ನಾಲ್ವರನ್ನ ಸಾಯಿಸಿ ಬೆಳಗಾವಿಯಲ್ಲಿ ಅಡಗಿದ್ದ ಆರೋಪಿ! ಉಡುಪಿ ಕೇಸ್​ನಲ್ಲಿ ಕಂಡು ಬಂದಿದ್ದೇನು?

Malenadu Today

KARNATAKA NEWS/ ONLINE / Malenadu today/ Nov 15, 2023 SHIVAMOGGA NEWS

udupi/belagavi  | Malnenadutoday.com |  ಒಂದು ರೀತಿಯ ಆತಂಕ ಮೂಡಿಸಿದ್ದ ಉಡುಪಿ ಜಿಲ್ಲೆ ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣದ ಆರೋಪಿಯನ್ನು ಬೆಳಗಾವಿ ಜಿಲ್ಲೆ ಕುಡುಚಿಯಲ್ಲಿ  ಅರೆಸ್ಟ್ ಮಾಡಲಾಗಿದೆ. 

Malenadu Today

ನವೆಂಬರ್ 12 ರಂದು ನಡೆದಿತ್ತು ಘಟನೆ 

ಕಳೆದ ನವೆಂಬರ್  12ರಂದು ಇಲ್ಲಿನ ತೃಪ್ತಿ ಲೇಔಟ್‌ನಲ್ಲಿ ಹಸೀನಾ( 48), ಮಕ್ಕಳಾದ ಅಫ್ನಾನ್ (23), ಅಯ್ನಾಜ್ (20), ಅಸೀಮ್ (14) ಎಂಬುವರನ್ನು ಕೊಲೆ ಮಾಡಲಾಗಿತ್ತು. ಈ ಘಟನೆ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಇಡೀ ಮನೆಯಲ್ಲಿ ಓರ್ವ ಹಿರಿಯ ಮಹಿಳೆ ಕೊಲೆಗಾರನಿಂದ ಬಚಾವ್ ಆಗಿದ್ದಳು. 

Malenadu Today

ನಿರಂತರ ಟ್ರಾವೆಲಿಂಗ್​ನಲ್ಲಿದ್ದ ಆರೋಪಿ

ಹಸೀನಾರನ್ನ ಚಾಕುವಿನಿಂದ ಇರಿದಿದ್ದ ಆರೋಪಿ, ತಡೆಯಲು ಬಂದ ಆಫ್ನಾನ್​, ಆಯ್ನಾಜ್​, ಆಸೀಮ್​ನನ್ನ ಸಹ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ, ಈ ವೇಳೆ ಆತಂಕದಿಂದ ಹಸೀನಾರ ಅತ್ತೆ ಹಾಜಿರಾ ಕೊಲೆಗಾರನಿಂದ ತಪ್ಪಿಸಿಕೊಂಡು ಬಾತ್​ ರೂಮ್​ನಲ್ಲಿ ಅಡಗಿ ಕುಳಿತಿದ್ದರು. ಘಟನೆ ಬೆನ್ನಲ್ಲೆ ಆರೋಪಿ ಟ್ರಾವೆಲಿಂಗ್ ಮಾಡಿದ್ದಾನೆ. ಒಂದು ವಾಹನದಿಂದ ಇನ್ನೊಂದು ವಾಹನಕ್ಕೆ ಶಿಫ್ಟ್ ಆಗುತ್ತಿದ್ದ ಆರೋಪಿಯ ಚಹರೆ ಸಿಸಿ ಕ್ಯಾಮರಾಗಳಲ್ಲಿ ಕಾಣುತ್ತಿತ್ತು. ಆದರೆ ಆರೋಪಿ ಇರುವಿಕೆ ಪತ್ತೆಯಾಗುತ್ತಿರುತ್ತಲಿಲ್ಲ. 

