೆ ಹೋಗಿ ಟ್ರ್ಯಾಕ್ಟರ್ ಹಾಗೂ ಜೆಸಿಬಿಯನ್ನ ನಿಲ್ಲಿಸಿದ್ದಾರೆ. ಅಷ್ಟರಲ್ಲಿ ಅಲ್ಲಿದ್ದವರು ಓಡಿ ಹೋಗಿದ್ಧಾರೆ. ಆನಂತರ  ಸ್ಥಳಕ್ಕೆ ಬಂದ ಪೊಲೀಸರು ವಾಹನಗಳನ್ನ ವಶಕ್ಕೆ ತೆಗೆದುಕೊಂಡು ಹೋಗಿದ್ದಾರೆ. 


ನಡುತೋಪಿನಿಂದ ಮಾಯವಾಗಿದ್ದ ಸಾಗುವಾನಿ ಪತ್ತೆ ಮಾಡಿದ ಅರಣ್ಯ ಇಲಾಖೆ! ಸಿಕ್ಕಿಬಿದ್ದವರು ಯಾರು ಗೊತ್ತಾ?

ಸೊರಬ ತಾಲ್ಲೂಕಿನ  ಸರಕಾರಿ ನಡುತೋಪಿನಲ್ಲಿ ಅಕ್ರಮವಾಗಿ ಸಾಗುವಾನಿ ಮರ ಕಡಿತಲೆ ಮಾಡಿದ ಆರೋಪಿಯನ್ನು ಮಾಲು ಸಮೇತ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಸರಕಾರಿ ಸಾಗುವಾನಿ ನಡುತೋಪಿನಲ್ಲಿ ಅಕ್ರಮವಾಗಿ ಸಾಗುವಾನಿ ಮರಗಳನ್ನು ಕಡಿತಲೆ ಮಾಡಿ ಸಾಗಿಸಿದ ಆರೋಪದ ಮೇಲೆ ಸದಾನಂದ(31) ಎಂಬವನನ್ನು ಇಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಹಾಲಗಳಲೆ ಸ್ಟೇಟ್ ಪಾರೆಸ್ಟ್ ಕಪ್ಪಗಳಲೆ ಗ್ರಾಮದ ಸರ್ವೆ ನಂಬರ್ 16ರ ನಡುತೋಪಿನಲ್ಲಿ ಎರಡು ಸಾಗುವಾನಿ ಮರಗಳನ್ನು ಕಡಿದು ಮಾವಲಿ ಗ್ರಾಮದ ಜಗದೀಶ ಎಂಬುವರ ಮನೆಯ ಹಿಂಭಾಗದ ಕೊಟ್ಟಿಗೆ ಜಾಗದಲ್ಲಿ ದಾಸ್ತಾನು ಮಾಡಲಾಗಿತ್ತು. 

ಈ ಸಂಬಂಧ ವಲಯ ಅರಣ್ಯಾಧಿಕಾರಿ ಜಾವೆದ್ ಬಾಷ ಅಂಗಡಿ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಚರಣೆ ನಡೆಸಿ 5 ಸಾಗುವಾನಿ ತುಂಡುಗಳನ್ನು ಪತ್ತೆ ಹಚ್ಚಿ ಅರಣ್ಯ ಇಲಾಖೆ ಕಚೇರಿಗೆ ಸಾಗಿಸಿದ್ದಾರೆ.


ಸಕ್ರೆಬೈಲ್ ಕ್ರಾಸ್​ ನಲ್ಲಿ ಭೀಕರ ಅಪಘಾತ! ಕ್ಯಾಂಟರ್​ ಮತ್ತು ಕಾರಿನ ನಡುವೆ ಡಿಕ್ಕಿ!



ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ಸಮೀಪ ತೀರ್ಥಹಳ್ಳಿ ರಸ್ತೆಯಲ್ಲಿ ಕಾರು ಹಾಗೂ ಕ್ಯಾಂಟರ್​ ನಡುವೆ ಡಿಕ್ಕಿಯಾಗಿದ್ದು ಘಟನೆಯಲ್ಲಿ ಓರ್ವರು ಗಂಭೀರ ಗಾಯಗೊಂಡಿದ್ದಾರೆ.  

ಶಿವಮೊಗ್ಗದಿಂದ  ತೀರ್ಥಹಳ್ಳಿ ಕಡೆ ಹೋಗುತ್ತಿದ್ದ ಕೆಎ 14 ಪಿ 2982  ನಂಬರ್​ನ ಕಾರಿಗೆ ಸಕ್ರೇಬೈಲಿನ ಬಳಿಯಲ್ಲಿ ತೀರ್ಥಹಳ್ಳಿ ಕಡೆಯಿಂದ ಬರುತ್ತಿದ್ದ ಕೆಎ 11-7360 ಕ್ಯಾಂಟರ್ ಡಿಕ್ಕಿ ಹೊಡೆದಿದೆ.  ಮುಖಾಮುಖಿ ಡಿಕ್ಕ್ಕಿಯಾಗಿದೆ 

.

ಅಪಘಾತ ನಡೆದ ಬೆನ್ನಲ್ಲೆ ಸ್ಥಳದಿಂದ ಕ್ಯಾಂಟರ್ ಚಾಲಕ ಪರಾರಿಯಾಗಿದ್ದಾನೆ. ಕಾರಿನಲ್ಲಿದ್ದ ಆಶಾ( 35) ಎಂಬುವರಿಗೆ ತಲೆಗೆ ಪೆಟ್ಟಾಗಿದ್ದು ಅವರನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಘಟನೆಯಲ್ಲಿ ಕಾರಿನ ಬಲಭಾಗ ನುಜ್ಜುಗುಜ್ಜಾಗಿದೆ.  ತುಂಗಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ. 


ಅಡಿಕೆ ತೋಟಕ್ಕೆ ಹುಲ್ಲು ಕೊಯ್ಯಲು ಹೋಗಿದ್ದ ಮಹಿಳೆಗೆ ಎದುರಾಗಿದ್ದು ಸಾವು!

ಹಿತ್ತಲಿನಲ್ಲಿರುವ ಅಡಿಕೆ ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ಧಾಗ ಹಾವು ಕಚ್ಚಿ ಹಿರಿಯ ವಯಸ್ಸಿನ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹರತಾಳಿ ಸಮೀಪದ ಕೆಕೆ ಹುಣಸವಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ

ಹೇಗಾಯ್ತು ಘಟನೆ

ಗ್ರಾಮದ ನಿವಾಸಿ 72 ವರ್ಷದ ಜಯಮ್ಮ ಶನಿವಾರ ಮಧ್ಯಾಹ್ನ ಹುಲ್ಲು ಕೊಯ್ಯುಲು ತೋಟಕ್ಕೆ ತೆರಳಿದ್ದಾರೆ. ಈ ವೇಳೆ ಅವರಿಗೆ ವಿಷದ ಹಾವು ಕಚ್ಚಿದೆ. ಕೂಡಲೇ ಅವರನ್ನು ಆನಂದಪುರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿದೆ. ಅಷ್ಟರಲ್ಲಿಯೇ ಅವರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಳಿಸಿಕೊಂಡಿದ್ಧಾರೆ.