ಮಲ್ಲನ ಲವ್ ಸ್ಟೋರಿ ಮತ್ತು ಪಾತಾಳಿ ರಿವೆಂಜ್​! ವಿದ್ಯಾನಗರ, ಗಾಂಧಿಬಜಾರ್, ಚಿಕ್ಕಲ್​! ನಿನ್ನೆಯಿಡಿ ನಡೆದಿದ್ದೇನು?

Malenadu Today report about the incident that took place at Chikal, near Guddekal temple in Shivamogga..Shivamogga News, Malnad News,

ಮಲ್ಲನ ಲವ್ ಸ್ಟೋರಿ ಮತ್ತು ಪಾತಾಳಿ ರಿವೆಂಜ್​! ವಿದ್ಯಾನಗರ, ಗಾಂಧಿಬಜಾರ್, ಚಿಕ್ಕಲ್​!  ನಿನ್ನೆಯಿಡಿ ನಡೆದಿದ್ದೇನು?

KARNATAKA NEWS/ ONLINE / Malenadu today/ Nov 15, 2023 SHIVAMOGGA NEWS

Shivamogga | Malnenadutoday.com | ಬಲವತಂದ ಪ್ರೀತಿಯ ಸೆಲೆಯಲ್ಲಿ ಬಿದ್ದು ಬದುಕು ಕತ್ತಲು ಮಾಡಿಕೊಂಡ ಯುವತಿಯ ಸಹೋದರರೇ ರೊಚ್ಚಿಗೆದ್ದು, ಪಾಗಲ್ ಪ್ರೇಮಿಯ ನೆತ್ತರು ಹರಿಸಿ ಬಿಟ್ಟರೆ...ಧರ್ಮರಾಯನ ಕೇರಿಯ ಮಲ್ಲನನ್ನು ಇನ್ನಿಲ್ಲದಂತೆ ಮಾಡಿತೇ ವಿಧಿಯ ಅಟ್ಟಹಾಸ

ಶಿವಮೊಗ್ಗದಲ್ಲಿ ಈ ಬಾರಿ ಮತ್ತೆ ನೆತ್ತರು ಹರಿದಿದೆ. ಆದರೆ ಅದು ರೌಡಿಗಳ ದ್ವೇಷಕ್ಕಾಗಿಯಾಗಲಿ  ಕೋಮಿನ ಹಗೆಗಾಗಲಿ ನಡೆದ ಕೊಲೆಯಲ್ಲ. ಬದಲಿಗೆ ಪ್ರೀತಿ ಎಂಬ ವಿಚಾರದಲ್ಲಿ ಸಿಲುಕಿಕೊಂಡು ಪ್ರೇಮಿಯ ಬ್ಲಾಕ್ ಮೇಲ್ ಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಸಹೋದರಿಗಾಗಿ ತಮ್ಮಂದಿರೇ ಕೊಲೆ ಮಾಡಿ ಪ್ರತಿಕಾರ ತೀರಿಸಿಕೊಂಡಿದ್ದಾರೆ. 

READ :ಗಾಂಧಿ ಬಜಾರ್​ ಮಲ್ಲ ಚಿಕ್ಕಲ್​ನಲ್ಲಿ ಫಿನಿಶ್! ಲವ್​ & ರಿವೆಂಜ್​ ಮತ್ತು ಪಾತಾಳಿ ಗ್ಯಾಂಗ್!? ಏನಿದು!?

