ಭದ್ರಾವತಿ, ಕೋಟೆಗಂಗೂರು, ರಾಗಿಗುಡ್ಡದ ಈ ನಾಲ್ವರು ಶಿವಮೊಗ್ಗದಲ್ಲಿ ಅರೆಸ್ಟ್ ! ಕಾರಣವೇನು ಗೊತ್ತಾ?

ಹಂಚಿಕೊಳ್ಳಿ
WhatsApp Facebook X Telegram
ಭದ್ರಾವತಿ, ಕೋಟೆಗಂಗೂರು, ರಾಗಿಗುಡ್ಡದ  ಈ ನಾಲ್ವರು ಶಿವಮೊಗ್ಗದಲ್ಲಿ ಅರೆಸ್ಟ್ ! ಕಾರಣವೇನು ಗೊತ್ತಾ?

KARNATAKA NEWS/ ONLINE / Malenadu today/ Nov 14, 2023 SHIVAMOGGA NEWS

Shivamogga |  ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ನ ಪೊಲೀಸರು, ದರೋಡೆಗೆ ಸ್ಕೆಚ್ ಹಾಕಿ ನಿಂತಿದ್ದ ಯುವಕರನ್ನ   ಬಂಧಿಸಿ, 2 ಸ್ಟೀಲ್ ಡ್ರಾಗನ್, ಕಬ್ಬಿಣದರಾಡುಹಾಗೂಲಾಂಗ್ ವಶಪಡಿಸಿಕೊಂಡಿದ್ದಾರೆ. 

ಬಂಧಿತರು ಯಾರು?

ಹೋಟೆಲ್ ಕಾರ್ಮಿಕ, ಭದ್ರಾವತಿ ತಾಲೂಕಿನ ಬಾಬಳ್ಳಿ ಗ್ರಾಮದ ದೇವರಾಜ್ (31), ಕೋಟೆಗಂಗೂರಿನ ಸಾಗರ್‌ಯಾನ ಶಬರೀಶ್ (22), ಭದ್ರಾವತಿ ಎಪಿಎಂಸಿ ಅಡಕೆ ಮಂಡಿಯಲ್ಲಿ ಕೆಲಸಮಾಡಿಕೊಂಡಿದ್ದನಾಗರಾಜ್ ಯಾನೆ ಕುಮಾರ (38), ರಾಗಿಗುಡ್ಡದ ಶೇಯಸ್ (22) ಬಂಧಿತ ಆರೋಪಿಗಳು, ಕೋಟೆಗಂಗೂರಿನ ಸಂತೋಷ್ ಎಂಬಾಂತ ತಲೆಮರೆಸಿಕೊಂಡಿದ್ದಾನೆ.

READ :ದೀಪಾವಳಿ ಅಂಗಡಿ ಪೂಜೆಯ ದಿನವೇ ನಡೀಯಿತು ಅಗ್ನಿ ದುರಂತ! ಏನಿದು ಘಟನೆ

ಏನಿದು ಘಟನೆ?

ನಗರದ ಎನ್‌.ಟಿ. ರಸ್ತೆಯ ಫಲಕ್ ಶಾದಿಮಹಲ್ ಪಕ್ಕದಲ್ಲಿ ನಾಲೈದು ಜನ ಯುವಕರ ಗುಂಪೊಂದು ಭಾರಿ ಅನಾಹುತ ಸೃಷ್ಠಿಸಲು ಮುಂದಾಗಿತ್ತು. ಎನ್.ಟಿ. ರಸ್ತೆಯ ಫಲಕ್ ಶಾದಿ ಮಹಲ್‌ನ ಪಕ್ಕದ ಖಾಲಿ ಜಾಗದಲ್ಲಿ ಹೊಂದಿಕೊಂಡಿರುವ ರಸ್ತೆಯಲ್ಲಿ ಓಡಾಡುವ ಜನರು ಮತ್ತು ವಾಹನಗಳನ್ನು ತಡೆದು ದರೋಡೆಗೆ ಹೊಂಚು ಹಾಕುತ್ತಿದ್ದರು.

ಈ ಬಗ್ಗೆ ಮಾಹಿತಿ ಹಿನ್ನಲೆ ಪಿಎಸ್‌ಐ ವಸಂತ್‌ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಆಗ ನಾಲೈದು ಜನರು ಅಪಾಯಕರವಾದ ಆಯುಧಗಳನ್ನು ಹಿಡಿದು, ಸುಲಿಗೆ ಉದ್ದೇಶದಿಂದ ಹೊಂಚು ಹಾಕುತ್ತಿರುವುದು ತಿಳಿದುಬಂದಿದೆ. ಈ ಸಂದರ್ಭ ಆಯುಧಗಳ ಸಮೇತ 4 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಲ್ಲಿ ಓರ್ವ ತಪ್ಪಿಸಿಕೊಂಡಿದ್ದಾನೆ. 

READ : ಶಿವಮೊಗ್ಗದಲ್ಲಿ ಒಂದೆ ಕಡೆ ಪಟಾಕಿ ಮಾರಾಟ! ಉಳಿದ ಕಡೆ ಸೇಲ್​ ಮಾಡಿದ್ರೆ ಏನ್ಮಾಡ್ತಾರೆ ಗೊತ್ತಾ?

ಹಣದ ಆಸೆಗೆ ಈ ರೀತಿ ಕೃತ್ಯ ಮಾಡಿದ್ಯಾಗಿ ವಿಚಾರದಲ್ಲಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಬಂಧಿತರಿಂದ ಕಬ್ಬಿಣದ ರಾಡು, ಮರದ ಹಿಡಿ ಇರುವ ಮಚ್ಚು, 50 ಗ್ರಾಂ ತೂಕದ ಖಾರದ ಪುಡಿ ಇರುವ ಕವರ್, 2 ಸ್ಟೀಲ್ ಡ್ರಾಗನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

 


ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor