ಮಾಜಿ ಡಿಸಿಎಂ ಕೆ.ಎಸ್​. ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲು

Case registered against Former Deputy CM K.S.Eshwarappa

ಮಾಜಿ ಡಿಸಿಎಂ ಕೆ.ಎಸ್​. ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲು
Andar Bahar card game in Bejjavalli

Shivamogga | Feb 10, 2024 |  ಮಾಜಿ ಡಿಸಿಎಂ ಕೆ.ಎಸ್​. ಈಶ್ವರಪ್ಪ ವಿರುದ್ದ ದಾವಣಗೆರೆಯಲ್ಲಿ ಕೇಸ್ ದಾಖಲಾಗಿದೆ. ಉದ್ರೇಕಕಾರಿ ಭಾಷಣ ಸಂಬಂಧ ದಾವಣಗೆರೆ ಬಡಾವಣೆ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.  

 

ಗುರುವಾರ ದಾವಣಗೆರೆಯಲ್ಲಿ ನಡೆದಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಈಶ್ವರಪ್ಪ ಅವರು 'ಡಿ.ಕೆ. ಸುರೇಶ್, ವಿನಯ್ ಕುಲಕರ್ಣಿ ಅವರಂತಹ ರಾಷ್ಟ್ರದ್ರೋಹಿಗಳು ದೇಶವನ್ನು ಛಿದ್ರ ಮಾಡ್ತೀವಿ ಅಂತಾ ಹೋರಾಡ್ತರಲ್ಲಾ ಅವರಿಗೆ ಗುಂಡಿಕ್ಕಿ ಕೊಲ್ಲೋ ಅಂತಾ ಕಾನೂನು ತನ್ನಿ ಏನ್ ಅನ್ನೋಂಡಿದಿರಾ ದೇಶ ಅಂದ್ರೆ...' ಎಂದು ಹೇಳಿಕೆ ನೀಡಿದ್ದರು. 

 

ಈ ಹೇಳಿಕೆಯನ್ನು ಅವರ ಶಿವಮೊಗ್ಗದಲ್ಲಿ ಸಮರ್ಥನೆ ಮಾಡಿಕೊಂಡಿದ್ದರು. ಅಲ್ಲದೆ ಕೇಸ್ ಹಾಕಿ ಎಂದಿದ್ದರು. ಈ ಸಂಬಂಧ  ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯ ಹನುಮಂತಪ್ಪ ಎಂಬುವರು ನೀಡಿದ ದೂರಿನ ಆಧಾರದಲ್ಲಿ ಈಶ್ವರಪ್ಪ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.