ಮನೆಗೆ ಬಂದ ಹೆಂಡತಿ ಮೇಲೆ ಕತ್ತಿಯಿಂದ ಹಲ್ಲೆ ! ಸಾಗರದ ಆವಿಗೆಯಲ್ಲಿ ಪತಿಯಿಂದಲೇ ಪತ್ನಿ ಕೊಲೆ
Wife attacked with sword when she came home in Sagara avige husband kills wife
SHIVAMOGGA | Jan 21, 2024 | ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕರೂರು ಹೋಬಳಿಯಲ್ಲಿ ನಿನ್ನೆ ಒಂದು ಧಾರುಣ ಘಟನೆ ನಡೆದಿದೆ. ಘಟನೆಯಲ್ಲಿ ಪತಿಯೇ ತನ್ನ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಇಲ್ಲಿನ ಕುದರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆವಿಗೆ ಗ್ರಾಮದಲ್ಲಿ ಘಟನೆ ನಡೆದಿದೆ. ನೀಲಾವತಿ (29) ಮೃತ ದುರ್ದೈವಿ.
ಗಂಡ ಹೆಂಡತಿ ನಡುವೆ ವೈಮನಸ್ಸು ಇತ್ತು. ಇದೇ ಕಾರಣಕ್ಕೆ ಜಗಳ ನಡೆದು ನಿನ್ನೆ ಬೆಳಗ್ಗೆ ಪತಿ ಲೋಕೇಶ್ ಪತ್ನಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ಕುತ್ತಿಗೆ ಕಡಿದು ನೀಲಾವತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆದಲ್ಲಿಯೇ ಸಾವನ್ನಪ್ಪಿದ್ದಾರೆ.
ಆವಿಗೆ ಗ್ರಾಮದ ನಿವಾಸಿ ಲೋಕೇಶ್ ಹಾಗೂ ನೀಲಾವತಿ ನಡುವೆ ಸಂಸಾರದ ಜಗಳ ನಡೆದಿತ್ತು. ಗಂಡನ ಕಾರಣಕ್ಕೆ ಆಕೆ ತನ್ನ ಮಕ್ಕಳ ಜೊತೆಗೆ ತವರು ಮನೆ ಸೇರಿಕೊಂಡಿದ್ದಳು.ನಿನ್ನೆ ಬಟ್ಟೆಬರೆ ವಾಪಸ್ ತೆಗೆದುಕೊಂಡು ಹೋಗಲು ಪತಿಯ ಮನೆಗೆ ಬಂದಿದ್ದಾಳೆ. ಅಲ್ಲಿ ಲೋಕೆಶ್ ನೊಂದಿಗೆ ಮತ್ತೆ ಜಗಳವಾಗಿದೆ. ಈ ವೇಳೆ ಲೋಕೇಶ್ ಪತ್ನಿಯ ಮೇಲೆ ಕತ್ತಿ ತೆಗೆದುಕೊಂಡು ಹಲ್ಲೆ ಮಾಡಿದ್ದಾನೆ.
ಪರಿಣಾಮ ನೀಲಾವತಿ ಕತ್ತಿಗೆ ಪೆಟ್ಟು ಬಿದ್ದು ನೆಲಕ್ಕೆ ಕುಸಿದಿದ್ದಾಳೆ. ಆಕೆಯ ಚೀರಾಟ ಕೇಳಿದ ಸ್ಥಳಿಯರು ತಕ್ಷಣವೇ ಅವಳನ್ನು ತುಮರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ತುರ್ತು ಲಾಂಚ್ ವ್ಯವಸ್ಥೆ ಮಾಡಿ ಸಾಗರ ಆಸ್ಪತ್ರೆಗೆ ಅವರನ್ನ ರವಾನಿಸಲಾಗಿದೆ. ಆದರೆ ಅಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸ್ತಿದ್ದಾರೆ.