ಶಿವಮೊಗ್ಗ | ಮುಂದುವರಿಯಲಿದೆ ಗಾಳಿ ಮಳೆ | ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ಏನಿದೆ?

Shimoga | Wind and rain will continue What's in the Meteorological Department forecast?shivamogga rain news today

ಶಿವಮೊಗ್ಗ | ಮುಂದುವರಿಯಲಿದೆ ಗಾಳಿ ಮಳೆ | ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ಏನಿದೆ?
shivamogga rain news today

SHIVAMOGGA | MALENADUTODAY NEWS |  Apr 20, 2024  

ಶಿವಮೊಗ್ಗದಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಳಗ್ಗೆಯಿಂದಲೂ ಶಿವಮೊಗ್ಗದ ವಿವಿದೆಡೆ ಮಳೆಯಾಗುತ್ತಿದ್ದು ಮಧ್ಯಾಹ್ನದ ನಂತರವೂ ಹಲೆವಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. 

ಇಲಾಖೆಯ ಮಾಹಿತಿ ಪ್ರಕಾರ ಇವತ್ತು ನಾಳೆ ಮತ್ತು ನಾಡಿದ್ದು ಸಹ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗವಷ್ಟೆ ಅಲ್ಲದೆ ಬಾಗಲಕೋಟೆ, ದಕ್ಷಿಣ ಕನ್ನಡ, ಧಾರವಾಡ, ಗದಗ, ರಾಯಚೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಎಂದು ಮನ್ಸೂಚನೆ ನೀಡಲಾಗಿದೆ