Shimoga district : ಶಿವಮೊಗ್ಗ ಜಿಲ್ಲೆಯಲ್ಲಿ 3 ವರ್ಷದಲ್ಲಿ 269 ಸಾವು! ಈ ಶವಗಳಿಗೆ ಪೊಲೀಸರೇ ಆಪತ್ಬಾಂದವರು

The police are responsible for the orphaned bodies

Shimoga district : ಶಿವಮೊಗ್ಗ ಜಿಲ್ಲೆಯಲ್ಲಿ 3 ವರ್ಷದಲ್ಲಿ 269 ಸಾವು! ಈ ಶವಗಳಿಗೆ ಪೊಲೀಸರೇ ಆಪತ್ಬಾಂದವರು
The police are responsible for the orphaned bodies

Shimoga district : ಶಿವಮೊಗ್ಗ ಜಿಲ್ಲೆಯಲ್ಲಿ 3 ವರ್ಷದಲ್ಲಿ 269 ಸಾವು! ಈ ಶವಗಳಿಗೆ ಪೊಲೀಸರೇ ಆಪತ್ಬಾಂಧವರು!

ಉಸಿರು ಚೆಲ್ಲುತ್ತಿರುವ ಈ ಜೀವಗಳಿಗೆ ಸರ್ಕಾರಿ ಗೌರವ ಹೇಗಿರುತ್ತೆ! ಇಷ್ಟಕ್ಕೂ ಏನಿದು ಸ್ಟೋರಿ! ಇಲ್ಲಿದೆ ಕುತೂಹಲದ JP Exclusive ವರದಿ!ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅನಾಥರಾಗಿ ಸಾವನ್ನಪ್ಪಿದ ನೂರಾರು ಜೀವಗಳಿಗೆ ಪೊಲೀಸರೇ ಸರ್ಕಾರಿ ನಿಯಮದಂತೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.ಸಮಾಜದಲ್ಲಿ ಅನಾಥರು ಎಂಬ ಪದ ಬಳಸುವುದಕ್ಕೆ ಬೇಸರವಾಗುತ್ತದೆ. ಕೌಟಂಬಿಕ ಕಲಹ..ಕುಡಿತದ ದಾಸ್ಯಕ್ಕೆ ಮನೆಯಿಂದ ಹೊರಹಾಕಲ್ಪಟ್ಟವರು. ಬುದ್ದಿ ಮಾಂದ್ಯರು, ಮಾನಸಿಕ ಅಸ್ವಸ್ಥರು ಭಿಕ್ಷುಕರು,..ಹೀಗೆ ನಿರ್ಗತಿಕರಾಗಿ ಇಂದು ಹಾದಿಬೀದಿಗಳಲ್ಲಿ ಕಂಡವರು ಅನಾಥ ಹೆಣವಾಗಿ ಸಾಯುತ್ತಿದ್ದಾರೆ.

ಹಸಿವಿನಿಂದ ಉಸಿರು ಚೆಲ್ಲುತ್ತಿವೆ ಜೀವಗಳು

ಪೊಲೀಸ್ ಅಂಕಿ ಅಂಶಗಳ ಪ್ರಕಾರ, ವೈದ್ಯರ ಮರಣೋತ್ತರ ವರದಿ ಪ್ರಕಾರ ಹೀಗೆ ಸಾಯುವವರಲ್ಲಿ ಬಹುತೇಕರು ಹಸಿವಿನಿಂದ ಬಳಲಿ ಪ್ರಾಣ ಬಿಟ್ಟವರೇ ಹೆಚ್ಚಾಗಿದ್ದಾರೆ.ಅಲ್ಲದೆ ಹೆಚ್ಚಾಗಿ ಪಾನಮತ್ತರಾಗಿ ಅನ್ನ ಆಹಾರ ಸೇವಿಸದೆ ಬಳಲಿ ಸಾವನ್ನಪ್ಪಿದವರಾಗಿದ್ದಾರೆ.ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಇವರು ಎಲ್ಲಾದರೊಂದು ಸ್ಥಳದಲ್ಲಿ ಕಾಣಸಿಗುತ್ತಾರೆ.ಬಸ್ ಸ್ಟ್ಯಾಂಡ್, ಫುಟ್ ಪಾತ್,..ರಸ್ತೆಗಳಲ್ಲಿ ನಡೆದುಕೊಂಡು ಬರುವಾಗ. ಇಲ್ಲವೇ ಮಲಗಿರುವಾಗ ಶಿವಮೊಗ್ಗ ಪೊಲೀಸರಿಗೆ ಇವರು ಒಂದಿಲ್ಲೊಂದು ಕ್ಷಣದಲ್ಲಿ ಎದುರಾಗಿರುತ್ತಾರೆ.ಅವರ ಮೊಬೈಲ್ ನಲ್ಲಿ ಸೆರೆಯಾಗಿರುತ್ತಾರೆ.ಅದರಲ್ಲೂ ಮಾನಸಿಕವಾಗಿ ಕುಗ್ಗಿದ ಪುರುಷ ಮಹಿಳೆಯರು ರಸ್ತೆಗಳಲ್ಲಿ ಎಲ್ಲಂದರಲ್ಲಿ ಕಾಣಸಿಗುತ್ತಿದ್ದಾರೆ.ಎಲ್ಲಂದರಲ್ಲಿ ಭಿಕ್ಷಾಟನೆ ಮಾಡುತ್ತಿರುತ್ತಾರೆ. ಇವರನ್ನು ಗುರುತಿಸಿ, ನಿರ್ಗತಿಕರ ಕೇಂದ್ರಕ್ಕೆ ಕಳಿಸಬೇಕಾದ ಸಮಾಜ ಕಲ್ಯಾಣ ಇಲಾಖೆ ಮಾತ್ರ ಮೌನಕ್ಕೆ ಶರಣಾಗಿ ಕುಳಿತಿದೆ.

