ಮಂಟಪದವರೆಗೂ ಹರಿದ ನೀರು | ಶಿವಮೊಗ್ಗದಲ್ಲಿ ತುಂಗಾ ನದಿಯ ಅಬ್ಬರ ಹೇಗಿದೆ ಗೊತ್ತಾ

Tunga River in Shivamogga is rising

ಮಂಟಪದವರೆಗೂ ಹರಿದ ನೀರು | ಶಿವಮೊಗ್ಗದಲ್ಲಿ ತುಂಗಾ ನದಿಯ ಅಬ್ಬರ ಹೇಗಿದೆ ಗೊತ್ತಾ
Tunga River in Shivamogga

SHIVAMOGGA | MALENADUTODAY NEWS | Jul 4, 2024  ಮಲೆನಾಡು ಟುಡೆ   

ತುಂಗಾ ನದಿ ಶಿವಮೊಗ್ಗ ಸಿಟಿಯಲ್ಲಿ ಉಕ್ಕುವ ಹಂತಕ್ಕೆ ಬರುತ್ತಿದೆ. ಎರಡು ದಿನಗಳ ಹಿಂದೆ ನದಿಯಲ್ಲಿ ಅಷ್ಟಾಗಿ ನೀರಿರಲಿಲ್ಲ. ನಿನ್ನೆದಿನ ನದಿಯಲ್ಲಿ ಬರೋಬ್ಬರಿ ನೀರು ಹರಿಯುತ್ತಿದೆ. ನದಿ ನೀರಿನ ಬಣ್ಣ ಬದಲಾಗಿದ್ದು ಹಳದಿ ಬಣ್ಣದ ಜಲಾರಾಶಿಯನ್ನು ನೋಡುವುದಕ್ಕೆ ಸಂತೋಷವಾಗುತ್ತಿದೆ. ಹಳೆ ಸೇತುವೆ ಹೊಸಸೇತುವೆಗಳಲ್ಲಿ ಜನರು ತುಂಗಾನದಿಯ ರೌದ್ರ ದೃಶ್ಯಗಳನ್ನ ನೋಡಿಕೊಂಡು ಮುಂದಕ್ಕೆ ಸಾಗುತ್ತಿದ್ದಾರೆ. 

malenadutoday

ಇನ್ನೂ ಶಿವಮೊಗ್ಗದಲ್ಲಿ ಕೊರ್ಪಳ್ಳಯ್ಯನ ಛತ್ರದ ಬಳಿ ಇರುವ ಮಂಟಪ ಮುಳುಗುವುದು ಶಿವಮೊಗ್ಗದ ಮಟ್ಟಿಗೆ ತುಂಗಾ ನದಿ ಭರ್ತಿಯಾಗಿದೆ ಎಂಬುದಕ್ಕೆ ಸಾಕ್ಷಿ. ಈ ನಿಟ್ಟಿನಲ್ಲಿ ನೋಡುವುದಾದರೆ ಮಂಟಪ ಮುಳುಗಲು ಕೆಲವೇ ಅಡಿ ಭಾಕಿಯಿದ್ದು ತುಂಗಾ ಜಲಾಶಯದ ಹೊರಹರಿವು ಇನ್ನಷ್ಟು ಹೆಚ್ಚಾದರೆ, ನದಿಗೆ ಉಕ್ಕೇರುವುದರಲ್ಲಿ ಅಚ್ಚರಿಯಿಲ್ಲ. 

malenadutoday

The Tunga River in Shivamogga is rising and nearing flood stage.  The rising water level is evident near Korpallayyan Chhatra,