ರುಂಡ ಮುಂಡ ಬೇರೆ ಮಾಡಿ ಗೆಳೆಯನನ್ನೆ ಸಾಯಸಿದ್ದ ಕೊಲೆ ಆರೋಪಿಗಳು ಗಲ್ಲು ಶಿಕ್ಷೆಯಿಂದ ಪಾರಾಗಿದ್ದು ಹೇಗೆ ಗೊತ್ತಾ! ಶಿವಮೊಗ್ಗದಲ್ಲಿ ನಡೆದಿದ್ದ ಶುಂಠಿ ವ್ಯಾಪಾರಿ ಮರ್ಡರ್ ಸ್ಟೋರಿ! JP Flash back

Do you know how the murder accused who killed their friend escaped the death penalty? The murder story of a ginger trader in Shimoga! JP Flash back

ರುಂಡ ಮುಂಡ ಬೇರೆ ಮಾಡಿ ಗೆಳೆಯನನ್ನೆ ಸಾಯಸಿದ್ದ ಕೊಲೆ ಆರೋಪಿಗಳು ಗಲ್ಲು ಶಿಕ್ಷೆಯಿಂದ ಪಾರಾಗಿದ್ದು ಹೇಗೆ ಗೊತ್ತಾ! ಶಿವಮೊಗ್ಗದಲ್ಲಿ ನಡೆದಿದ್ದ ಶುಂಠಿ ವ್ಯಾಪಾರಿ ಮರ್ಡರ್ ಸ್ಟೋರಿ! JP Flash back

KARNATAKA NEWS/ ONLINE / Malenadu today/ May 23, 2023 SHIVAMOGGA NEWS

ಅದು 2005 ರಲ್ಲಿ ನಡೆದ ಘಟನೆ! ಇಡೀ ಮಲೆನಾಡು ಅವತ್ತಿನ ಘಟನೆಗೆ ಅಚ್ಚರಿ ವ್ಯಕ್ತಪಡಿಸಿತ್ತು!  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ  ಆನಂದಪುರದಲ್ಲಿ ಕೊಲೆಯೊಂದು ಸಂಭವಿಸಿತ್ತು! ಗೆಳೆಯ ತಲೆಯನ್ನೆ ಕಡಿದು ಸಾಕ್ಷ್ಯ ನಾಶ ಮಾಡಿದ್ದ  ಆ ಘಟನೆಯಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆಯೇ ಆಗಿತ್ತು. ಹಾಗಿದ್ದೂ ಅವರು ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದರು. ಇದೇ ಇವತ್ತಿನ ಜೆಪಿ ಫ್ಲ್ಯಾಶ್ ಬ್ಯಾಕ್

ಘಟನೆ ನಡೆದ ದಿನ

2005 ಆಗಸ್ಟ್ 8ರ ಸೋಮವಾರ ಸಾಗರ ತಾಲೂಕಿನ ಆನಂದಪುರ ಕಾಡಿನ ಪರಿಸರದಲ್ಲಿ ನಡೆದ ಯುವಕನೊಬ್ಬನ ಬರ್ಬರ ಕೊಲೆಯಾಗಿತ್ತು. ಗೆಳೆಯನನ್ನೇ ಬರ್ಬರವಾಗಿ ಹತ್ಯೆಗೈದು ,ಗುರುತು ಸಿಗದಂತೆ  ರುಂಡ ಮುಂಡವನ್ನು ಬೇರ್ಪಡಿಸಿ ,ಆರೋಪಿಗಳು ಕೊಲೆಯ ಜಾಡಿನ ದಿಕ್ಕನ್ನು ಬದಲಿಸುವ ಯತ್ನ ನಡೆಸಿದ್ದರು.  ಅದು ಹಣಕ್ಕಾಗಿ ಸ್ನೇಹಿತರಿಂದಲೇ ನಡೆದ ಪ್ರೀ ಪ್ಲಾನ್ ಮರ್ಡರ್.

ಘಟನೆ ಹಿನ್ನಲೆ

ಆನಂದಪುರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ಆತನನ್ನ (ಹೆಸರು ಬದಲಾಯಿಸಲಾಗಿದೆ) ಸುರೇಶ್​  ಎಂದು ಕರೆಯೋಣ. ಆತನಿಗೆ ಇನ್ನೊಬ್ಬ ಗೆಳಯನಿದ್ದ ಆತ  ಲೋಕೇಶ್​…ಇಬ್ಬರು ಕುಚಿಕು ಗೆಳಯರಾಗಿದ್ದರು ಸುರೇಶ್​ ತನ್ನ ಚಿಕ್ಕಪ್ಪ ಪ್ರಹ್ಲಾದ ನಡೆಸುತ್ತಿದ್ದ ಶುಂಠಿ ವ್ಯಾಪಾರದಲ್ಲಿ ಸಹಾಯ ಮಾಡುತ್ತಿದ್ದ. ಅದರ ಹಣಕಾಸಿನ ವಹಿವಾಟನ್ನ ನೋಡಿಕೊಳ್ತಿದ್ದ ಈತನ ಬಳಿ ಬಹಳಷ್ಟು ಕ್ಯಾಶ್ ಇರುತ್ತಿತ್ತು. ಇದರ ಮೇಲೆ ಕಣ್ಣು ಹಾಕಿದ ಲೋಕೇಶ್​ , ಸುರೇಶ್​ನನ್ನೆ ಮುಗಿಸುವ ಸ್ಕೆಚ್​ ಹಾಕಿದ್ದ. ಇದಕ್ಕೆ ಸಾಥ್​ ಕೊಟ್ಟವರು ಲೋಕೇಶ್​ನ ಸ್ನೇಹಿತರು ರಜಕ್​ ಮತ್ತು ಶಿವಣ್ಣ (ಹೆಸರುಗಳು ಕೇವಲ ಕಾಲ್ಪನಿಕ)

ಸ್ಕೆಚ್​ನಲ್ಲಿ ಏನಾಯ್ತು!

2005 ಆಗಸ್ಟ್ 8ರ ಸೋಮವಾರ ಆನಂದಪುರದಿಂದ ಸಾಗರಕ್ಕೆ ಶುಂಠಿ ಬಾಕಿ ಹಣವನ್ನು ತರಲು ಸುರೇಶ್ ಸಾಗರಕ್ಕೆ ಹೋಗಿದ್ದ.ಅಲ್ಲಿ ಇಬ್ಬರಿಂದ  ನಾಲ್ಕು ಲಕ್ಷ ರೂಪಾಯಿ ಬಾಕಿ ಹಣವನ್ನು ಪಡೆದುಕೊಂಡು ಸಾಗರದ ಬಸ್ ನಿಲ್ದಾಣದಲ್ಲಿ ಪುನಃ ಆನಂದಪುರಕ್ಕೆ ವಾಪಸ್ಸು ಹೋಗಲು ಬಸ್ ಕಾಯುತ್ತಿದ್ದ ಅಷ್ಟೆ. ಆನಂತರ  ಇದ್ದಕ್ಕಿದ್ದಂತೆ ಸುರೇಶ್ ನಾಪತ್ತೆಯಾಗಿದ್ದ .ಈ ಮಧ್ಯೆ ಹಣ ಕೊಟ್ಟವರ ಸುರೇಶ್ ಅಪಹರಣವಾಗಿರಬಹುದು  ಎಂದು ಅನುಮಾನಿಸಿದ್ದರು. ಅಲ್ಲದೆ ಪೊಲೀಸರಿಗೆ ದೂರು ಕೊಟ್ಟಿದ್ದರು.  ಈ ನಡುವೆ ಆನಂದಪುರದಲ್ಲಿ ಸುರೇಶ್ ನನ್ನ ಆತನ ಗೆಳೆಯರೇ ಅಪಹರಿಸಿ ಕೊಲೆ ಮಾಡಿರುವ ಬಗ್ಗೆ ಗುಸುಗುಸು ಮಾತುಗಳು ಕೇಳಿಬರತೊಡಗಿತ್ತು. ಜನರ ಅನುಮಾನ ಶಂಕೆಗಳನ್ನೇ ಬೆನ್ನತ್ತಿದ್ದ ಪೊಲೀಸರು, ಲೋಕೇಶ್​, ರಜಕ್ ಮತ್ತೆ ಶಿವಣ್ಣನನ್ನ ವಿಚಾರಣೆಗೆ ಕರೆತರಲು ಸಿದ್ಧತೆ ಮಾಡಿದ್ರು

