ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮೊದಲೇ ಶಿವಮೊಗ್ಗದ ಮೆಗಾ ಎಲೆಕ್ಷನ್‌ಗೆ ಸಿದ್ಧವಾಗುತ್ತಿರುವ ಕೆಎಸ್‌ ಈ‍ಶ್ವರಪ್ಪ | BIG POLITICAL EXCLUSIVE

Eshwarappa is preparing for future elections by focusing on strengthening his Rashtra Bakta Balaga organization within Shivamogga city limits.

ಲೋಕಸಭೆ ಚುನಾವಣೆ  ಫಲಿತಾಂಶಕ್ಕೂ ಮೊದಲೇ ಶಿವಮೊಗ್ಗದ ಮೆಗಾ ಎಲೆಕ್ಷನ್‌ಗೆ ಸಿದ್ಧವಾಗುತ್ತಿರುವ ಕೆಎಸ್‌ ಈ‍ಶ್ವರಪ್ಪ | BIG POLITICAL EXCLUSIVE
Eshwarappa, Rashtra Bakta Balaga ,Shivamogga city

SHIVAMOGGA | MALENADUTODAY NEWS | May 25, 2024  ಮಲೆನಾಡು ಟುಡೆ 

ಲೋಕಸಭಾ ಚುನಾವಣೆ ಬಳಿಕವೂ ಕೆಎಸ್‌ ಈಶ್ವರಪ್ಪನವರ ನಿವಾಸ ಬಿಜೆಪಿ ಬಂಡಾಯದ ಹಾಟ್‌ಸ್ಪಾಟ್‌ ಆಗಿದೆ ಎಂಬುದರ ಕುರಿತಾಗಿ ಮಲೆನಾಡು ಟುಡೆಯಲ್ಲಿ ವರದಿ ಓದಿರುತ್ತೀರಿ. ಈ ವರದಿ ಅದರ ಮುಂದುವರಿದ ಭಾಗ. ಅಂದಹಾಗೆ, ಇವತ್ತಿನ ವಿಷಯ ಏನಂದರೆ, ಕೆಎಸ್‌ ಈಶ್ವರಪ್ಪನವರು ಮತ್ತೊಂದು ಚುನಾವಣೆಗೆ ಸಿದ್ದರಾಗುತ್ತಿದ್ದಾರೆ. ಹಾಗಂತ ಅದು ಈಗ ನಡೆಯುತ್ತಿರುವ ಎಂಎಲ್‌ಸಿ ಚುನಾವಣೆಯಲ್ಲ. ಲೋಕಸಭಾ ಚುನಾವಣೆ ಫಲಿತಾಂಶಕ್ಕೂ ಮೊದಲು ಕೆಎಸ್‌ ಈ‍ಶ್ವರಪ್ಪ ಮತ್ತೊಂದು ಎಲೆಕ್ಷನ್‌ಗೆ ಅಖಾಡ ಸಿದ್ದಪಡಿಸುತ್ತಿದ್ದಾರೆ. 

ಶಿವಮೊಗ್ಗ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ ಸನ್ನಿವೇಶಗಳು ಹೇಗೂ ಬದಲಾಗಬಹುದು. ಅಂದಿನ ಪರಿಸ್ಥಿತಿ ಹಾಗೂ ಕಾಲಘಟ್ಟಕ್ಕೆ ತಕ್ಕಂತೆ ಬಿಜೆಪಿಯೊಳಗಿನ ರಾಜಕಾರಣ ತನ್ನೆದ ಆದ ಮಜಲು ಪಡೆಯಬಹುದು. ಆದಾಗ್ಯು ಕೆಎಸ್‌ ಈಶ್ವರಪ್ಪ ನವರು ಫಲಿತಾಂಶವನ್ನು ಕಾಯುತ್ತಿಲ್ಲ. ಅದರ ಗೊಡವೆಯಲ್ಲಿ ಅವರಿಲ್ಲ. ಬದಲಾಗಿ ತಮ್ಮನ್ನ ನಂಬಿ ಬಂದವರು ಹಾಗೂ ತಮ್ಮವರ ಭವಿಷ್ಯದ ಸಂಘಟನೆ ಬಗ್ಗೆ ಡಿಪಿಆರ್‌ ಸಿದ್ದಪಡಿಸಿದ್ದಾರೆ. ಇದಕ್ಕಾಗಿ ಸಾಲು ಸಾಲು ಸರಣಿ ಸಭೆಗಳು ಅವರ ನಿವಾಸದಲ್ಲಿ ನಡೆದಿದೆ. 