ನಮ್ಮವರಾಗಿ ನಮ್ಮೊಳಗಿನವರಾಗದಿರುವುದೇ ದುರಂತ

ಪುಟ್ ಪಾತ್ ಗಳಲ್ಲಿ ಊಟವಿಲ್ಲದ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದವರನ್ನು ಯಾರು ಮೂಸಿಯೂ ಕೂಡ ನೋಡುವುದಿಲ್ಲ.ಕುಡಿದು ಅಮಲಿನಲ್ಲಿ ಬಿದ್ದವರನ್ನು ಯಾರು ಕ್ಯಾರೆ ಅನ್ನುವುದಿಲ್ಲ…ಆದರೆ..ಈ ಜೀವಗಳು ಸಾವಿನ ಮನೆ ತಟ್ಟುವ ರೀತಿ ಮಾತ್ರ ಘನಘೋರ ಶಿಕ್ಷೆಯಂತಾಗಿರುತ್ತೆ..ಸಮಾಜದ ನಡುವೆ ಹಾಡಹಗಲೇ..ಎಲ್ಲರ ಸಮ್ಮುಖದಲ್ಲಿ ಈ ಜೀವಗಳು ಒದ್ದಾಡುವುದಕ್ಕೂ ಆಗದ ರೀತಿಯಲ್ಲಿ ನಿತ್ರಾಣಗೊಂಡು..ಉಸಿರು ಚೆಲ್ಲುತ್ತಿವೆ…ಇಂತಹ ಅನಾಥ ಜೀವಗಳಿಗೆ ಕಾನೂನಿನ ಪ್ರಕಾರ ಮುಕ್ತಿ ಕೊಡುವವರು..ಮಾನವೀಯತೆ ಮೆರೆಯುವವರು ನಮ್ಮ ಪೊಲೀಸರೇ.

ಮೂರು ವರ್ಷಗಳಲ್ಲಿ 269 ಅನಾಥ ಶವಗಳ ಅಂತ್ಯ ಸಂಸ್ಕಾರ ಮಾಡಿದ ಪೊಲೀಸರು

ಪೊಲೀಸ್ ಅಂಕಿ ಅಂಶದ ಪ್ರಕಾರ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಈವರೆಗೆ 269 ಅನಾಥ ಶವಗಳನ್ನು ಪೊಲೀಸರು ಅಂತ್ಯ ಸಂಸ್ಕಾರ ಮಾಡಿದ್ದಾರೆ.

  • 2020 ರಲ್ಲಿ ದಾಖಲಾದ ಅನಾಮಧೆಯ ಯುಡಿಆರ್ ಪ್ರಕರಣಗಳಲ್ಲಿ 102 ಶವಗಳು,
  • 2021 ರಲ್ಲಿ 84 ಅನಾಥ ಶವಗಳು
  • 2022 ರ ಸಾಲಿನಲ್ಲಿ ಈವರೆಗೆ 73 ಅನಾಥ ಶವಗಳನ್ನು ಪೊಲೀಸರು ಅಂತ್ಯ ಸಂಸ್ಕಾರ ಮಾಡಿದ್ದಾರೆ.