ಕಡಲ ಮುತ್ತು ಗಾಡಿ ಪತ್ತೆ

ಈ ಮಧ್ಯೆ ಪೊಲೀಸರಿಗೆ ಒಂದು ಸುಳಿವು ಸಿಕ್ಕಿತ್ತು ಕಡಲ ಮುತ್ತು ಎಂದು ಬರೆದಿದ್ದ ಒಮಿನಿಯೊಂದರಲ್ಲಿ, ಲೋಕೇಶ್, ಸುರೇಶ್​, ರಜಕ್​, ಶಿವಣ್ಣ ಓಡಾಡಿರುವ ಬಗ್ಗೆ ಸುಳಿವು ಪೊಲೀಸರಿಗೆ ಗೊತ್ತಾಗಿತ್ತು. ಹಾಗಾಗಿ 2005 ಆಗಸ್ಟ್ 12 ರಂದು ಶಿವಣ್ಣನನ್ನ ಮೊದಲು ಪೊಲೀಸರು ಬಂಧಿಸಿದ್ದರು. ಆನಂತರ ರಜಕ್​ ಹಾಗೂ ಲೋಕೇಶ್​ ಬಂಧನವಾಗಿದ್ದರು. ಅವರು ಹೇಳಿದ ಸುಳಿವಿನಡಿಯಲ್ಲಿ ಕಾಡಿನಲ್ಲಿ ಸುರೇಶ್​ನ​ ಶವ ಪತ್ತೆಯಾಗಿತ್ತು. ಆದರೆ ಆತನ ಶವದಲ್ಲಿ ರುಂಡವೆ ಇರಲಿಲ್ಲ.  

ಸಾಕ್ಷ್ಯ ಸಿಗಂದಂತೆ ರುಂಡವನ್ನು ನದಿಗೆ ಎಸೆದಿದ್ದರು. 

ಹೌದು ಬಂದಿತ ಆರೋಪಿಗಳು ಅಂದು ಪೊಲೀಸರಿಗೆ ಬೆಚ್ಚಿಬೀಳಿಸುವ ಕಥೆ ಹೇಳಿದ್ದರು.ಸುರೇಶ್ ನನ್ನ ಅಪಹರಿಸಲು ಮಾಡಿದ ಪ್ಲಾನ್ ಮತ್ತು ಕೊಲೆ ಮಾಡಿ ಸಾಕ್ಷ್ಯ ನಾಶ ಪಡಿಸಲು ಮಾಡಿದ ಸಂಚುಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. 

2005 ಆಗಸ್ಟ್ 8 ರಂದು  ಸುರೇಶ್​  ನಾಲ್ಕು ಲಕ್ಷ ರೂಪಾಯಿ ಹಣದೊಂದಿಗೆ ಸಾಗರ ಬಸ್ ಸ್ಟ್ಯಾಂಡ್ ನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ. ಆಗ ಒಮಿನಿಯಲ್ಲಿ ಬಂದ ಆತನ ಸ್ನೇಹಿತರು, ಡ್ರಾಪ್ ಕೊಡುವುದಾಗಿ ಹತ್ತಿಸಿಕೊಂಡಿದ್ಧಾರೆ. ಆನಂತರ ವೈಯರ್​ ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಆನಂತೆ  ಹೆಣವನ್ನ ಕಾಡಿನಲ್ಲಿ ಬಿಸಾಡಿ , ಹಣ ಹಂಚಿಕೊಂಡಿದ್ದರು.

ದೂರು ಕೊಟ್ಟಾಗ ಹುಡುಕುವ ನಾಟಕವಾಡಿದ್ರು!

ಸುರೇಶ್​  ಚಿಕ್ಕಪ್ಪ  ಪೊಲೀಸರಿಗೆ ದೂರು ಕೊಟ್ಟಾಗ, ಆತನ ಸ್ನೇಹಿತರು ಸಹ ಹುಡುಕುವ ನಾಟಕ ಮಾಡಿದ್ರು. ಆದರೆ ಕಾಡಿನಲ್ಲಿ ಬಿಸಾಕಿದ ಹೆಣವನ್ನು ಪುನಃ ಬಂದು ರುಂಡ ಮುಂಡ ಬೇರೆ ಮಾಡಿದ್ದ ಆರೋಪಿಗಳು ರುಂಡವನ್ನು  ನಂದಿ ಹೊಳೆಯಲ್ಲಿ ಬಿಸಾಡಿದ್ದರು.  ಪೊಲೀಸರು ಶವ ಪತ್ತೆಯನ್ನ ಡಿಎನ್​ಎ ಪರೀಕ್ಷೆ ಮೂಲಕವೇ ನಡೆಸಬೇಕಿತ್ತು. ಆನಂತರ ವಿಚಾರಣೆ ವೇಳೆ ಆರೋಪಿಗಳು ಕೊಲೆ ಮಾಡಿದ್ದನ್ನ ಒಪ್ಪಿಕೊಂಡಿದ್ದರು. 

ನ್ಯಾಯಾದೀಶರನ್ನೇ ಬೈಯ್ದ ಪಾತಕಿಗಳು

ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಎರಡನೇ ಶೀಘ್ರ ವಿಲೇವಾರಿ ನ್ಯಾಯಾಲಯದಲ್ಲಿ ಸುಧೀರ್ಘ ವಿಚಾರಣೆ ನಡೆಯಿತು.ಪ್ರಕರಣವನ್ನು ವಿರಳಾತಿ ವಿರಳ ಪ್ರಕರಣದ ಪಟ್ಟಿಗೆ ಸೇರಿಸಿ,ನ್ಯಾಯಾಲಯ ಆರೋಪಿತರಾದ ಲೋಕೇಶ್​, ರಜಕ್​, ಶಿವಣ್ಣನಿಗೆ  17-07-2008 ರಂದು ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಅಲ್ಲದೆ ವಿವಿಧ ಕಾಯ್ದೆ ಅಡಿಯಲ್ಲಿ ಮೂವರಿಗೂ 12 ವರ್ಷ ಸಜೆ ಹಾಗು 35 ಸಾವಿರ ಧಂಡ ವಿಧಸಿತು. ಆದರೆ ತೀರ್ಪು ಹೊರಬೀಳುತ್ತಿದ್ದಂತೆ ನ್ಯಾಯಾದೀಶರನ್ನೇ ಆರೋಪಿಗಳು ಬೈಯ್ದಾಡಿದರು

ಕೆಳ ನ್ಯಾಯಾಲಯದ ತೀರ್ಪನ್ನು ಎಚ್ಚಿಹಿಡಿದ ಹೈಕೋರ್ಟ್.

