BREAKING NEWS | ಆಗುಂಬೆ ಸುರಂಗ ಮಾರ್ಗ | ದೊಡ್ಡ ಸುದ್ದಿ ಕೊಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

BREAKING NEWS | Agumbe Tunnel | National Highway Authority gave big news. Tunnel route, DPR preparation notification, Shimoga-Udupi, Someshwar, Hebri, Megravalli,

BREAKING NEWS | ಆಗುಂಬೆ ಸುರಂಗ ಮಾರ್ಗ | ದೊಡ್ಡ ಸುದ್ದಿ ಕೊಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
Agumbe Tunnel , National Highway Authority , big news, Tunnel route, DPR preparation notification, Shimoga-Udupi, Someshwar, Hebri, Megravalli,

SHIVAMOGGA | MALENADUTODAY NEWS | May 8, 2024  

ಶಿವಮೊಗ್ಗ ಲೋಕಸಭಾ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೆ ಮತ್ತೊಂದು ಸುದ್ದಿ ಹೊರಕ್ಕೆ ಬಂದಿದೆ. ಆಗುಂಬೆಯಲ್ಲಿ ಸುರಂಗ ಮಾರ್ಗ ನಿರ್ಮಾಣದ ಸಂಬಂಧ ಈ ಹಿಂದೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶಿವಮೊಗ್ಗಕ್ಕೆ ಬಂದ ಸಂದರ್ಭದಲ್ಲಿ ಮಾತನಾಡಿದ್ದರು. ಇದೀಗ ಈ ಸಂಬಂಧ  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (National Highways Authority) ಸುರಂಗ ಮಾರ್ಗ ಯೋಜನೆಯ ವ್ಯಾಪ್ತಿ, ಅದರ ಪ್ರಾಮುಖ್ಯತೆ  ಮತ್ತು ಸಾಧಕ ಬಾಧಕಗಳು ಹಾಗೂ ತಗಲುವ ಅಂದಾಜು ವೆಚ್ಚ ಮತ್ತು ಅನುಷ್ಠಾನದ ಅವಧಿ ಮತ್ತು ಪರ್ಯಾಯ ಮಾರ್ಗಗಳನ್ನು ವಿವರಿಸಲು ವಿಸ್ತೃತ ಯೋಜನೆ ವರದಿ ತಯಾರಿಸಲು ಸೂಚಿಸಿದೆ. ಈ ಸಂಬಂಧ (ಡಿಪಿಆರ್) ತಯಾರಿಸಲು 2 ಕೋಟಿ ರೂ. ನೀಡಿದೆ. 

ಘಟ್ಟದ ಮೇಲೆ , ಘಟ್ಟದ ಕೆಳಗಿನ ಪ್ರದೇಶಗಳನ್ನು ಸಂಪರ್ಕಿಸುವ ಕೊಂಡಿಯಾಗಿರುವ ಆಗುಂಬೆಯಲ್ಲಿ ಹಿಂದೆಲ್ಲಾ ಜನರು ನಡೆದುಕೊಂಡೆ ಓಡಾಡುತ್ತಿದ್ದರು. ಆನಂತರ ಬಂಡಿ ದಾರಿಗಳಾದವು, ತದನಂತರ ವಾಹನಗಳು ಓಡಾಡಿದವು. ಇದೀಗ ರಾಷ್ಟ್ರೀಯ ಹೆದ್ದಾರಿ 169ಎ (ಮಲ್ಪೆ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ (169ಎ)  ಚತುಷ್ಪಥ ಯೋಜನೆಯಡಿಯಲ್ಲಿ ಬರುತ್ತದೆ. ಇದರ ನಡುವೆ ಆಗುಂಭೆಯಲ್ಲಿ ದ್ವಿಪಥ ರಸ್ತೆ ನಿರ್ಮಾಣದ ಬದಲಾಗಿ, ಸುರಂಗ ನಿರ್ಮಾಣದ ಪ್ರಸ್ತಾಪ ಕೇಳಿಬಂದಿತ್ತು. ಇದೀಗ ಈ ಪ್ರಾಜೆಕ್ಟ್‌ ಮತ್ತೊಂದು ಹೆಜ್ಜೆಗೆ ಬಂದು ತಲುಪಿದೆ.  