ನದಿಯಲ್ಲಿ ಸಿಗುವ ಶವಗಳನ್ನು ಆಸ್ಪತ್ರೆ ಸಾಗಿಸಿ, ಅಂತ್ಯ ಸಂಸ್ಕಾರ ಮಾಡುವುದು ಸವಾಲಿನ ಕೆಲಸ

ನದಿಗಳಲ್ಲಿ ಸಿಗುವ ಶವಗಳನ್ನು ನೋಡಿದಾಗ.ಎಂತವರು ಬೆಚ್ಚಿಬೀಳುತ್ತಾರೆ.ಮೀನುಗಳು ಮುಕ್ಕಿತಿಂದ ಶವಗಳು..ವಿಕಾರವಾಗಿರುತ್ತೆ…ಅದರ ವಾಸನೆ ತಡೆದುಕೊಳ್ಳಲು ಸಾಧ್ಯವಾಗೋದಿಲ್ಲ..ಇಂತಹ ಸಂದರ್ಭದಲ್ಲಿ ನಮ್ಮ ಪೊಲೀಸರು..ಹಿಂದೆ ಮುಂದೆ ನೋಡದೆ,ತಾವೇ ಶವವನ್ನು ಮೇಲೆತ್ತಿ ಆಸ್ಪತ್ರೆಗೆ ಸಾಗಿಸುತ್ತಾರೆವಾರಸುದಾರರು ಬಾರದಿದ್ದಾಗ ತಾವೇ ಮುಂದೆ ನಿಂತು ಅಂತ್ಯ ಸಂಸ್ಕಾರ ನೆರವೇರಿಸುತ್ತಾರೆ.

ಅನಾಥ ಶವಗಳಿಗೆ ಸರ್ಕಾರಿ ಗೌರವ

ಪುಟ್ ಪಾತ್, ಬಸ್ ಸ್ಟ್ಯಾಂಡ್, ನದಿಯಲ್ಲಿ ಸಿಗುವ ಅನಾಥ ಶವಗಳನ್ನು ಶವಪರೀಕ್ಷೆ ನಡೆಸಿ ಒಂದು ವಾರ ಸರ್ಕಾರಿ ಆಸ್ಪತ್ರೆಯಲ್ಲಿ ಐಡೆಂಟಿಪೈ ಗಾಗಿ ಇಡಲಾಗುತ್ತೆ.ಶವ ಪತ್ತೆಯಾದ ತಕ್ಷಣ..ಸಂಬಂಧಿಕರ ಪತ್ತೆಗಾಗಿ ಪತ್ರಿಕಾ ಪ್ರಕಟಣೆಯನ್ನು ಪೊಲೀಸರು ನೀಡುತ್ತಾರೆ.ಒಂದು ವಾರ ಕಾಲ ಶವ ಗುರುತಿಸಲು .ಯಾವ ಸಂಬಂಧಿಕರು ಬಾರದಿದ್ದಾಗ, ಇಲಾಖೆಯ ಅನುಮತಿ ಮೇರೆಗೆ ಸರ್ಕಾರಿ ನಿಯಮದಂತೆ ಮಣ್ಣಿನಲ್ಲಿ ಹೂತು ಅಂತ್ಯ ಸಂಸ್ಕಾರ ನೆರವೇರಿಸುತ್ತಾರೆ.ಹಿಂದು ನಿಯಮದಂತೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ. ಮುಸ್ಲಿಂ ಸಮುದಾಯದ ಶವಗಳು ಐಡೈಂಟಿಫೈ ಆದರೆ, ಅದಕ್ಕೆ ಆ ಸಮುದಾಯದ ಮುಖಂಡರು ಪೊಲೀಸರಿಗೆ ಸಾಥ್ ನೀಡುತ್ತಾರೆ.ಅಲ್ಲಿ ಕೂಡ ಸರ್ಕಾರಿ ನಿಯಮದಂತೆ ದಫನ್ ಮಾಡಲಾಗುತ್ತದೆ. ಒಮ್ಮೆ ಮಣ್ಣು ಪಾಲಾದ ಅನಾಥ ಶವವನ್ನು ಹೊರತೆಗೆಯಬೇಕೆಂದರೆ ಮತ್ತೆ ಅದಕ್ಕೆ ಎಸಿ..ಇಲ್ಲವೇ ತಹಸಿಲ್ದಾರ್ ಅನುಮತಿ ಬೇಕು..ಪೊಲೀಸರು ಸತ್ತ ಅನಾಥ ಶವಗಳ ಸಂಪೂರ್ಣ ದಾಖಲಾತಿಯನ್ನು ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ.ವಾರಸುದಾರರು ತಡವಾಗಿ ಬಂದು, ಪೊಲೀಸರ ಬಳಿಯಿದ್ದ ದಾಖಲೆ ಪರಿಶೀಲಿಸಿ, ಇವರು ನಮ್ಮವರೇ ಎಂದು ಗುರುತಿಸಿದಾಗ,ಅಂತಹ ಶವಗಳನ್ನು ಮಣ್ಣಿನಿಂದ ಮೇಲೆತ್ತಲು ಎಸಿಯವರ ಅನುಮತಿ ಪಡೆಯಬೇಕಾಗುತ್ತದೆ. ಇಲ್ಲಿ ಬದುಕಿದ್ದಾಗ ಅನಾಥರಿಗೆ ಸಿಗದ ಗೌರವ ಸತ್ತಾಗ ಸಿಗುತ್ತೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಬಹಳ ದಿನಗಳ ಕಾಲ ಬಾಡಿ ಇಡಲು ಸಾಧ್ಯವಿಲ್ಲ.

