ಶಿವಮೊಗ್ಗ |ಮತದಾನ ಮುಗಿದ ಬೆನ್ನಲ್ಲೆ ಮಳೆಯ ಮನ್ಸೂಚನೆ ಕೊಟ್ಟ ಹವಾಮಾನ ಇಲಾಖೆ |

Shimoga | Meteorological Department Bangalore has given a forecast of rain after the end of voting Weather Report, Shimoga Rain, Shimoga Weather News, Shimoga Today News

ಶಿವಮೊಗ್ಗ |ಮತದಾನ ಮುಗಿದ ಬೆನ್ನಲ್ಲೆ ಮಳೆಯ ಮನ್ಸೂಚನೆ ಕೊಟ್ಟ ಹವಾಮಾನ ಇಲಾಖೆ |
Meteorological Department Bangalore, forecast of rain,eather Report, Shimoga Rain, Shimoga Weather News, Shimoga Today News

SHIVAMOGGA | MALENADUTODAY NEWS | May 8, 2024  

ಬಿಸಿಲ ಅಬ್ಬರ ತಣಿಸಲು ಇವತ್ತು ಮಳೆ ಬರುವ ಹಾಗಿದೆ ಅಂತಾ ಹವಾಮಾನ ಇಲಾಖೆ ಹೇಳಿದೆ. ಶಿವಮೊಗ್ಗವೂ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ  ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೋಲಾರ, ರಾಮನಗರ, ಜಿಲ್ಲೆಗಳಲ್ಲಿಯೂ ಬಿರುಗಾಳಿ ಬೀಸಲಿದ್ದು, ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ. 

 

ಮುಂದಿನ 48 ಗಂಟೆಗಳ ತಾಪಮಾನದ ವಿವರ ನೀಡಿರುವ ಹವಾಮಾನ ಇಲಾಖೆ ಶಿವಮೊಗ್ಗದಲ್ಲಿ ಇವತ್ತು ಗರಿಷ್ಟ 38 ಡಿಗ್ರಿ ಉಷ್ಣಾಂಶ ದಾಖಲಾಗಲಿದೆ ಎಂದು ತಿಳಿಸಿದೆ. ಅಲ್ಲದೆ ಮಳೆಯ ಮನ್ಸೂಚನೆಯನ್ನ ಸಹ ನೀಡಿದೆ. ಇವತ್ತು ಸಂಜೆ ಹೊತ್ತಿಗೆ ಮಳೆಯಾಗುವ ಲಕ್ಷಣವಿದೆ ಎಂದು ಹೇಳಿದೆ.