ಮೊಬೈಲ್‌ನಲ್ಲಿ ಹೆಚ್ಚಾದ ಮಾತು | ಬೈದು ಗದರಿದ ತಾಯಿ | ಆತ್ಮಹತ್ಯೆ ಮಾಡಿಕೊಂಡ ಮಗಳು

A young woman in Balehonnur committed suicide after her mother scolded her for spending too much time on her mobile phone.

ಮೊಬೈಲ್‌ನಲ್ಲಿ ಹೆಚ್ಚಾದ ಮಾತು |  ಬೈದು ಗದರಿದ ತಾಯಿ | ಆತ್ಮಹತ್ಯೆ ಮಾಡಿಕೊಂಡ ಮಗಳು
Balehonnur , mobile phone.

SHIVAMOGGA | MALENADUTODAY NEWS | May 25, 2024  ಮಲೆನಾಡು ಟುಡೆ 

ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಗ್ಗೆ ವರದಿಯಾಗಿದೆ. ಮನೆಯವರು ಮೊಬೈಲ್‌ ನಲ್ಲಿ ಮುಳುಗಬೇಡ ಎಂದು ಬುದ್ದಿ ಹೇಳಿದ್ದಕ್ಕೆ ಯುವತಿ ಹೀಗೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. 

ಮೊಬೈಲ್‌ ಫೋನ್‌ನಲ್ಲಿ ಸದಾ ಮಾತನಾಡುತ್ತಿರುವುದಕ್ಕೆ ತಾಯಿಯೊಬ್ಬರು ತಮ್ಮ ಮಗಳಿಗೆ ಬೈದು ಬುದ್ದಿವಾದ ಹೇಳಿದ್ದರು. ಸಹಜವಾಗಿ ತಾಯಿಂದಿರು ಹೀಗೆ ಮಕ್ಕಳಿಗೆ ಹೇಳುವುದು ನಿಗಾ ಇಡುವುದು ಸಾಮಾನ್ಯ. ಇದೇ ವಿಚಾರಕ್ಕೆ  ಬಂಡಿಹೊಳೆ ಗ್ರಾಮ ದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ಈಕೆ  ಕೆಲ ದಿನಗಳಿಂದ ಯಾರೋ ಯುವಕನೊಂದಿಗೆ ಫೋನಿನಲ್ಲಿ ಮಾತನಾಡತಿದ್ದುರ ಬಗ್ಗೆ  ತಾಯಿಗೆ ವಿಚಾರ ಗೊತ್ತಾಗಿ  ಗದರಿಸಿ ಬುದ್ದಿ ಹೇಳಿದ್ದರಂತೆ. ಇದರಿಂದ ಯುವತಿ ಬೇಸರಗೊಂಡಿದ್ದಾಳೆ. ಅಲ್ಲದೆ ತಾಯಿ ಕೆಲಸಕ್ಕೆ ಹೋಗಿದ್ದಾಗ,  ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೂಲಿ ಕೆಲಸದಿಂದ ವಾಪಸ್‌ ಬಂದ ವೇಳೆ ತಾಯಿಗೆ ವಿಷಯ ಗೊತ್ತಾಗಿದೆ. ಈ ಸಂಬಂಧ  ಬಾಳೆ ಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

A young woman in Balehonnur committed suicide after her mother scolded her for spending too much time on her mobile phone.