ಹೌದು 14-11-23 ರಂದು ಶಿವಮೊಗ್ಗ ಹೊಳೆಹೊನ್ನೂರು ರಸ್ತೆಯ ಚಿಕ್ಕಲ್ ಬಳಿ ಮಲ್ಲೇಶ್ ಅಲಿಯಾಸ್ ಮಲ್ಲ ಎಂಬ ಯುವಕನ ಬರ್ಬರ ಕೊಲೆಯಾಗಿದೆ. ಬೈಕ್ ನಲ್ಲಿ ಬಂದ ಏಳು ಮಂದಿು ದುಷ್ಕರ್ಮಿಗಳ ತಂಡ ಮಲ್ಲೇಶ್ ನ ಬೈಕ್  ಬೀಳಿಸಿ ಮಾರಕಾಸ್ತ್ರಗಳಿಂದ ಮನಸೋಯಿಚ್ಚೆ ಹಲ್ಲೆ ನಡೆಸಿ ಕೊಲೆಗೈದಿದೆ. ಮಚ್ಚಿನೇಚಿಗೆ ಮಲ್ಲಿ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ. ಮುಖ ಹಾಕು ಹೊಟ್ಟೆಯ ಭಾಗ ಗುರುತಿಸದಾಗಷ್ಟು ಹಲ್ಲೆಗೊಳಗಾಗಿದೆ. 

ಇನ್ನೂ ವಿಷಯ ತಿಳಿಯುತ್ತಲೇ ಎಸ್​ಪಿ ಮಿಥುನ್ ಕುಮಾರ್​ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅವರ ಭೇಟಿಯ  ನಂತರ ಶವವನ್ನು ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಯಿತು. ಅಸಲಿಗೆ ಘಟನೆಗೆ ಕಾರಣವೇನೆಂದು ಮಲೆನಾಡು ಟುಡೆ, ತನಿಖಾ ವರದಿಗಾಗಿ ಫೀಲ್ಡ್ ಗಳಿಯುತ್ತಿದ್ದಂತೆ ಸಾಕಷ್ಟು ಸತ್ಯ ಸಂಗತಿಗಳು ಹಾದಿಬೀದಿಯಲ್ಲಿಯೇ ಬಟಾಬಯಲಾಗಿತ್ತು.

READ :ನಾಲ್ವರನ್ನ ಸಾಯಿಸಿ ಬೆಳಗಾವಿಯಲ್ಲಿ ಅಡಗಿದ್ದ ಆರೋಪಿ! ಉಡುಪಿ ಕೇಸ್​ನಲ್ಲಿ ಕಂಡು ಬಂದಿದ್ದೇನು?

ಮಲ್ಲಿ ಅಥವಾ ಮಲ್ಲ ಜೈಲಿನಿಂದ ರಿಲೀಸ್ ಆದ್ರೆ ನಾವೇ ಎತ್ತೇ ಎತ್ತುತ್ತೇವೆ ಎಂದು ಕಾರ್ತಿಕ್ ಶ್ರೇಯಸ್ ಸಹೋದರರು ಎಲ್ಲೆಡೆ ಹೇಳಿಕೊಂಡು ಓಡಾಡುತ್ತಿದ್ದರು ಎಂಬ ಮಾಹಿತಿ ಗಾಂಧಿ ಬಜಾರ್, ವಿದ್ಯಾನಗರದ ಸ್ಮೇಹಿತರ ಬಳಗದಿಂದಲೇ ಹೊರಬಿದ್ದಿದೆ. ನನಗೆ ಮಚ್ಚುಗಳು ಸಿದ್ದವಾಗಿದೆ. ಎಂದು ಸ್ನೇಹಿತರ ಬಳಿ ಹೇಳಿದ್ದ ಮಲ್ಲ  ಹೌದು ಮಲ್ಲನಿಗೆ ತಾನು ಕೊಲೆಯಾಗುವ ಮಾಹಿತಿ ಮೊದಲೇ ಗೊತ್ತಿತ್ತು. ನೆನ್ನೆ ಆತ ಚಿಕ್ಕಲ್ ಬಳಿ ಕೊಲೆಯಾಗುವ ಮುನ್ನ ವಿದ್ಯಾ ನಗರದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿದೆ. 