ಮಲೆನಾಡು ಟುಡೆಗೆ ಸಿಕ್ಕ ಮಾಹಿತಿಗಳ ಪ್ರಕಾರ, ಕೆಎಸ್‌ ಈಶ್ವರಪ್ಪ ರಾಷ್ಟ್ರ ಭಕ್ತ ಬಳಗವನ್ನು ತಮ್ಮದೆ ನೇತೃತ್ವದ ಸಂಘಟನೆಯಾಗಿ ಬೆಳೆಸುವ ಇರಾದೆಯಲ್ಲಿದ್ದಾರೆ. ಈ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸ್ಥಾಪಿಸಿದ್ದ ಅವರು ಆನಂತರ ನಾಯಕರ ಮನವೊಲಿಕೆಯಿಂದ ಅದರಿಂದ ದೂರವಾದರು. ಈ ಸಲ ಆ ತಪ್ಪನ್ನ ಮಾಡಲಿಚ್ಚಿಸದ ಕೆಎಸ್‌ಇ, ರಾಷ್ಟ್ರ ಭಕ್ತ ಬಳಗವನ್ನು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಶಕ್ತಿಶಾಲಿಯಾಗಿಸಲು ಮುಂದಾಗಿದ್ದಾರೆ. ಅದರಾಚೆಗೂ ಸಂಘಟನೆ ತೆಗೆದುಕೊಂಡು ಹೋಗುವ ವಿಚಾರ ಮುಂದಿನ ರಾಜಕಾರಣದ ನಡೆಗಳ ಮೇಲೆ ಅವಲಂಭಿತವಾಗಿರುವ ಸಾಧ್ಯತೆ ಇದೆ. 

ಸದ್ಯ ಶಿವಮೊಗ್ಗ ನಗರವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆ ವೇಳೆ ತಮ್ಮನ್ನು ನಂಬಿ ಬಂದವರನ್ನ ಶಕ್ತಿಶಾಲಿಯಾಗಿಸಲು ಮುಂದಾಗಿರುವ ಕೆಎಸ್‌ ಈ‍ಶ್ವರಪ್ಪ ಅದಕ್ಕಾಗಿ ಖುದ್ದು ಶ್ರಮ ಹಾಕಲು ನಿರ್ಧರಿಸಿದ್ದಾರೆ. ಇದೇ ಕಾರಣಕ್ಕೆ ಕೆಎಸ್‌ಇ ಮಂದಿನ ಮಹಾನಗರ ಪಾಲಿಕೆ ಚುನಾವಣೆಯನ್ನು ಎದುರು ನೋಡುತ್ತಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ತಮ್ಮ ರಾಷ್ಟ್ರ ಭಕ್ತ ಬಳಗವನ್ನ ಬಲಪಡಿಸಲು ಹೊರಟಿರುವ ಕೆಎಸ್‌ಇ, ಪ್ರತಿ ವಾರ್ಡ್‌ ಹಾಗೂ ಬೂತ್‌ ಮತ್ತು ತಮ್ಮ ಪ್ರಭಾವಳಿಯಲ್ಲಿರುವ ಎರಿಯಾಗಳಲ್ಲಿ ಜನರ ಸಮಸ್ಯೆಗಳನ್ನು ಖುದ್ದು ಆಲಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. 

