KARNATAKA NEWS/ ONLINE / Malenadu today/ Nov 15, 2023 SHIVAMOGGA NEWS
Chikkamagaluru | Malnenadutoday.com | ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ತರಕಾರಿ ಲಾರಿಯೊಂದು ಡಿಕ್ಕಿ ಹೊಡೆದಿದ್ದರಿಂದ ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಇಲ್ಲಿನ ಬಿದರಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಘಟನೆಯಲ್ಲಿ ಸಾವನ್ನಪ್ಪಿದ್ದ ವ್ಯಕ್ತಿಯು, ಮೂಡಿಗೆರೆಯ ಬಾಳೆಹಳ್ಳಿ ನಿವಾಸಿ ಮಂಜುನಾಥ್ ಎಂದು ಗೊತ್ತಾಗಿದೆ.
READ : ನಾಲ್ವರನ್ನ ಸಾಯಿಸಿ ಬೆಳಗಾವಿಯಲ್ಲಿ ಅಡಗಿದ್ದ ಆರೋಪಿ! ಉಡುಪಿ ಕೇಸ್ನಲ್ಲಿ ಕಂಡು ಬಂದಿದ್ದೇನು?
ಅಪ್ಪನ ಜೊತೆಯಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ಮಂಜುನಾಥ್ರಿಗೆ ಎದುರುಗಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಸ್ಪೀಡ್ನಲ್ಲಿ ಬಂದು ಬೈಕ್ಗೆ ತಾಗಿದ ಪರಿಣಾಮ ಮಂಜುನಾಥ್ ಆಯತಪ್ಪಿ ಲಾರಿಯಡಿಯಲ್ಲಿ ಸಿಲುಕಿದ್ದಾರೆ.
ತಕ್ಷಣಕ್ಕೆ ನಿಲ್ಲದ ಲಾರಿ ಮಂಜುನಾಥ್ ರನ್ನ ಎಳೆದುಕೊಂಡು ಮುಂದಕ್ಕೆ ಸಾಗಿದ್ದು, ಬಳಿಕ ಪಲ್ಟಿಯಾಗಿದೆ. ಸದ್ಯ ಪ್ರಕರಣ ಸಂಬಂಧ ಮೂಡಿಗೆರೆ ಪೊಲೀಸರು ಕೇಸ್ ದಾಖಲಿಸಿಕೊಂಡು ಎನ್ಕ್ವೈರಿ ನಡೆಸ್ತಿದ್ದಾರೆ