ನನ್ನ ಟಿಕೆಟ್​ಗೆ ಫೀಲ್ಡ್​ ರೆಡಿಯಾಗಿದೆಯಂತೆ

ನೆನ್ನೆ ವಿದ್ಯಾನಗರದಲ್ಲಿ ಸ್ನೇಹಿತರೊಂದಿಗೆ ಟೀ ಕುಡಿದ ಮಲ್ಲ..ನನಗೆ ಮಚ್ಚುಗಳು ಸಿದ್ದವಾಗಿದೆಯಂತೆ ಕಂಡ್ರೋ..ಸದ್ಯದಲ್ಲಿಯೇ ನನ್ನನ್ನು ಎತ್ತಿ ಬಿಡ್ತಾರೆ ಅಂತಾ ಸ್ನೇಹಿತರಿಗೆ ಹೇಳಿ, ಮುಗುಳು ನಗೆ ಬೀರಿದ್ದನಂತೆ.  ನಂತರ ಬೈಕ್ ಹತ್ತಿ ಹೊಳೆಬೆನವಳ್ಳಿಗೆ ಹೊರಟಿದ್ದ ಮಲ್ಲನನ್ನು ಫಾಲೋ ಮಾಡಿದ್ದ ಆರೋಪಿಗಳ ತಂಡ, ಚಿಕ್ಕಲ್ ಬಳಿ ಮಚ್ಚು ಲಾಂಗುಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದೆ. ಹಾಗಾದ್ರೆ ಮಲ್ಲನನ್ನು ಕೊಲ್ತಿವಿ ಅಂದವರು ಯಾರು..ಮುಂದೆ ಓದಿ

ಗಾಂಧಿ ಬಜಾರ್ ನ ಧರ್ಮರಾಯನ ಕೇರಿಯಲ್ಲಿರುವ ಮಲ್ಲೇಶ್ ಅಲಿಯಾಸ್ ಗಾಂಧಿ ಬಜಾರ್ ಮಲ್ಲಿ ಎಂದೇ ಹೆಸರಾಗಿದ್ದ. ತನ್ನ ಎದುರು ಮನೆಯ ಹುಡುಗಿಯನ್ನೇ ಆತ ಪ್ರೀತಿಸುತ್ತಿದ್ದ..ಇಬ್ಬರಲ್ಲೂ ಪ್ರೀತಿಯಿತ್ತು ಎಂದು ಕೆಲವರು ಹೇಳಿದರೆ..ಮಲ್ಲ ಒನ್ ಸೈಡ್ ಲವ್ ಮಾಡ್ತಿದ್ದ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಮಲ್ಲ ಹಾಗು ಎದುರು ಮನೆ ಮೀನಾ( ಹೆಸರು ಬದಲಿಸಿದೆ) ಗೂ ಪ್ರೀತಿಯಿತ್ತೋ ಇಲ್ಲವೋ ಗೊತ್ತಿಲ್ಲ...ಆದ್ರೆ ಮೀನಾಗೆ ಅದೇ ಕೇರಿಯ ಹುಡುಗನೊಂದಿಗೆ ವಿವಾಹ ನಿಶ್ಚಿತಾರ್ಥ ಫಿಕ್ಸ್ ಆಗಿತ್ತಂತೆ. 

READ : ಅಪ್ಪನನ್ನ ಕೂರಿಸಿಕೊಂಡು ಬೈಕ್​ನಲ್ಲಿ ಹೋಗುತ್ತಿದ್ದ ಮಗನಿಗೆ ಲಾರಿ ಡಿಕ್ಕಿ! ದುರಂತ ಘಟನೆ