ವಿವಿಧ ಕಾರಣಗಳಿಂದ ಸಾಯುವ ಅನಾಥ ಶವಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಬಹಳ ದಿನಗಳ ಕಾಲ ಇಡಲು ಸಾಧ್ಯವಿಲ್ಲ.ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿಯೇ..ಶವಗಳನ್ನು ಇಡಲು ಪ್ರೀಜರ್ ಇನ್ನು ಬೇಕು ಎಂಬ ಕೂಗಿದೆ.ಆಸ್ಪತ್ರೆಯಲ್ಲಿ ಸಾವನ್ನಪ್ಪುವ, ಅಪಘಾತದಲ್ಲಿ ಸಾಯುವ, ಆತ್ಮಹತ್ಯೆ ಮಾಡಿಕೊಳ್ಳುವ ಹಲವು ಪ್ರಕರಣಗಳಲ್ಲಿ ಶವಗಳನ್ನು ಶವಾಗಾರದಲ್ಲಿ ಇಡಲಾಗುತ್ತೆ.ಇದರ ನಡುವೆ ಯುಡಿಆರ್ ಪ್ರಕರಣಗಳಲ್ಲಿ ಪತ್ತೆಯಾದ ಅನಾಥ ಶವಗಳನ್ನು ಇಡಲು ಬಹಳ ಕಷ್ಟವಾಗುತ್ತದೆ.

ಅನಾಥರು ಎನ್ನುವುದೇ ದುರಂತದ ಸಂಗತಿ

ಪ್ರತಿ ವರ್ಷ ದಾಖಲಾಗುವ ನೂರಕ್ಕೂ ಹೆಚ್ಚು ಯುಡಿಆರ್ ಪ್ರಕರಣಗಳಲ್ಲಿ ಅನಾಥ ಶವಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಇದು ನಿಜಕ್ಕೂ ಆತಂಕ ಪಡುವ ವಿಷಯ.ರಸ್ತೆಗಳಲ್ಲಿ ಇಂದು ಭಿಕ್ಷಾಟನೆ ಮಾಡುತ್ತಿರುವವರು..ಒಪ್ಪತ್ತಿನ ಊಟಕ್ಕಾಗಿ ಅಲೆಯುತ್ತಿರುವವರು,ವಿಕಲ ಚೇತನರು, ಬುದ್ದಿಮಾಂದ್ಯರು, ಮಾನಸೀಕ ಅಸ್ವಸ್ಥರು, ಹೆಚ್ಚಾಗಿ ಶಿವಮೊಗ್ಗದಲ್ಲಿ ಕಾಣಸಿಗುತ್ತಿದ್ದಾರೆ.ಇಂದು ಕಂಡವರು ನಾಳೆ ಅನಾಥ ಶವವಾಗಿ ಹೋಗುತ್ತಿದ್ದಾರೆ. ಶಿವಮೊಗ್ಗದ ಹೊರವಲಯದಲ್ಲಿರುವ ನಿರ್ಗತಿಕರ ಕೇಂದ್ರದ ಅಧಿಕಾರಿಗಳು ಈ ಬಗ್ಗೆ ಗಮನ ಹರಸಬೇಕಿದೆ.

ಪೊಲೀಸರಿಗೊಂದು ಧನ್ಯವಾದ

ಪ್ರತಿದಿನ ನಮ್ಮ ಕಣ್ಣ ಮುಂದೆ ಹಾದುಹೋಗುವ ಹಸಿದ ಜೀವಗಳಿಗೆ ಅಂತಿಮವಾಗಿ ಆಪದ್ಬಾಂದವರಾಗಿ ಸಿಗುವವರೇ ಪೊಲೀಸರು,,ಸಾರ್ ಊಟ ಅಂದಾಗ ಊಟ ಕೊಟ್ಟವರಿದ್ದಾರೆ…ಸಾರ್ ನೀರು ಅಂದಾಗ ನೀರು ಕೊಟ್ಟವರಿದ್ದಾರೆ. ಪರ ಊರಿನಿಂದ ಬಂದವರಿಗೆ ಹಣಕೊಟ್ಟು ಬಸ್ ಹತ್ತಿಸಿದ್ದಾರೆ..ರಾತ್ರಿ ಪಾಳಿಯದ ಪೊಲೀಸರ ಮಾನವೀಯತೆ..ಕತ್ತಲಲ್ಲೇ ಕಮರಿ ಹೋಗುತ್ತೆ.