ಶಿವಮೊಗ್ಗದಲ್ಲಿಯು ಕಾಣಿಸಿದ ಆಕಾಶದ ಸೀರಿಯಲ್​ ಸೆಟ್​/ ಏನಿದರ ರಹಸ್ಯ ಗೊತ್ತಾ?SpaceX company's satellites

ಆಕಾಶದಲ್ಲಿ ಸೀರಿಯಲ್​ ಸೆಟ್​ನಂತೆ ಕಾಣುವ ದೀಪಗಳು ಸರತಿಸಾಲಿನಲ್ಲಿ ಹೋದಂತಹ ಅನುಭವ ಇವತ್ತು ಶಿವಮೊಗ್ಗದಲ್ಲಿಯು ಆಗಿದೆ. ತೀರ್ಥಹಳ್ಳಿಯಲ್ಲಿ ಕಾಣಲು ಸಿಕ್ಕ ದೃಶ್ಯದ ಫೋಟೋವನ್ನು ನಾವು ವರದಿ ಮಾಡಿದ್ದೇವೆ. Elon Musk's SpaceX company's satellites,

ಶಿವಮೊಗ್ಗದಲ್ಲಿಯು ಕಾಣಿಸಿದ ಆಕಾಶದ ಸೀರಿಯಲ್​ ಸೆಟ್​/ ಏನಿದರ ರಹಸ್ಯ ಗೊತ್ತಾ?SpaceX company's satellites
Elon Musk's SpaceX company's satellites,

ಆಕಾಶದಲ್ಲಿ ಆಗಾಗ ಏನೇನೋ ಕಾಣಿಸಿಕೊಳ್ಳುತ್ತವೆ. ನೋಡುತ್ತಿರುವಾಗಲೇ ಮಿಂಚಿ ಮರೆಯಾಗುವಂತಹ ಅದ್ಭುತಗಳು ಅದೆಷ್ಟೊ ರಾತ್ರಿಗಳ ಆಗಸದಲ್ಲಿ ನಡೆದು ಹೋಗಿವೆ. ಅದರಲ್ಲಿಯು ನಕ್ಷತ್ರ ಉದುರಿಬಿದ್ದಂತಹ ಅನುಭವಗಳು ಜನಮಾನಸಕ್ಕೆ ಹೊಸದೇನಲ್ಲ

ಕದ್ದ ಚಿನ್ನದಿಂದಲೇ ಕಳ್ಳರಿಗೆ ಮೋಸ/ ಮಹಿಳೆ ಎದುರು ಯಾಮಾರಿದ ಸರಗಳ್ಳರು

ಆದರೆ, ಆಕಾಶದಲ್ಲಿ ಸೀರಿಯಲ್​ ಸೆಟ್​ನಂತಹ ಲೈಟುಗಳು ಹೊಳೆಯುತ್ತಾ ಸಾಗಿದ ಕ್ಷಣಗಳು ಜನರಿಗೆ ಹೊಸ ಹೊಸ ಅಚ್ಚರಿ ಮೂಡಿಸುತ್ತಿದೆ. ಅದೇನು ಅಂತದ್ದು ಎನ್ನುವುದರ ಸತ್ಯವನ್ನು ಹೇಳುತ್ತೇವೆ. ಅದಕ್ಕೂ ಮೊದಲು ಇವತ್ತಿನ ಘಟನೆಗಳನ್ನು ಹೇಳಿ ಬಿಡುತ್ತೇವೆ ಕೇಳಿ

ಇದನ್ನು ಸಹ ಓದಿ: ಬೈಕ್​ ಓಡಿಸುವ ಮಕ್ಕಳ ಪೋಷಕರಿಗೆ ಎಸ್​ಪಿ ಮಿಥುನ್​ ಕುಮಾರ್ ಹೇಳಿದ್ದೇನು? ಹೆತ್ತವರಿಗೆ ಎಚ್ಚರಿಕೆ ಸಂದೇಶ

ಅಂದಹಾಗೆ, ಆಕಾಶದಲ್ಲಿ ಸೀರಿಯಲ್​ ಸೆಟ್​ನಂತೆ ಕಾಣುವ ದೀಪಗಳು ಸರತಿಸಾಲಿನಲ್ಲಿ ಹೋದಂತಹ ಅನುಭವ ಇವತ್ತು ಶಿವಮೊಗ್ಗದಲ್ಲಿಯು ಆಗಿದೆ. ತೀರ್ಥಹಳ್ಳಿಯಲ್ಲಿ ಕಾಣಲು ಸಿಕ್ಕ ದೃಶ್ಯದ ಫೋಟೋವನ್ನು ನಾವು ವರದಿ ಮಾಡಿದ್ದೇವೆ. ಇದರ ಜೊತೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಶಿವಮೊಗ್ಗ ಉತ್ತರ ಕನ್ನಡ ಸೇರಿದಂತೆ ಮಲೆನಾಡು ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆಕಾಶದ ಸೀರಿಯಲ್​ ಸೆಟ್ ದೀಪಗಳ ಸರತಿ ಸಾಲು ಕಾಣಿಸಿದೆ. 

