24 ಗಂಟೆಯಲ್ಲಿ ಸಮಸ್ಯೆ ಬಗೆಹರಿಸಿದ ಮಿನಿಸ್ಟರ್‌ ಮಧು ಬಂಗಾರಪ್ಪ | ಮಕ್ಕಳ ಸಮಸ್ಯೆಗೆ ಸಚಿವರೇ ಬರಬೇಕಾಯ್ತು

Minister Madhu Bangarappa has provided a solution to the mid-day meal problem at Maulana Azad School

24 ಗಂಟೆಯಲ್ಲಿ ಸಮಸ್ಯೆ ಬಗೆಹರಿಸಿದ ಮಿನಿಸ್ಟರ್‌ ಮಧು ಬಂಗಾರಪ್ಪ | ಮಕ್ಕಳ ಸಮಸ್ಯೆಗೆ ಸಚಿವರೇ ಬರಬೇಕಾಯ್ತು
Minister Madhu Bangarappa , mid-day meal problem at Maulana Azad School

SHIVAMOGGA | MALENADUTODAY NEWS | Jul 2, 2024  ಮಲೆನಾಡು ಟುಡೆ  

ಅಲ್ಪ ಸಂಖ್ಯಾತ ಇಲಾಖೆಯ ಅಡಿಯಲ್ಲಿ ಬರುವ ಮೌಲಾನಾ ಆಜಾದ್‌ ಸ್ಕೂಲ್‌ನ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿಲ್ಲ ಎಂದು ಸ್ವತಃ ವಿದ್ಯಾರ್ಥಿಗಳು ಉಸ್ತುವಾರಿ ಸಚಿವ ಮಧು ಬಂಗಾರಪ್ಪ ರನವರಿಗೆ ಜನಸ್ಪಂದನಾ ವೇದಿಕೆಯಲ್ಲಿ ಅಹವಾಲು ಸಲ್ಲಿಸಿದ್ದರು.ಮಕ್ಕಳ ದೂರು ಕೇಳುತ್ತಲೇ ಆಶ್ಚರ್ಯಗೊಂಡ ಮಧು ಬಂಗಾರಪ್ಪರವರು ಅಧಿಕಾರಿಗಳನ್ನ ವಿಚಾರಿಸಿದ್ದರು. ಆನಂತರ ಸಂಬಂಧಪಟ್ಟವರಿಗೆ ಸೂಚನೆ ಕೊಟ್ಟು ಬಿಸಿಯೂಟದ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದ್ದರು. 

ಇದರ ಪರಿಣಾಮವಾಗಿ  ಮೌಲಾನಾ ಆಜಾದ್ ಮಾದರಿ ಶಾಲಾ ಮಕ್ಕಳಿಗೆ ಬಿಸಿಯೂಟ ಲಭ್ಯವಾಗಿದೆ. ಲಷ್ಕರ್ ಮೊಹಲ್ಲಾದ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಯು ಒಂದು ವರ್ಷದ ಹಿಂದೆ ಸೋಮಿನಕೊಪ್ಪದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು ಕಾರ್ಯ ನಿರ್ವಹಿಸುತ್ತಿದೆ. ಆದರೆ ಅಲ್ಲಿಯ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆ ಇರಲಿಲ್ಲ. ಇದರ ಬಗ್ಗೆ ಯಾರು ತಲೆ ಕೆಡಿಸಿಕೊಂಡಿರಲಿಲ್ಲ. ಬೇರೆ ಮಕ್ಕಳಿಗೆ ಬಿಸಿಯೂಟ ಸಿಗುತ್ತಿದ್ದು ತಮಗೆ ಸಿಗದ ತಾರತಮ್ಯದ ಬಗ್ಗೆ ಮಕ್ಕಳು ಸಚಿವರ ಬಳಿ ದೂರು ಸಲ್ಲಿಸಿದ್ದರು.  ಜೂ. 28 ರಂದು ನೆಡಿದಿದ್ದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪೋಷಕರು ಹಾಗೂ ಮಕ್ಕಳು ಮನವಿ ಮಾಡಿದ್ದರು. ಅದರಂತೆ ಜೂ.29 ರಿಂದ ಹತ್ತಿರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಿಂದ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

Students at Maulana Azad School complained to Minister Madhu Bangarappa that they were not being provided with mid-day meals. The minister, surprised by the complaint, inquired with the officials and instructed them to arrange for mid-day meals. As a result, mid-day meals are now being provided to the students.