Malenadu Today

ಮೊಬೈಲ್​ ಟವರ್ ಮೂಲಕ ಆರೋಪಿ ಪತ್ತೆ

ಈ ಮಧ್ಯೆ ಪೊಲೀಸರು ಆರೋಪಿಯ ಫೋನ್ ನಂಬರ್ ಪಡೆದು ಅದನ್ನ ಟ್ರೇಸ್ ಮಾಡಿದ್ದಾರೆ. ಮೊಬೈಲ್ ಟವರ್ ಲೋಕೆಷನ್ ಆಧಾರದಲ್ಲಿ ಹುಡುಕಿದಾಗ ಆರೋಪಿಯು ಬೆಳಗಾವಿಯ ಕುಡುಚಿಯಲ್ಲಿ ಆತನ ಸಂಬಂಧಿ ಮನೆಯಲ್ಲಿ ಇರುವುದು ಗೊತ್ತಾಗಿದೆ. ತಕ್ಷಣವೇ ಬೆಳಗಾವಿ ಪೊಲೀಸರಿಗೆ ಮಾಹಿತಿ ನೀಡಿದ ಉಡುಪಿ ಪೊಲೀಸರು ಸಹ ಅಲ್ಲಿಗೆ  ದೌಡಾಯಿಸಿದ್ದಾರೆ.. 

ಬೆಳಗಾವಿ ಪೊಲೀಸರ ಸಾಥ್

Malenadu Today

ಆರೋಪಿ ಇದ್ದ ಮನೆಯನ್ನು ವಾಚ್ ಆ್ಯಂಡ್ ಗಾರ್ಡ್ ಮಾಡಿದ ಪೊಲೀಸರು, ಕೊಲೆಗಾರನ ಇರುವಿಕೆಯನ್ನು ಕನ್​ಫರ್ಮ್​ ಮಾಡಿಕೊಂಡಿದ್ದಾರೆ. ಅಷ್ಟರಲ್ಲಿ ಉಡುಪಿ ಪೊಲೀಸ್​  ಡಿವೈಎಸ್‌ಪಿ ನೇತೃತ್ವದ ತಂಡ ಬೆಳಗಾವಿಗೆ ತೆರಳಿದೆ. ತಕ್ಷಣವೇ ಆಪರೇಷನ್ ಆರಂಭಿಸಿ ಆರೋಪಿ ಇದ್ದ ಮನೆಯನ್ನು ಸುತ್ತುವರಿದ ಪೊಲೀಸರು,  ಪ್ರವೀಣ್​​​​ ಅರುಣ್​​​ ಚೌಗಲೆ  ಎಂಬಾತನನ್ನು ಬಂಧಿಸಿದ್ದಾರೆ.

READ : ಗಾಂಧಿ ಬಜಾರ್​ ಮಲ್ಲ ಚಿಕ್ಕಲ್​ನಲ್ಲಿ ಫಿನಿಶ್! ಲವ್​ & ರಿವೆಂಜ್​ ಮತ್ತು ಪಾತಾಳಿ ಗ್ಯಾಂಗ್!? ಏನಿದು!?

ಮಂಗಳೂರು ವಿಮಾನ ನಿಲ್ದಾಣದಲ್ಲಿ (mangalore international airport) ಸೆಕ್ಯೂರಿಟಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಪ್ರವೀಣ್​ ಮೂಲಹತ ಮಹಾರಾಷ್ಟ್ರದ ಸಾಂಗ್ಲಿಯವನು. ಏರ್​ಪೋರ್ಟ್​ನಲ್ಲಿ ಕೆಲಸ ಮಾಡ್ತಿದ್ದ ಈತನಿಗೆ ಕೊಲೆಯಾದ ಕುಟುಂಬ ಸದಸ್ಯರು ಪರಿಚಯವಿತ್ತು. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಇನ್ನಷ್ಟು ವಿಚಾರಣೆಗೆ ಪ್ರವೀಣ್​ನನ್ನ ಒಳಪಡಿಸಿದ್ದಾರೆ..  


Share This Article