ಕೆಎಸ್‌ಇ ಈಶ್ವರಪ್ಪನವರ ನಿವಾಸವೂ ಸೇರಿದಂತೆ ಆಯ್ದ ಸ್ಥಳಗಳಲ್ಲಿ ಈಗಾಗಲೇ ಹಲವು ಸಭೆಗಳು ನಡೆದಿವೆ. ಈ ಪೈಕಿ ಐದು ಪ್ರಮುಖ ಸಭೆಗಳು ಶಿವಮೊಗ್ಗದ ಮುಂದಿನ ರಾಜಕಾರಣಕ್ಕೆ ಸೀಮಿತವಾಗಿದ್ದವು. ತದನಂತರದ ಸಭೆಗಳಲ್ಲಿ ಎಂಎಲ್‌ಸಿ ಚುನಾವಣೆಯ ಚರ್ಚೆಗಳು ನಡೆದಿವೆ. ಮೊದಲ ಸಭೆಯಲ್ಲಿ ತಮ್ಮ ಚುನಾವಣೆಯಲ್ಲಿ ಕೆಲಸ ಮಾಡಿದ್ದ ವಾರ್ಡ್‌ ಮುಖಂಡರನ್ನ ಕರೆಸಿದ್ದ ಕೆಎಸ್‌ಇ ಅವರೊಂದಿಗೆ ಆಪ್ತವಾಗಿ ಮಾತನಾಡಿದ್ದರು. ಅವರುಗಳ ಅಭಿಪ್ರಾಯ ಕೇಳಿ ತಮ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಷ್ಟೆ ಅಲ್ಲದೆ ಮುಂದಿನ ಆಕ್ಷನ್‌ ಪ್ಲಾನ್‌ಗೆ ರೂಪುರೇಷೆ ತಯಾರುಮಾಡಿದ್ದರು..

ಮೊದಲ ಸಭೆಯಲ್ಲಿ ಹೆಚ್ಚು ಮಾತನಾಡದ ಕೆಎಸ್‌ಇ, ಆನಂತರ ಎರಡನೇ ಸಭೆಯಲ್ಲಿ ಬೂತ್‌ ಮುಖಂಡರು, ವಾರ್ಡ್‌ ಮುಖಂಡರು ಹಾಗು ಮಾಜಿ ಕಾರ್ಪೋರೇಟರ್‌ಗಳು, ಹಾಗೂ ಆಕಾಂಕ್ಷಿಗಳನ್ನು ಕರೆದಿದ್ದರು. ಅವರೊಂದಿಗೆ ಲೋಕಾರೂಡಿಯಾಗಿ ಮಾತನಾಡಿದ ಕೆಎಸ್‌ಇ ತಾವು ಅವರಂತೆಯೇ ಸಣ್ಣ ಕಾರ್ಯಕರ್ತ ಎನಿಸುವಷ್ಟರ ಮಟ್ಟಿಗೆ ಬೆರೆತಿದ್ದರು. ಊಟೋಪಚಾರದ ಆತಿಥ್ಯದಲ್ಲಿ ನಡೆದಿದ್ದ ಸಭೆಯಲ್ಲಿ ಕೆಎಸ್‌ಇ ಕುಟುಂಬ ಕೂಡ ರಾಷ್ಟ್ರ ಭಕ್ತ ಬಳಗದೊಂದಿಗೆ ಸಹಪಂಕ್ತಿಯಲ್ಲಿ ಊಟ ಮಾಡಿತ್ತು.

ಈ ಮೂಲಕ ಕೆಎಸ್‌ಇ ತಮ್ಮ ಕುಟುಂಬ ಹಾಗೂ ರಾಜಕಾರಣ ಕಾರ್ಯಕರ್ತರಿಂದಲೇ ಎಂಬ ಸಂದೇಶವನ್ನು ಅಲ್ಲಿದ್ದವರೊಳಗೆ ಮೂಡಿಸಿದ್ದರು. ಇನ್ನೂ ಸಭೆಯಲ್ಲಿ ಮಾತನಾಡಿದ್ದ ಈಶ್ವರಪ್ಪ ಮುಂದಿನ ರಾಜಕಾರಣದ ಪಾಲಿಕೆ ಪ್ಲಾನ್‌ ವಿವರಿಸಿ, ಜನರೊಂದಿಗೆ ಬೆರೆಯಿರಿ, ಜನರ ಸಮಸ್ಯೆ ಆಲಿಸಿರಿ, ಜನಾಭಿಪ್ರಾಯ ತಿಳಿಯಿರಿ, ತಿಳಿಸಿರಿ ಎಂದಿದ್ದರು. ಮತದಾರರ ಸಮಸ್ಯೆಗಳನ್ನ ಅರಿತು ಅವರಿಗೆ ಆಗಬೇಕಿರುವ ಕೆಲಸವನ್ನು ಮಾಡಿಸಿಕೊಡುವ ಪ್ರಯತ್ನ ಮಾಡಿ, ಅಗತ್ಯವಿದ್ದರೇ ನನ್ನನ್ನೆ ಸಂಪರ್ಕಿಸಿ ನಾನೇ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಬರುತ್ತೇನೆ ಎಂದಿದ್ದರು. 