ಆಗ ಕೆರಳಿದ, ಮಲ್ಲಿ ನೀನು ಬೇರೆಡೆ ಎಲ್ಲಿ ಬೇಕಾದ್ರೂ ಮದುವೆಯಾಗು..ಆದ್ರೆ ಇದೇ ಕೇರಿಯ ಹುಡುಗನೊಂದಿಗೆ ಮಾತ್ರ ವಿವಾಹ ಮಾಡಿಕೊಳ್ಳಬೇಡ ಹಾಗೆನಾದ್ರೂ ಮದುವೆಯಾದ್ರೆ..ನಿನ್ನ ನನ್ನ ವಿಚಾರದ  ಮಾಹಿತಿಯನ್ನು ವೈರಲ್ ಮಾಡ್ತಿನಿ ಅಂತಾ ಬೆದರಿಕೆ ಹಾಕಿದ್ನಂತೆ.. ಈ ವಿಚಾರದಲ್ಲಿ ಎರಡು ಕುಟುಂಬಗಳು ಕೋಟೆ ಪೊಲೀಸ್ ಠಾಣೆಯ (kote police station shivamogga ) ಮೆಟ್ಟಲೇರಿದ್ದು, ರಾಜಿ ಸಂಧಾನದಲ್ಲಿ ಇತ್ಯರ್ಥವಾಗಿತ್ತು. ಆದರೆ ಮಲ್ಲಿ ಯುವತಿಯನ್ನು ಕಾಡುವುದನ್ನು ನಿಲ್ಲಿಸಿರಲಿಲ್ಲ. ಇದರಿಂದ ಮನನೊಂದ ಮೀನಾ..ನನ್ನ ಸಾವಿಗೆ ಮಲ್ಲಿ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಪ್ರಕರಣದಲ್ಲಿ ಮಲ್ಲಿ ಜೈಲು ಸೇರಿದ್ದ.. 

ಸಹೋದರಿಯ ಸಾವಿಗೆ ಕಾರಣನಾದವನ್ನು ಬಿಡಲ್ಲ 

ಸಹೋದರಿಯ  ಕಾರಣನಾದ ಮಲ್ಲಿಯನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಮಲ್ಲಿಯನ್ನು ಕೊಂದೇ ತೀರ್ತೀವಿ ಎಂದು ಯುವತಿಯ ಸಹೋದರರಾದ ಕಾರ್ತಿಕ್ ಮತ್ತು ಶ್ರೇಯಸ್ ಶಪಥ ಮಾಡಿದ್ರು ಎಂದು ಗಾಂಧಿ ಬಜಾರ್ ನ ಗಲ್ಲಿ ಹುಡುಗ್ರು ಹೇಳ್ತಾರೆ. ಎರಡು ವರ್ಷ ಜೈಲುವಾಸ ಅನುಭವಿಸಿದ್ದ ಮಲ್ಲಿ  ಇತ್ತಿಚೆಗೆ ರಿಲೀಸ್ ಆಗಿದ್ದ. ಜೈಲಿನಲ್ಲಿದ್ದಾಗಲೇ ತನ್ನನ್ನು ಮುಗಿಸಲು ಸ್ಕೆಚ್ ಹಾಕಿರುವ ಮಾಹಿತಿ ಮಲ್ಲನ ಮೂಗಿಗೆ ಬಡಿದಿತ್ತು. ಅದರಂತೆ ಆತ ಹೊರಬಂದಾಗ ಎಚ್ಚರಿಕೆಯಿಂದಲೇ ಓಡಾಡುತ್ತಿದ್ದ. ಆದ್ರೆ ತಂಗಿ ಕಳೆದುಕೊಂಡ ಕಾರ್ತಿಕ್ ಮತ್ತು ಶ್ರೇಯಸ್ ಮಲ್ಲಿನ ಮುಗಿಸಲು ಹಗಲು ರಾತ್ರಿ ಹೊಂಚು ಹಾಕಿ ಕಾಯುತ್ತಿದ್ದರು.ಅದಕ್ಕಾಗಿ ಟೀಂ ಅನ್ನು ಕೂಡ ರೆಡಿ ಮಾಡಿಕೊಂಡಿದ್ರು.