ಕೆಲವೆಡೆ 60 ಸೆಕೆಂಡ್, ಕೆಲವಡೆ 15 ಸೆಕೆಂಡ್/ ಸರ್ಕಲ್​​ಗಳಲ್ಲಿ ಟ್ರಾಫಿಕ್ ಸಿಗ್ನಲ್​ ಗೊಂದಲಗಳಿಗೆ ಎಸ್​ಪಿ ಮಿಥುನ್ ಕುಮಾರ್​ ಕೊಟ್ಟ ಉತ್ತರ ಇಲ್ಲಿದೆ

ಕತ್ತಲನ್ನು ಸೀಳಿದಂತೆ ಕಾಣುವಂತ ದೀಪಗಳ ಹಿಂದಿನ ಸ್ಟೋರಿ ಏನು ಗೊತ್ತಾ? 

ಓದುಗರೆ ಆಕಾಶದಲ್ಲಿ ಕಾಣಸಿಕ್ಕಿರುವ ದೀಪದ ಮಾಲೆಯು ನಕ್ಷತ್ರಗಳೂ ಅಲ್ಲ,ಜೆಟ್. ವಿಮಾನಗಳೂ ಅಲ್ಲ.ಅದು ಎಲಾನ್​ ಮಾಸ್ಕ್​ ರ ಸ್ಪೇಸ್​ ಎಕ್ಸ್​ ಕಂಪನಿಯ ಉಪಗ್ರಹಗಳು, ಹೌದು, ಹಳ್ಳಿ ಹಳ್ಳಿಗೂ ಇಂಟರ್​ನೆಟ್​ ನೀಢುವ ಉದ್ದೇಶದಿಂದ ಎಲಾನ್​ ಮಾಸ್ಕ್​ ಹಾರಿಸಿ ಬಿಟ್ಟಿರುವ ಸರಣಿ ಉಪಗ್ರಹಗಳು . ಈ ಉಪಗ್ರಹಗಳು ಆಕಾಶದಲ್ಲಿ ಅಂದರೆ ಭೂಮಿಯಿಂದ ಕೇವಲ 500 ಕಿಲೋಮೀಟರ್ ಅಂತರದಲ್ಲಿ  ಸುತ್ತುಹಾಕುತ್ತಿರುತ್ತವೆ. ಭೂಮಿಗೆ ಪ್ರದಕ್ಷಿಣೆ ಹಾಕುವ ಈ ಉಪಗ್ರಹಗಳ ರಿಫ್ಲೆಕ್ಟರ್​ಗಳು ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತಿರುವುದರಿಂದ ಇವುಗಳು ಪುಟಾಣಿ ಚಂದ್ರನ ಸರಣಿ ಸಾಲಿನಂತೆ ಕಾಣುತ್ತವೆ. 2021 ರಲ್ಲಿ ಎಲಾನ್​ ಮಾಸ್ಕ್​ ಈ ಕಂಪನಿಯನ್ನು ಆರಂಭಿಸಿದ್ದು, 1500 ಹೆಚ್ಚು ಸ್ಟಾರ್​ ಲಿಂಕ್​ಗಳು( ಉಪಗ್ರಹಗಳ ಗುಂಪು) ಉಡಾವಣೆ ಮಾಡಿದೆ.   

ಕೆಲವೆಡೆ 60 ಸೆಕೆಂಡ್, ಕೆಲವಡೆ 15 ಸೆಕೆಂಡ್/ ಸರ್ಕಲ್​​ಗಳಲ್ಲಿ ಟ್ರಾಫಿಕ್ ಸಿಗ್ನಲ್​ ಗೊಂದಲಗಳಿಗೆ ಎಸ್​ಪಿ ಮಿಥುನ್ ಕುಮಾರ್​ ಕೊಟ್ಟ ಉತ್ತರ ಇಲ್ಲಿದೆ

ವಿಷಯ ಏನಂದರೆ, ಈ ಕೃತಕ ಸೀರಿಯಲ್​ ಸೆಟ್​ನಿಂದಾಗಿ ಬೆಳದಿಂಗಳಿಲ್ಲದ ಕತ್ತಲಲ್ಲಿ ನಕ್ಷತ್ರಗಳ ಹೊಳಪಿನ ಅಂದ ಸವಿಯಲು ಕಷ್ಟವಾಗ್ತಿದೆ ಎಂಬುದು ಕೆಲವರ ಅನುಭವವಾದರೆ, ವಿಜ್ಞಾನಿಗಳು, ಇದರಿಂದ  ಅಧ್ಯಯನಕ್ಕೆ ಅಡ್ಡಿ ಎನ್ನುತ್ತಿದ್ದಾರೆ. ಆದರೆ ಜನಮನ ಪ್ರತಿಸಲವೂ ಆಕಾಶದಲ್ಲಿ ಬಿಳಿ ಬುಡ್ಡಿದೀಪಗಳ ಸಾಲು ನೋಡಿ, ಏನೋ ಅಚ್ಚರಿ ಕಂಡಿದೆ, ಅದೃಷ್ಟವೇ ಇರಬೇಕು ಎಂದು ಯೋಚಿಸುತ್ತಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