ಈ ಎರಡು ಸಭೆಗಳ ಬಳಿಕ ಮುಖಂಡರ ಜೊತೆಗೆ ಒನ್‌ ಟು ಒನ್‌ ಮಾತನಾಡಿದ್ದಾರೆ. ಆ ಬಳಿಕ ಇದಕ್ಕೆ ಪೂರಕವಾಗಿ ಫಾಲೋ ಅಪ್‌ ಸಭೆಯೊಂದನ್ನ ನಡೆಸಿದ್ದಾರೆ. ಹೀಗೆ ಸರಣಿ ಸಭೆಗಳಲ್ಲಿ ಪಾಲ್ಗೊಂಡ ಈಶ್ವರಪ್ಪನವರ ಅಭಿಮಾನಿಗಳು ತಮ್ಮ ಪಡೆಯು ಬಲಗೊ‍ಳ್ಳುತ್ತಿರುವುದನ್ನು ತಮ್ಮನಡುವೆಯೇ ಚರ್ಚಿಸುತ್ತಿದ್ದಾರೆ.

ಇತ್ತ ಬಿಜೆಪಿ ಕಾರ್ಯಕರ್ತರು ಸಹ ಈ‍ಶ್ವರಪ್ಪ ಹಾಗೂ ಅವರ ಬಳಗವನ್ನು ಕುತೂಹಲದಿಂದ ನೋಡುತ್ತಿದ್ದಾರೆ. ಹೀಗೆ ದಿನದಿಂದ ದಿನಕ್ಕೆ ರಾಷ್ಟ್ರ ಭಕ್ತ ಬಳಗ ಮತ್ತು ಕೆಎಸ್‌ ಈ‍ಶ್ವರಪ್ಪನವರ ನಡೆ ಕುತೂಹಲ ಹಾಗೂ ತಂತ್ರಗಾರಿಕೆಯ ಚದುರಂಗದಾಟದಂತಾಗಿ ಕಾಣುತ್ತಿದೆ.

ಅಂತಿಮವಾಗಿ ಕೆಎಸ್‌ ಈಶ್ವರಪ್ಪನವರ ನಡೆಯಲ್ಲಿ ಅವರ ಮುಂದಿನ ಹಾದಿ ಕಾಣುತ್ತಿದೆಯಾದರೂ, ಅವರ ಗುರಿಯ ಸುಳಿವು ಎದುರಾಳಿಗಳಿಗೆ ಅರಿಯಲಾಗುತ್ತಿಲ್ಲ. ಇದಿಷ್ಟು ಇವತ್ತಿನ ವರದಿ,, ಮುಂದಿನ ವರದಿಯಲ್ಲಿ ಕೆಎಸ್‌ಇ ರಾಜಕಾರಣದ ಇನ್ನೊಂದು ಎಕ್ಸ್‌ಕ್ಲ್ಯೂಸಿವ್‌ ವರದಿ ನಿಮ್ಮ ಮುಂದೆ ಇಡುತ್ತೇವೆ 

This article discusses KS Eshwarappa's political activities following the Lok Sabha elections. Despite not being involved in the ongoing MLC elections, Eshwarappa is preparing for future elections by focusing on strengthening his Rashtra Bakta Balaga organization within Shivamogga city limits.