ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಚುನಾವಣೆ | ರಿಸಲ್ಟ್‌ ಏನಾಯ್ತು ಗೊತ್ತಾ? ಯಾರೆಲ್ಲಾ ಗೆದ್ದರು?

Shivamogga District Lawyers Association election results

ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಚುನಾವಣೆ | ರಿಸಲ್ಟ್‌ ಏನಾಯ್ತು ಗೊತ್ತಾ? ಯಾರೆಲ್ಲಾ ಗೆದ್ದರು?
Shivamogga District Lawyers Association

SHIVAMOGGA | MALENADUTODAY NEWS | Jul 6, 2024  ಮಲೆನಾಡು ಟುಡೆ 

ಮೊನ್ನೆಯಷ್ಟೆ ನಡೆದಿದ್ದ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಚುನಾವಣೆಯ ಮತ ಎಣಿಕೆ ಇವತ್ತು ಮುಗಿದಿದೆ. ಜಿಲ್ಲಾ ವಕೀಲರ ಸಂಘದ ಚುನಾವಣೆಯಲ್ಲಿ ವಕೀಲರಾದ ಜಿ.ಆರ್.ರಾಘವೇಂದ್ರ ಸ್ವಾಮಿ ಗೆಲುವು ಸಾಧಿಸಿದ್ದಾರೆ. ಅವರು ಒಟ್ಟಾರೆ 561 ಮತಗಳನ್ನ ಪಡೆದಿದ್ದಾರೆ. ಅವರ ಪ್ರತಿಸ್ಪರ್ಧಿ 173 ವೋಟ್‌ ಪಡೆದಿದ್ದಾರೆ. 

ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ 

ಇನ್ನೂ  ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ.ಎಸ್‌.ಎ  ಆಯ್ಕೆಯಾಗಿದ್ದು ಅವರು 428 ಮತ ಪಡೆದಿದ್ದಾರೆ. ಉಳಿದಂತೆ  ಕೆ.ಎಸ್.ದೇವರಾಜ 204 ಜಿ.ಎಸ್.ಶಿವಪ್ಪ 96 ಮತಗಳನ್ನು ಪಡೆದಿದ್ದಾರೆ. ಖಜಾಂಚಿ ಸ್ಥಾನಕ್ಕೆ ಮಾಲ್ತೇಶ್‌ ಆಯ್ಕೆಯಾಗಿದ್ದು ಚುನಾವಣೆಯಲ್ಲಿ ಅವರು 366 ಮತಗಳನ್ನ ಪಡೆದು ಪ್ರತಿಸ್ಪರ್ಧಿ ಕೆ.ಎಸ್.ಉಮೇಶ್‌ (13 ಮತಗಳು ) ರನ್ನು ಸೋಲಿಸಿದ್ದಾರೆ. 

ನಿರ್ದೇಶಕರ ಪಟ್ಟಿ

ಉಳಿದಂತೆ ನಿರ್ದೇಶಕರಾಗಿ ಆಯ್ಕೆಯಾದವರ ವಿವರ ಹೀಗಿದೆ.  ನಿರಂಜನ್‌ ಮೋಹಿತೆ.ಹೆಚ್‌  421 ಮತಗಳು, ಹೆಚ್.ಎಂ.ಜನಾರ್ದನ್‌ 417ಮತಗಳು,  ಅತಾವುಲ್ಲಾ ಖಾನ್‌ 376 ಮತಗಳು ಕಿಲಕ ಕುಮಾರಿ.ಎಂ 371ಮತಗಳು, ನಂದಿನಿ ದೇವಿ.ಎನ್‌.ಆರ್‌ 349 ಮತಗಳು, ಜಗದೀಶ್‌.ಎಂ 249 ಮತಗಳನ್ನ ಪಡೆದಿದ್ದಾರೆ. 

The Shivamogga District Lawyers' Association election results are in. G.R. Raghavendra Swamy won the presidency with 561 votes, while his opponent received 173 votes. Srinivas.S.A was elected as General Secretary with 428 votes, and Maltesh won the position of Treasurer with 366 votes. The newly elected directors include Niranjan Mohite.H (421 votes), H.M. Janardhan (417 votes), Ataullah Khan (376 votes), Kilak Kumari.M (371 votes), Nandini Devi.N.R (349 votes), and Jagadish.M (249 votes).