ವಿದ್ಯಾ ನಗರದಲ್ಲಿಯೇ ಎತ್ತಲು ರೆಡಿಯಾಗಿತ್ತು ಸ್ಕೆಚ್ 

ಹಾಗೆ ನೋಡಿದ್ರೆ ಮಲ್ಲಿಯನ್ನು ಚಿಕ್ಕಲ್ ಗಿಂತ ಮುಂಚಿತವಾಗಿ ವಿದ್ಯಾ ನಗರದಲ್ಲಿಯೇ ಮುಗಿಸಲು ಕಾರ್ತಿಕ್ ಮತ್ತು ಶ್ರೆಯಸ್ ಸಹೋದರು ಸ್ಕೆಚ್ ಹಾಕಿದ್ರು, ಅದರಂತೆ ಅಂದು ಬೆಳಗಿನಿಂದಲೇ ಮಲ್ಲಿಯ ವೇರ್ ಎಬೋಟ್ಸ್ ಗಳ ಬಗ್ಗೆ ವಾಚ್ ಅಂಡ್ ಗಾರ್ಡ್ ಮಾಡಿದ್ದಾರೆ. ಮತ್ತೂರು ರೋಡ್ ಮುಖಾಂತರ ವಿದ್ಯಾ ನಗರಕ್ಕೆ ಬಂದಿದ್ದ ಮಲ್ಲಿ ನೆನ್ನೆ ಸ್ನೇಹಿತರೊಂದಿಗೆ ಚಹಾ ಕುಡಿದಿದ್ದಾನೆ.. 

ಈ ಹಿಂದೆ ವಿದ್ಯಾನಗರದಲ್ಲಿ ಮಲ್ಲಿ ಮಟನ್ ಸ್ಟಾಲ್ ಅಂಗಡಿ ಇಟ್ಟುಕೊಂಡಿದ್ದ. ಹೀಗಾಗಿ  ವಿದ್ಯಾನಗರದಲ್ಲಿ ಮಲ್ಲಿಗೆ ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿದ್ರು. ನನ್ನನ್ನು ಮುಗಿಸಲು ಮಚ್ಚುಗಳು ರೆಡಿಯಾಗಿದೆಯಂತೆ ಕಂಡ್ರೋ ಎಂದು ತಮಾಷೆ ಮಾಡಿದ್ದಾನೆ. ಸ್ನೇಹಿತರೊಂದಿಗೆ ಇದ್ದ ಮಲ್ಲಿಯನ್ನು ಕಾರ್ತಿಕ್ ತಂಡ ವಾಚ್ ಮಾಡಿದೆ. ಆದ್ರೆ ವಿದ್ಯಾ ನಗರದಲ್ಲಿ ಸ್ನೇಹಿತರೊಂದಿಗೆ ಇದ್ದ ಮಲ್ಲಿಯನ್ನು ಹೊಡೆಯುವುದಕ್ಕೆ ಕಾರ್ತಿಕ್ ತಂಡಕ್ಕೆ ಆಗೋದಿಲ್ಲ.

READ :ನಿಮಗೂ ಶಾಕ್​ ಆಗಬಹುದು! ನೀವು 90 ಸಾವಿರ ಕಳೆದುಕೊಳ್ಳಬಹುದು! ಹೇಗೆ ಗೊತ್ತಾ?



ಗೆಳೆಯನೊಂದಿಗೆ ಮತ್ತೆ ಬೈಕ್ ಏರಿದ ಮಲ್ಲಿ ಹೊಳೆಬೆನವಳ್ಳಿಗೆ ಹೊರಟಿದ್ದನಂತೆ. ಚಿಕ್ಕಲ್ ಮಾರ್ಗವಾಗಿ ಬೈಕ್ ನಲ್ಲಿ ಹೋಗುತ್ತಿದ್ದ ಮಲ್ಲಿಗೆ ಕಾರ್ತಿಕ್ ಶ್ರೇಯಸ್ ಸಹೋದರರ ತಂಡ ಹಿಂಬದಿಯಿಂದ ಮಲ್ಲಿಗೆ ಬೈಕ್​ಗೆ ಡಿಕ್ಕಿ ಹೊಡೆಸಿ ಆತನನ್ನು ಬೀಳಿಸಿದ್ದಾರೆ.  ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಗೈದಿದ್ದಾರೆ.  ತಂಗಿಯ ಸಾವಿಗೆ ಪ್ರತಿಕಾರ ತೀರಿಸಿಕೊಂಡ ಸಹೋದರರು ಪರಾರಿಯಾಗಿದ್ದಾರೆ. ಪ್ರಕರಣದಲ್ಲಿ ನಾಲ್ವರನ್ನ ಅದಾಗಲೇ ಪೊಲೀಸರು ಬಂಧಿಸಿದ್ದಾರೆ.