KARNATAKA NEWS/ ONLINE / Malenadu today/ Nov 14, 2023 SHIVAMOGGA NEWS
Shivamogga | ಶಿವಮೊಗ್ಗದ ಚಿಕ್ಕಲ್ ರೋಡ್ನಲ್ಲಿ ನಿನ್ನೆ ರಾತ್ರಿ ಕೊಲೆಯೊಂದು ನಡೆದಿದೆ. ಘಟನೆಯಲ್ಲಿ ಓರ್ವನನ್ನ ಹೊಡೆದು ಉರುಳಿಸಲಾಗಿದೆ. ನಡುರಸ್ತೆಯಲ್ಲಿ ನಡೆದ ಘಟನೆಯ ಹಿಂದೆ ಪ್ರೀತಿಯ ದ್ವೇಷದ ಕಥೆ ಕೇಳಿಬರುತ್ತಿದೆ.
ಅಂದಹಾಗೆ, ನಿನ್ನ ಸ್ಪಾಟ್ ಆದವನು ಮಲ್ಲೇಶ್ ಅಲಿಯಾಸ್ ಮಲ್ಲ ಎಂಬಾತ! ವಯಸ್ಸು 35 ರ ಆಜುಬಾಜು! ಈತ ಗಾಂಧಿಬಜಾರ್ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ. ಮೀನ್ ಮಾರ್ಕೆಟ್ ಸಮೀಪದಲ್ಲಿರುವ ಏರಿಯಾದಲ್ಲಿ ಮಲ್ಲನ ಮನೆಯಿತ್ತು..ಈತನ ಮೇಲೆ ಬಹಳ ಹಿಂದೆಯೇ ಸ್ಕೆಚ್ ರೆಡಿಯಾಗಿತ್ತು. ನಿನ್ನೆ ಚಿಕ್ಕಲ್ ರಸ್ತೆಯಲ್ಲಿ ಸ್ಕೆಚ್ ಎಕ್ಸ್ಯೂಕ್ಯೂಟ್ ಆಗಿತ್ತು.
READ : ಭದ್ರಾವತಿ, ಕೋಟೆಗಂಗೂರು, ರಾಗಿಗುಡ್ಡದ ಈ ನಾಲ್ವರು ಶಿವಮೊಗ್ಗದಲ್ಲಿ ಅರೆಸ್ಟ್ ! ಕಾರಣವೇನು ಗೊತ್ತಾ?
ಮಲ್ಲ ಅಲಿಯಾಸ್ ಮಲ್ಲೇಶ್ ಒಂದು ಹುಡುಗಿಯನ್ನ ಪ್ರೀತಿಸಿದ್ದನಂತೆ.ಆ ಹುಡುಗಿ ಈತನ ಕಾರಣದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬುದು ಮೇನ್ ಸ್ಟೋರಿ. ತನ್ನ ಸಹೋದರಿಯ ಸಾವಿಗೆ ಕಾರಣವಾದವನನ್ನ ಹೊಡೆಯುತ್ತೇನೆ ಎಂದು ಪಾತಾಳಿ ಗ್ಯಾಂಗ್ ಶಪಥ ಮಾಡಿತ್ತು ಎನ್ನಲಾಗುತ್ತದೆ. ಅದರಂತೆ ನಿನ್ನೆ ಮಲ್ಲೇಶ್ನನ್ನ ಮೃತ ಯುವತಿಯ ಸಹೋದರರು ಆ್ಯಂಡ್ ಗ್ಯಾಂಗ್ ಹೊಡೆದುಹಾಕಿದೆ ಎಂಬುದು ಫ್ರಂಟ್ ಲೈನ್ ರಿಪೋರ್ಟ್.. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸ್ತಿದ್ದಾರೆ
ಚಿಕ್ಕಲ್ನಲ್ಲಿ ಬೈಕ್ನಲ್ಲಿ ಬರುತ್ತಿದ್ದ ಮಲ್ಲೇಶ್ನಿಗೆ ಹಿಂದಿನಿಂದ ಮತ್ತೊಂದು ಬೈಕ್ ಡಿಕ್ಕಿಯಾಗಿದೆ. ಮಲ್ಲ ಕೆಳಕ್ಕೆ ಬೀಳುತ್ತಲೇ ಆರೋಪಿಗಳು ಆತನ ಮೇಲೆ ಮಾರಾಕಾಸ್ತ್ರದಿಂದ ಹಲ್ಲೆ ಮಾಡಿದ್ಧಾರೆ. ಮಲ್ಲ ಸ್ಪಾಟ್ನಲ್ಲಿಯೇ ಉಸಿರುಬಿಟ್ಟಿದ್ದಾನೆ. ಸ್ಥಳೀಯರು ಘಟನೆಯನ್ನ ನೋಡುತ್ತಲೇ ಭಯಬೀತರಾಗಿದ್ದರು..
