KARNATAKA NEWS/ ONLINE / Malenadu today/ Nov 14, 2023 SHIVAMOGGA NEWS
Shivamogga | ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವ್ಯಕ್ತಿಯೊಬ್ಬರು ಬರೋಬ್ಬರಿ 93 ಸಾವಿರ ಕಳೆದುಕೊಂಡು ಇದೀಗ ಪೋಲಿಸರ ಮೊರೆ ಹೋಗಿದ್ದಾರೆ.
READ : ಶಿವಮೊಗ್ಗದಲ್ಲಿ ಒಂದೆ ಕಡೆ ಪಟಾಕಿ ಮಾರಾಟ! ಉಳಿದ ಕಡೆ ಸೇಲ್ ಮಾಡಿದ್ರೆ ಏನ್ಮಾಡ್ತಾರೆ ಗೊತ್ತಾ?
ಏನಿದು ಪ್ರಕರಣ
ಡೈಲಿ ಟಾಸ್ಕ್ ಹೆಸರಿನ ವಂಚನೆಯ ಜಾಲವೊಂದು ಟೆಲಿಗ್ರಾಂ ಮೂಲಕ ಜನರನ್ನು ವಂಚಿಸುತ್ತಿದೆ. ಇಂತಹ ಕೃತ್ಯದಲ್ಲಿ ಜನರು ಮೋಸಕ್ಕೆ ಸಿಲುಕಿತ್ತಿದ್ಧಾರೆ. ವೃತ್ತಿಯಲ್ಲಿ ಇಂಜಿನಿಯರ್ ಆದರವರೊಬ್ಬರು ಈ ಡೈಲಿ ಟಾಸ್ಕ್ ಮೋಸದ ಜಾಲಕ್ಕೆ ಬಿದ್ದು ಇದೀಗ ಹಣ ಕಳೆದುಕೊಂಡಿದ್ದಾರೆ.
READ :ದೀಪಾವಳಿ ಅಂಗಡಿ ಪೂಜೆಯ ದಿನವೇ ನಡೀಯಿತು ಅಗ್ನಿ ದುರಂತ! ಏನಿದು ಘಟನೆ
ಮೊದಲಿಗೆ ಸಣ್ಣ ಮೊತ್ತವನ್ನು ಪಡೆದ ಡೈಲಿ ಟಾಸ್ಕ್ ಕಡೆಯಿಂದ ಒಂದಿಷ್ಟು ಹೆಚ್ಚು ಹಣವನ್ನು ನೀಡುವ ಮೂಲಕ ಆಸೆ ತೋರಿಸಲಾಗಿತ್ತು. ಇದೇ ರೀತಿ ಒಂದೆರಡು ಬಾರಿ ವ್ಯವಹಾರ ನಡೆಸಿ, ನಂತರದಲ್ಲಿ ದೊಡ್ಡ ಮೊತ್ತದ ಆಸೆಯ ಬಲೆಯನ್ನು ಬೀಸಿ ಒಮ್ಮೆಗೇ 93 ಸಾವಿರ ರೂಪಾಯಿ ಹಣ ಹಾಕಿಸಿಕೊಂಡು ವಂಚಿಸಿದೆ.
ಬಳಿಕ ಹಾಕಿದ ಹಣಕ್ಕೆ ಕೊಡಬೇಕಾದ ಲಾಭವನ್ನ ನೀಡದೇ ಇನ್ನಷ್ಟು ಹಣವನ್ನು ನೀಡುವಂತೆ ತಿಳಿಸಿದ್ದಾರೆ ಅನುಮಾನ ಗೊಂಡ ಗ್ರಾಹಕರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ಧಾರೆ.