ಕರಾವಳಿ ಮತ್ತು ಮಲೆನಾಡು ಸಂಪರ್ಕಿಸುವ ಆಗುಂಬೆಯಲ್ಲಿ ರಸ್ತೆ ಸಂಚಾರ ಮಳೆಗಾಲದಲ್ಲಿ ಕಷ್ಟಕಷ್ಟ. ರಸ್ತೆಗಳು ಸುಸ್ಥಿತಿಯಲ್ಲಿದ್ದರೂ ಇಲ್ಲಿ ಲಾಂಗ್‌ ಚಸ್ಸಿ ವಾಹನಗಳ ಸಂಚಾರ ಕಷ್ಟಸಾಧ್ಯ. ಇನ್ನೊಂದೆಡೆ ಆಗುಂಬೆಯ ಅಡಿಯಲ್ಲಿ ಕರಾವಳಿಗೆ ಸುರಂಗ ಕಲ್ಪಿಸಿದರೆ, ನೇರ ಹಾಗೂ ಹೆವಿ ಲೋಡ್‌ ವಾಹನಗಳ ಸಂಚಾರ ಶಿವಮೊಗ್ಗ ಮೂಲಕವಾಗಿ ಸಾಗುವ ಅವಕಾಶ ಇದೆ. ಇದು ವಾಣಿಜ್ಯ ವಹಿವಾಟಿಗೆ ಸಹಕಾರಿಯಾಗಲಿದೆ ಎಂಬ ಪರಿಕಲ್ಪನೆ ಇದೆ. ಶಿರಾಡಿ ಘಾಟ್‌ನಲ್ಲಿ ಸುರಂಗ ನಿರ್ಮಿಸುವ ಯೋಜನೆ ಪ್ರಸ್ತಾಪವಾಗಿತ್ತು. ಆನಂತರ ಅಲ್ಲಿ ಸುರಂಗಕ್ಕಿಂತಲೂ ರಸ್ತೆಯನ್ನು ಸುಸ್ಥಿತಿಗೊಳಿಸುವುದು ಉತ್ತಮ ಎಂಬ ರಿಪೋರ್ಟ್‌ ಬಂದಿತ್ತು. 

ತದನಂತರ ಕೇಳಿಬಂದಿದ್ದು ಆಗುಂಬೆ ಸುರಂಗ ಮಾರ್ಗ, ಆಗುಂಬೆ ಘಾಟಿ ಇಳಿದ ತಕ್ಷಣ ಸಿಗುವ  ಹೆಬ್ರಿ ತಾಲ್ಲೂಕಿನ ಸೋಮೇಶ್ವರದಿಂದ ಮೇಲಕ್ಕೆ ಬಂದು ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿಯವರೆಗೆ ಸುರಂಗ ಕೊರೆಯುವುದು ಸದ್ಯ ಇರುವ ಕಲ್ಪನೆಯ ಮಾರ್ಗವಾಗಿದೆ. ಸುಮಾರು 12 ಕಿಲೋಮೀಟರ್‌ಗಳಷ್ಟು ಸುರಂಗ ಮಾರ್ಗ ನಿರ್ಮಾಣ ಮಾಡಲು ಯೋಜನಾ ವೆಚ್ಚವು 3,000 ಕೋಟಿಯಿಂದ 3,500 ಕೋಟಿ ರೂಪಾಯಿಗಳು ಬೇಕಾಗಬಹುದು ಎಂಬ ಅಂದಾಜಿದೆ. 

ಇದೀಗ ಈ ಸಂಬಂಧ ಡಿಪಿಆರ್‌ ರೆಡಿಮಾಡಲು 2 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಇನ್ನೂ ಆಗುಂಬೆ ಸುರಂಗ ಮಾರ್ಗ ಪರಿಸರಕ್ಕೆ ದಕ್ಕೆಯಾಗುವ ಅಪಾಯವನ್ನ ಹಲವರು ವಿವರಿಸುತ್ತಿದ್ದಾರೆ. ಅಭಿವೃದ್ದಿ ದೃಷ್ಟಿ ಒಂದು ಕಡೆಯಾದರೆ, ಪ್ರತಿಕೂಲ ಪರಿಣಾಮವನ್ನು ಕಣ್ಮುಂದೆ ತೋರುತ್ತಿರುವ ಪರಿಸರ ನಾಶದ ವಿಚಾರವೂ ಸಹ ಗಂಭೀರವಾಗಿದೆ. 

Agumbe Tunnel , National Highway Authority , big news, Tunnel route, DPR preparation notification, Shimoga-Udupi, Someshwar, Hebri, Megravalli,