ಬಳಿಕ ಅಪರಾಧಿಗಳು ತೀರ್ಪನ್ನು ಹೈಕೋರ್ಟ್ ನಲ್ಲಿ  ಪ್ರಶ್ನಿಸಿದ್ದರು.ಆದರೆ ಕೆಳ ಹಂತದ ನ್ಯಾಯಾಲಯದ ತೀರ್ಪನ್ನೇ ಎತ್ತಿಹಿಡಿದ ಹೈಕೋರ್ಟ್  ಕೊಲೆಯ ಹಿಂದೆ ಪೈಶಾಚಿಕ  ಉದ್ದೇಶವಿತ್ತು.ಈ ಮೂವರು ಯಾವತ್ತಿಗೂ ಸಮಾಜಕ್ಕೆ ಕಂಟಕರಾಗಿರುತ್ತಾರೆ ಎಂಬುದು ಸ್ಪಷ್ಟ.ಭವಿಷ್ಯದಲ್ಲಿ ಇವರು ಯಾರನ್ನು ಬೇಕಾದರೂ ಕೊಲ್ಲಬಹುದು ಒಂದು ವೇಳೆ ನಾವು ಜೀವಾವಧಿ ಶಿಕ್ಷೆ ನೀಡಿದ್ದೇ ಆದರೆ ಸಮಾಜ ದ್ರೋಹಿಗಳಿಗೆ ಮತ್ತು ದ್ರೋಹಿಗಳಲ್ಲದವರಿಗೆ ಯಾವುದೇ ವ್ಯತ್ಯಾಸ ಇರುವುದಿಲ್ಲ ಹೀಗಾಗಿ ಗಲ್ಲು ಶಿಕ್ಷೆ ನೀಡಿರುವುದು ಸರಿಯಾಗಿದೆ ಎಂದು ಅಬಿಪ್ರಾಯ ಪಟ್ಟು ಹೈಕೋರ್ಟ್ 2010 ರ ಸೆಪ್ಟೆಂಬರ್ 8 ರಂದು,ಅದೀನ ಕೋರ್ಟ್ ತೀರ್ಪನ್ನು ಎತ್ತಿಹಿಡಿಯಿತು.

ಜೀವದಾನ ಮಾಡಿದ ಸುಪ್ರಿಂ ಕೋರ್ಟ್ ತೀರ್ಪು

ಈ ಮಧ್ಯೆ ಆರೋಪಿಗಳು ಸುಪ್ರೀಂಕೋರ್ಟ್​ಗೆ ಹೋದರು, ಅಲ್ಲಿ ಕೊಲೆಯಂತಹ ಕುಕೃತ್ಯ ಎಸಗಿದ್ದರೂ ಅದು ವಿರಳಾತಿ ವಿರಳ ಪ್ರಕರಣಗಳ ಸಾಲಿಗೆ ಸೇರುವುದಿಲ್ಲ ಎಂದು ಸುಪ್ರಿಂ ಕೋರ್ಟ್ ಅಭಿಪ್ರಾಯ ಪಟ್ಟರು, ಪೂರಕ ಸಾಕ್ಷಿಗಳ ಕೊರತೆಯನ್ನು ಉಲ್ಲೇಖಿಸಿ ಆರೋಪಿಗಳಿಗೆ ಗಲ್ಲುಶಿಕ್ಷೆ ರದ್ದು ಮಾಡಿತು. ಆದರೆ  30 ವರ್ಷಗಳ ಕಾಲ ಜೀವಾವದಿ ಶಿಕ್ಷೆಗೆ ಆದ್ಯತೆ ನೀಡಿತು.  

ಕೊನೆಗೂ ಸಿಗಲಿಲ್ಲ ರುಂಡ

ಅದೇನೇ ಆಗಲಿ ಒಂದು ಕೊಲೆ ಪ್ರಕರಣದಲ್ಲಿ  ಆರೋಪಿಗಳಿಗೆ ಮರಣ ದಂಡನೆಯಂತ ಶಿಕ್ಷೆಯವರೆಗೂ ಕೊಂಡೊಯ್ದ ಸಾಗರ ಪೊಲೀಸರ ಕಾರ್ಯವೈಖರಿಗೆ ಒಂದು ಹ್ಯಾಟ್ಯ್ ಆಫ್ ಹೇಳಲೇ ಬೇಕು. ಸಮಾಜದಲ್ಲಿ ಅದೆಷ್ಟೋ ಕೊಲೆ ಗಳಾಗುತ್ತವೆ .ಅರೋಪಿಗಳು ಪಾರಾಗುತ್ತಲೇ ಇರುತ್ತಾರೆ.ಆದರೆ ಸುರೇಶ್ ಕೊಲೆ ಕೇಸಿನಲ್ಲಿ ಸಾಕ್ಷಿಯಾಗಬಲ್ಲ ರುಂಡವೇ ಇಲ್ಲದಿದ್ದರೂ ಆ ಪ್ರಕರಣ ತಾರ್ಕಿ ಅಂತ್ಯ ಕಂಡಿತ್ತು.